ಗಂಗಾವತಿ: ನೀರಾವರಿ ಪ್ರದೇಶಗಳಾದ ಗಂಗಾವತಿ (Gangavathi) ಮತ್ತು ಕಾರಟಗಿ (Karatagi) ತಾಲೂಕಿನಲ್ಲಿ ಬೆಳೆದಿದ್ದ ಅಪಾರ ಪ್ರಮಾಣದ ಭತ್ತದ ಬೆಳೆ (Paddy Crop) ಅಕಾಲಿಕ ಮಳೆಯಿಂದಾಗಿ ಹಾನಿಗೀಡಾಗಿದ್ದು, ಕೂಡಲೆ ರಾಜ್ಯ ಸರ್ಕಾರ (State Government) ನೂರು ಕೋಟಿ ರೂಪಾಯಿ ಪರಿಹಾರ ಬಿಡುಗಡೆ ಮಾಡಬೇಕು ಎಂದು ಸಂಸದ ಕರಡಿ ಸಂಗಣ್ಣ ಒತ್ತಾಯಿಸಿದ್ದಾರೆ.
ಶುಕ್ರವಾರ ಗಂಗಾವತಿ ಮತ್ತು ಕನಕಗಿರಿ ವಿಧಾನಸಭಾ ಕ್ಷೇತ್ರದ ಗ್ರಾಮೀಣ ಭಾಗದಲ್ಲಿ ಸಂಚರಿಸಿ ಮಳೆ-ಗಾಳಿಗೆ ಹಾನಿಗೀಡಾದ ಭತ್ತದ ಬೆಳೆಯ ಹೊಲ-ಗದ್ದೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ರೈತರೊಂದಿಗೆ ಚರ್ಚಿಸಿ ಹಾನಿಯ ಪ್ರಮಾಣ ತಿಳಿದುಕೊಂಡರು.
ಇದನ್ನೂ ಓದಿ: Karnataka Weather : ರಾಜ್ಯದಲ್ಲಿ ತಗ್ಗಿದ ಮಳೆ; ಏರಲಿದೆ ಕನಿಷ್ಠ ತಾಪಮಾನ
ಈ ಸಂದರ್ಭದಲ್ಲಿ ಮಾತನಾಡಿದ ಸಂಸದ ಕರಡಿ ಸಂಗಣ್ಣ, ಕೇವಲ ಹತ್ತು ದಿನಗಳು ಬಿಟ್ಟಿದ್ದರೆ ಭತ್ತದ ಬೆಳೆ ಕಟಾವು ಮಾಡಲಾಗುತ್ತಿತ್ತು. ಸಂಫೂರ್ಣ ಬೆಳೆದು ನಿಂತಿದ್ದ ಭತ್ತ ಮಳೆ-ಗಾಳಿಗೆ ಹಾನಿಯಾಗಿದೆ. ಶೇ.90 ರಷ್ಟು ಹಾನಿಯಾಗಿದ್ದು ಬೆಳೆ ಸಂಪೂರ್ಣ ನಾಶವಾಗಿದೆ.
ಹೀಗಾಗಿ ಕೂಡಲೆ ರಾಜ್ಯ ಸರ್ಕಾರ ರೈತರ ನೆರವಿಗೆ ಧಾವಿಸಬೇಕು, ತಕ್ಷಣ ನೂರು ಕೋಟಿ ರೂಪಾಯಿ ಪರಿಹಾರ ಒದಗಿಸಬೇಕು. ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಸ್ಥಳಕ್ಕೆ ಭೇಟಿ ನೀಡಿ, ಸರ್ಕಾರಕ್ಕೆ ವರದಿ ನೀಡಿ, ತಕ್ಷಣ ಪರಿಹಾರ ಬಿಡುಗಡೆಗೆ ಯತ್ನಿಸಬೇಕು ಎಂದು ಒತ್ತಾಯಿಸಿದರು.
ಇದನ್ನೂ ಓದಿ: RCB : ಕ್ರಿಕೆಟ್ಗೆ ಗುಡ್ ಬೈ ಹೇಳಿದ ಆರ್ಸಿಬಿ ತಂಡದ ಮಾಜಿ ಬ್ಯಾಟರ್
ಸದ್ಯಕ್ಕೆ ಕೃಷಿ ಮತ್ತು ಕಂದಾಯ ಇಲಾಖೆ ನಡೆಸಿದ ಜಂಟಿ ಸಮೀಕ್ಷೆಯ ಪ್ರಾಥಮಿಕ ವರದಿ ಪ್ರಕಾರ 3543 ಹೆಕ್ಟೇರು ಪ್ರದೇಶದಲ್ಲಿನ ಭತ್ತ ಹಾನಿಯಾಗಿದೆ ಎಂಬ ಮಾಹಿತಿ ಲಭಿಸಿದೆ. ಇನ್ನು ಸಮೀಕ್ಷೆ ನಡೆಯುತ್ತಿದ್ದು ಜಿಪಿಎಸ್ ನಡೆಯುತ್ತಿದೆ. ಬಳಿಕ ನಿಖರ ಮಾಹಿತಿ ಸಿಗಲಿದೆ ಎಂದು ತಿಳಿಸಿದ್ದಾರೆ.