ಗಂಗಾವತಿ: ಬಿಸಿಯೂಟ (Midday meals) ಸೇವಿಸಿದ ಬಳಿಕ 30ಕ್ಕೂ ಹೆಚ್ಚು ಮಕ್ಕಳು (Food Poison) ಅಸ್ವಸ್ಥಗೊಂಡಿದ್ದಾರೆ. ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಸಂಗಾಪುರ ಗ್ರಾಮದಲ್ಲಿ ಘಟನೆ ನಡೆದಿದೆ. ಅಸ್ವಸ್ಥಗೊಂಡಿದ್ದ ಮಕ್ಕಳನ್ನು ಸ್ಥಳೀಯ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಧ್ಯಾಹ್ನದ ಬಿಸಿಯೂಟ ಸೇವಿಸಿದ 1 ರಿಂದ 5 ತರಗತಿಯ 32 ಮಕ್ಕಳಲ್ಲಿ ವಾಂತಿ, ತಲೆನೋವು ಕಾಣಿಸಿಕೊಂಡಿದೆ. ಒಬ್ಬರ ನಂತರ ಒಬ್ಬರು ಅಸ್ವಸ್ಥಗೊಂಡಿದ್ದು, ಎಲ್ಲರನ್ನೂ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಆಸ್ಪತ್ರೆಗೆ ಡಿಎಚ್ಓ ಡಾ. ಲಿಂಗರಾಜ, ಉಪವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ತಹಸೀಲ್ದಾರ ನಾಗರಾಜ ಭೇಟಿ ನೀಡಿ ಮಕ್ಕಳ ಆರೋಗ್ಯ ವಿಚಾರಿಸಿದ್ದಾರೆ. ಘಟನೆ ಕುರಿತು ಶಾಲೆಯ ಶಿಕ್ಷಕರಿಂದ ಮಾಹಿತಿಯನ್ನು ಪಡೆಯುತ್ತಿದ್ದಾರೆ.
ಇದನ್ನೂ ಓದಿ: Assault Case : ವ್ಯಕ್ತಿಯನ್ನು ನೆಲಕ್ಕೆ ಕೆಡವಿ ರಾಡ್‌ನಿಂದ ಹಲ್ಲೆ; ಮಹಿಳೆಗೆ ಹಿಗ್ಗಾಮುಗ್ಗಾ ಥಳಿಸಿದ ಅಕ್ಕ-ತಮ್ಮ
Murder Case: ಹೆಂಡತಿ ಮಕ್ಕಳನ್ನು ಕೊಂದು ಮೂರು ದಿನ ಶವಗಳೊಂದಿಗೇ ಇದ್ದ!
ಲಕ್ನೋ: ಹೆಂಡತಿ ಮತ್ತು ಇಬ್ಬರು ಮಕ್ಕಳನ್ನು ಬರ್ಬರವಾಗಿ ಕೊಂದ ವ್ಯಕ್ತಿಯೊಬ್ಬ ಆ ಶವಗಳೊಂದಿಗೆ ಮೂರು ರಾತ್ರಿ ಗಳನ್ನು ಕಳೆದಿರುವ ಭಯಾನಕ ಘಟನೆ ಉತ್ತರಪ್ರದೇಶದ (uttarpradesh) ಲಕ್ನೋದಲ್ಲಿ (Lucknow ) ನಡೆದಿದೆ.
ಲಕ್ನೋದ ಬಿಜ್ನೋರ್‌ನ (Bijnor) ಸರವಣನಗರ ಪ್ರದೇಶದಲ್ಲಿ 32 ವರ್ಷದ ರಾಮ್ ಲಗಾನ್ ಎಂಬಾತ ತನ್ನ ಪತ್ನಿ ಮತ್ತು ಮಕ್ಕಳನ್ನು ಕೊಂದಿದ್ದಾನೆ. ಬಳಿಕ ಅವರ ಶವಗಳೊಂದಿಗೆ ಮೂರು ದಿನಗಳನ್ನು ಕಳೆದಿದ್ದಾನೆ.
