Site icon Vistara News

Koppala News: ನೀರಾವರಿ ಸೌಲಭ್ಯಕ್ಕೆ ಆಗ್ರಹ; ಅಂಜನಾದ್ರಿ ಬೆಟ್ಟದಿಂದ ದೆಹಲಿವರೆಗೆ ಪಾದಯಾತ್ರೆ

Farmers started padayatra from Anjanadri Hill to Delhi

ಗಂಗಾವತಿ: ಕೊಪ್ಪಳ ಜಿಲ್ಲೆಯ ವಿವಿಧ ತಾಲೂಕುಗಳಿಗೆ ನೀರಾವರಿ ಸೌಲಭ್ಯ (irrigation facility) ಕಲ್ಪಿಸುವಂತೆ ಆಗ್ರಹಿಸಿ, ಅಂಜನಾದ್ರಿ ಬೆಟ್ಟದಿಂದ ಹೊಸ ದೆಹಲಿವರೆಗೆ (Anjanadri Hill to New Delhi) ಬುಧವಾರ ಕುಷ್ಟಗಿ ತಾಲೂಕಿನ ಹತ್ತು ಜನ ರೈತರು (Farmers) ಪಾದಯಾತ್ರೆ ಹಮ್ಮಿಕೊಂಡಿದ್ದಾರೆ.

ತಾಲೂಕಿನ ಚಿಕ್ಕರಾಂಪೂರದಲ್ಲಿರುವ ಪ್ರಸಿದ್ಧ ಅಂಜನಾದ್ರಿ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಪಾದಯಾತ್ರೆಗೆ ಚಾಲನೆ ನೀಡಿದ ಕುಷ್ಟಗಿ ತಾಲೂಕಿನ ರೈತರು ಪಾದಯಾತ್ರೆ ಆರಂಭಿಸಿದರು.

ಅಗತ್ಯ ವಸ್ತುಗಳನ್ನು ಸಾಗಿಸಲು ಒಂದು ಟಂಟಂ ವಾಹನದೊಂದಿಗೆ ಪಾದಯಾತ್ರೆ ಆರಂಭಿಸಿರುವ ರೈತರು, ದಿನಕ್ಕೆ 25ರಿಂದ 30 ಕಿ.ಮೀ. ಪಾದಯಾತ್ರೆ ನಡೆಸಿ ಬಳಿಕ ರಸ್ತೆಯ ಬದಿ ಸುರಕ್ಷಿತ ಸ್ಥಳದಲ್ಲಿ ತಂಗಿ ಮತ್ತೆ ಪ್ರಯಾಣ ಮುಂದುವರೆಸಲಿದ್ದಾರೆ.

ಇದನ್ನೂ ಓದಿ: Uttara Kannada News: ರವೀಂದ್ರನಾಥ ಟ್ಯಾಗೋರ್ ಬೀಚ್‌ನಲ್ಲಿ ಸ್ವಚ್ಛತೆ ಮಾಯ; ಬರೀ ತ್ಯಾಜ್ಯ

ಸುಮಾರು ಎರಡೂವರೆ ತಿಂಗಳುಗಳ ಕಾಲ ನಡೆಯಲಿರುವ ಈ ಪಾದಯಾತ್ರೆಯು ನಡೆಯಲಿದ್ದು, ದೆಹಲಿಗೆ ತಲುಪಿದ ಬಳಿಕ ಸಂಸತ್‌ ಭವನಕ್ಕೆ ತೆರಳಿ ತಮ್ಮ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಲಿದ್ದಾರೆ.

ಕುಷ್ಟಗಿ, ಯಲಬುರ್ಗಾ, ಕನಕಗಿರಿ ಸೇರಿದಂತೆ ಕೊಪ್ಪಳ ಜಿಲ್ಲೆ ಮತ್ತು ಗದಗ್‌ ಜಿಲ್ಲೆಯ ಗಜೇಂದ್ರಗಡ, ರೋಣಾ ತಾಲೂಕಿನ ಭೂಮಿಗೆ ನೀರಾವರಿ ಸೌಲಭ್ಯ ಕಲ್ಪಿಸಲು ಒತ್ತಾಯಿಸಿ, ಈ ಪಾದಯಾತ್ರೆ ಹಮ್ಮಿಕೊಂಡಿರುವುದಾಗಿ ಸಂಚಾಲಕ ಅಬ್ದುಲ್‌ ರಜಾಕ್ ತಿಳಿಸಿದ್ದಾರೆ.

ಇದನ್ನೂ ಓದಿ: Vijayanagara News: ಜಾನಪದ ಕಲೆ ಮೂಲಕ ಆರೋಗ್ಯ ಸೇವೆಗಳ ಅರಿವು ಮೂಡಿಸಲು ಶ್ರಮಿಸಿ: ಡಿಸಿ ದಿವಾಕರ್

ಪಾದಯಾತ್ರೆಯಲ್ಲಿ ಯಲಬುರ್ಗಾ ಹಾಗೂ ಕುಷ್ಟಗಿ ತಾಲೂಕಿನ ಯಮನೂರ್, ಶಿವಾನಂದ, ಬಸವರಾಜ, ಮುಕ್ತುಂಸಾಬ್‌, ಖಾಜೇಸಾಬ್‌, ಮುರ್ತುಜಸಾಬ್‌, ಅಲ್ಲಾಸಾಬ್, ನಭೀಸಾಬ್ ಪಾಲ್ಗೊಂಡಿದ್ದರು.

Exit mobile version