Site icon Vistara News

Koppala News: ಕಿಷ್ಕಿಂಧೆಯಿಂದ ಅಯೋಧ್ಯೆಗೆ ರೈಲು ಸೇವೆಗೆ ಒತ್ತಾಯ

Forced to provide train service from Kishkindhe to Ayodhya

ಗಂಗಾವತಿ: ಅಯೋಧ್ಯೆಯಲ್ಲಿ ಇದೇ ಜ.22ರಂದು ಶ್ರೀರಾಮ ಮಂದಿರ (Ayodhya Ram Mandir) ಲೋಕಾರ್ಪಣೆಯಾಗುತ್ತಿರುವ ಹಿನ್ನಲೆಯಲ್ಲಿ ಗಂಗಾವತಿ ಸೇರಿದಂತೆ ಸುತ್ತಲಿನ ಜನರು ಹೋಗಿ ಬರಲು ಅನುಕೂಲವಾಗುವಂತೆ ರೈಲ್ವೆ ಸೇವೆ ನೀಡಬೇಕು ಎಂದು ಸ್ಥಳೀಯ ವಿವಿಧ ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಒತ್ತಾಯಿಸಿದ್ದಾರೆ.

ಈ ಕುರಿತು ಬಿಜೆಪಿಯ ಹಿರಿಯ ಮುಖಂಡ, ಮಾಜಿ ಶಾಸಕ ಪರಣ್ಣ ಮುನವಳ್ಳಿ ಅವರಿಗೆ ಮನವಿ ಸಲ್ಲಿಸಿದ ಸಂಘ-ಸಂಸ್ಥೆಗಳ ಪ್ರತಿನಿಧಿಗಳು, ಸಾರ್ವಜನಿಕ ಬೇಡಿಕೆಯನ್ನು ಕೊಪ್ಪಳ ಸಂಸದ ಕರಡಿ ಸಂಗಣ್ಣ ಅವರ ಮೂಲಕ ಕೇಂದ್ರ ಸರ್ಕಾರಕ್ಕೆ ತಲುಪಿಸಿ, ವಿಶೇಷ ರೈಲು ಸೇವೆಗೆ ಒತ್ತಡ ಹಾಕುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮಕ್ಕಳ ತಜ್ಞ ವೈದ್ಯ ಅಮರೇಶ ಪಾಟೀಲ್, ಭಾರತೀಯರ ಬಹುದೊಡ್ಡ ಕನಸು ರಾಮ ಮಂದಿರ ಲೋಕಾರ್ಪಣೆ ಮೂಲಕ ನನಸಾಗುತ್ತಿದೆ. ಈ ಭಾಗದ ಜನರು ಅಯೋಧ್ಯೆಗೆ ತೆರಳಿ ರಾಮನ ದರ್ಶನ ಮಾಡಲು ಗಂಗಾವತಿ-ಅಯೋಧ್ಯೆ ಮಧ್ಯೆ ವಿಶೇಷ ರೈಲು ಸಂಚಾರ ಆರಂಭಿಸಬೇಕು.

ಇದನ್ನೂ ಓದಿ: Koppala News: ಶ್ರೀರಾಮ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಹನುಮಾನ್ ತಾಂಡವ್ ಮಂತ್ರ ಪಠಣ

ಇದರಿಂದ ಈ ಭಾಗದ ಜನರಿಗೆ ಅಯೋಧ್ಯೆಗೆ ತೆರಳಿ ರಾಮನ ದರ್ಶನ ಮಾಡಲು ಮತ್ತು ಉತ್ತರ ಭಾರತದ ನಾನಾ ರಾಜ್ಯದ ಜನ, ಹನುಮನ ಜನ್ಮಸ್ಥಳ ಕಿಷ್ಕಿಂಧೆಗೆ ನೇರವಾಗಿ ಬಂದು ಹೋಗಲು ಅನುಕೂಲ ಕಲ್ಪಿಸಿದಂತಾಗುತ್ತದೆ ಎಂದು ತಿಳಿಸಿದರು.

ಉದ್ಯಮಿ ಆನಂದ್ ಅಕ್ಕಿ ಮಾತನಾಡಿ, ಗಂಗಾವತಿ-ಅಯೋಧ್ಯೆ ಮಧ್ಯೆ ರೈಲು ಸೇವೆ ಆರಂಭಿಸಿದರೆ ಅದಕ್ಕೆ ಕಿಷ್ಕಿಂಧಾ ಎಕ್ಸ್‌ಪ್ರೆಸ್ ಎಂದು ಹೆಸರಿಡಬೇಕು. ಈ ವಿಶೇಷ ರೈಲು ಸೇವೆ ಆರಂಭವಾದರೆ ಗಂಗಾವತಿ ಜನ ನೇರವಾಗಿ ಉತ್ತರ ಭಾರತದೊಂದಿಗೆ ಸಂಪರ್ಕ ಸಾಧ್ಯವಾಗಲಿದೆ ಎಂದರು.

ಇದನ್ನೂ ಓದಿ: BMTC Bus: ಮದುವೆ, ಟೂರ್‌ಗೆ ಸಿಗಲಿದೆ ಬಿಎಂಟಿಸಿ ಬಸ್; ಯಾವ ಬಸ್‌ಗೆ ಎಷ್ಟು ಬಾಡಿಗೆ?

ಇದಕ್ಕೆ ಪ್ರತಿಕ್ರಿಯೆ ನೀಡಿದ ಮಾಜಿ ಶಾಸಕ ಪರಣ್ಣ ಮುನವಳ್ಳಿ, ಈಗಾಗಲೆ ಈ ಬೇಡಿಕೆ ಸಂಸದ ಕರಡಿ ಸಂಗಣ್ಣ ಅವರ ಮೂಲಕ ಕೇಂದ್ರದ ರೈಲ್ವೆ ಸಚಿವರಿಗೆ ಮನವಿ ಸಲ್ಲಿಸಲಾಗಿದೆ. ಸಚಿವರಿಂದಲೂ ಸಕರಾತ್ಮಕ ಸ್ಪಂದನೆ ಸಿಕ್ಕಿದೆ. ತಕ್ಷಣಕ್ಕೆ ಸೇವೆ ಆರಂಭವಾಗದೇ ಹೊದರೂ ಒಂದೆರಡು ತಿಂಗಳಲ್ಲಿ ರೈಲು ಸೇವೆ ಆರಂಭವಾಗಬಹುದು ಎಂದು ತಿಳಿಸಿದ್ದಾರೆ.

Exit mobile version