ವಿವಾಹೇತರ ಸಂಬಂಧ ಶಂಕೆ
ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದ ರಾಮ್ ಲಗಾನ್‌ಗೆ ಪತ್ನಿ ವಿವಾಹೇತರ ಸಂಬಂಧ ಹೊಂದಿದ್ದಾಳೆ ಎಂಬ ಶಂಕೆ ಉಂಟಾಗಿತ್ತು. ಹೀಗಾಗಿ ರಾಮ್ ಲಗಾನ್ ತನ್ನ ಪತ್ನಿ ಜ್ಯೋತಿ (30), ಮಕ್ಕಳಾದ ಪಾಯಲ್ (6) ಮತ್ತು ಆನಂದ್ (3) ಎಂಬವರನ್ನು ಕೊಂದು ಹಾಕಿದ್ದಾನೆ. ಮಕ್ಕಳ ಎದುರೇ ಪತ್ನಿ ಜ್ಯೋತಿಯನ್ನು ದುಪ್ಪಟ್ಟಾದಿಂದ ಕತ್ತು ಹಿಸುಕಿ ಕೊಂದ ರಾಮ್ ಲಗಾನ್ ಬಳಿಕ ಇಬ್ಬರು ಮಕ್ಕಳನ್ನೂ ಹತ್ಯೆ ಮಾಡಿದ್ದಾನೆ. ಬಳಿಕ ಮರುದಿನ ಏನೂ ನಡೆದೇ ಇಲ್ಲ ಎನ್ನುವಂತೆ ಕೆಲಸಕ್ಕೆ ಹೋಗಿ ರಾತ್ರಿ ಮನೆಗೆ ಮರಳಿದ್ದಾನೆ.
ರಾಮ್ ಲಗಾನ್ ಮತ್ತು ಜ್ಯೋತಿಗೆ ಮದುವೆಯಾಗಿ ಏಳು ವರ್ಷಗಳಾಗಿತ್ತು. ಇತ್ತೀಚೆಗೆ ಪತ್ನಿ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ಶಂಕಿಸಿ ಪದೇಪದೇ ಆಕೆ ಫೋನ್ ನಲ್ಲಿ ಮಾತನಾಡುವಾಗ ಕಿವಿಕೊಡುತ್ತಿದ್ದ. ಇದರಿಂದ ಆಗಾಗ ಇಬ್ಬರ ನಡುವೆ ಜಗಳ ಉಂಟಾಗುತ್ತಿತ್ತು. ಮಾರ್ಚ್ 28ರ ರಾತ್ರಿಯೂ ಜಗಳವಾಗಿದ್ದು, ಬಳಿಕ ಆಕೆಯನ್ನು ಹತ್ಯೆ ಮಾಡಿದ್ದ. ಎಂದು ಪೊಲೀಸ್ ಉಪ ಆಯುಕ್ತ (ದಕ್ಷಿಣ) ಟಿ. ಎಸ್. ಸಿಂಗ್ ತಿಳಿಸಿದ್ದಾರೆ.
ಗೋಣಿ ಚೀಲದಲ್ಲಿತ್ತು ಮೂವರ ಶವ
ಅವರ ಮನೆಯಿಂದ ಕೆಟ್ಟ ವಾಸನೆ ಬರುತ್ತಿರುವುದನ್ನು ಗಮನಿಸಿ ಮನೆಯ ಮಾಲೀಕ ಬಂದು ನೋಡಿದಾಗ ಮನೆಯ ಬಾಗಿಲಿಗೆ ಬೀಗ ಹಾಕಿರಲಿಲ್ಲ. ಹೀಗಾಗಿ ಒಳಗೆ ಹೋಗಿ ನೋಡಿದಾಗ ಮೂವರ ಶವಗಳನ್ನು ಗೋಣಿಚೀಲದಲ್ಲಿ ತುಂಬಿರುವುದು ಕಂಡು ಬಂದಿತ್ತು. ಅವರು ಪೊಲೀಸರಿಗೆ ಮಾಹಿತಿ ನೀಡಿದ್ದರು.
ಹೆಚ್ಚು ಜನವಸತಿ ಪ್ರದೇಶದಲ್ಲಿ ಇದ್ದುದರಿಂದ ರಾಮ್ ಲಗಾನ್ ಗೆ ಶವಗಳನ್ನು ವಿಲೇವಾರಿ ಮಾಡಲು ಸಾಧ್ಯವಾಗಲಿಲ್ಲ. ನೆರೆಹೊರೆಯವರು ಹೆಂಡತಿ, ಮಕ್ಕಳು ಎಲ್ಲಿ ಎಂದು ಕೇಳಿದಾಗ ಅವರು ಹೋಳಿ ಆಚರಿಸಲು ಸಂಬಂಧಿಕರ ಮನೆಗೆ ಹೋಗಿದ್ದಾರೆ ಎಂದು ಹೇಳಿದ್ದಾನೆ ಎನ್ನಲಾಗಿದೆ.
ತಪ್ಪೊಪ್ಪಿಕೊಂಡ ಆರೋಪಿ
ಈ ಕುರಿತು ಪ್ರಕರಣ ದಾಖಲಿಸಲಾಗಿದ್ದು, ರಾಮ್ ಲಗಾನ್ ನನ್ನು ಪೊಲೀಸರು ಬಂಧಿಸಿದ್ದಾರೆ. ಆತ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