ಕೊಪ್ಪಳ : ತಾಲೂಕಿನ ಹಳೆಲಿಂಗಾಪುರ ಗ್ರಾಮದಲ್ಲಿ (Koppal News) ನವಜಾತ ಹೆಣ್ಣು ಶಿಶು ಶುಕ್ರವಾರ ರಾತ್ರಿ (ಸೆ.17) ಪತ್ತೆಯಾಗಿದೆ. ಗ್ರಾಮಸ್ಥರು ಹಾಗೂ 108 ಸಿಬ್ಬಂದಿ ಶಿಶುವನ್ನು ಆಸ್ಪತ್ರೆಗೆ ಸೇರಿಸಿದ್ದಾರೆ.
ಹಳೆಲಿಂಗಾಪುರ ಗ್ರಾಮದ ಬಳಿಯ ಕಾಲುವೆ ಪಕ್ಕದಲ್ಲಿ ಶಿಶುವನ್ನು ಅಪರಿಚಿತರು ಬಿಟ್ಟು ಹೋಗಿದ್ದಾರೆ ಎನ್ನಲಾಗಿದೆ. ಸ್ಥಳೀಯರು ಗಮನಿಸಿ 108 ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಮಗುವಿಗೆ ಆಕ್ಸಿಜನ್ ಹಾಕಿ 108 ಸಿಬ್ಬಂದಿ ಜಿಲ್ಲಾಸ್ಪತ್ರೆಗೆ ಸೇರಿಸಿದ್ದಾರೆ. ಶಿಶುವಿನ ಆರೋಗ್ಯ ಸ್ಥಿರವಾಗಿದೆ.
ಇದನ್ನೂ ಓದಿ | ಕದ್ದ ಮಗುವನ್ನು ಹಿಂದಿರುಗಿಸಿದ ಮಹಿಳೆ: 20 ದಿನದ ಬಳಿಕ ಪತ್ತೆಯಾದ ನವಜಾತ ಶಿಶು