Site icon Vistara News

Koppala News: ನಿತ್ಯವೂ ಯೋಗಾಭ್ಯಾಸ ರೂಢಿಸಿಕೊಂಡರೆ ಬದುಕು ಆರೋಗ್ಯಮಯ: ವೈ.ವನಜಾ

10th International Yoga Day

ಕಾರಟಗಿ: ಪ್ರತಿದಿನ ಯೋಗಾಭ್ಯಾಸ ಮಾಡುವುದರಿಂದ ಮನಸ್ಸು ಮತ್ತು ದೇಹ ಉತ್ಸಾಹದಿಂದ ಕೂಡಿರುತ್ತದೆ, ಆಯಸ್ಸು ವೃದ್ಧಿಯಾಗಲಿದೆ ಎಂದು ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕಿ ವೈ. ವನಜಾ (Koppala News) ಹೇಳಿದರು.

ತಾಲೂಕಿನ ಬೇವಿನಹಾಳ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನತಾ ಕ್ಯಾಂಪ್ ನಲ್ಲಿನ ಅಮೃತ ಸರೋವರ ಅಂಗಳದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ 10ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಇದನ್ನೂ ಓದಿ: International Yoga Day 2024: ಸಶಸ್ತ್ರ ಪಡೆಗಳಿಂದ ಮೈಕೊರೆಯುವ ಹಿಮ ಪರ್ವತದಲ್ಲೂ ಯೋಗ ದಿನಾಚರಣೆ; ವಿಡಿಯೊ ನೋಡಿ

ಭಾರತೀಯ ಪರಂಪರೆಯ ಯೋಗವನ್ನು ಇಂದು ವಿಶ್ವದ್ಯಾದಂತ ಆಚರಣೆ ಮಾಡುತ್ತಿರುವುದು ನಮ್ಮೆಲ್ಲರ ಹೆಮ್ಮೆ. ನಮ್ಮ ಹಿರಿಯರು ದೈನಂದಿನ ಜೀವನದಲ್ಲಿ ಯೋಗಾಭ್ಯಾಸವನ್ನು ಅಳವಡಿಸಿಕೊಂಡಿದ್ದರು. ಅದರಂತೆ ನಾವೆಲ್ಲರೂ ಪ್ರತಿನಿತ್ಯದ ಕೆಲಸದ ಜತೆಗೆ ಯೋಗಾಭ್ಯಾಸ ಮಾಡುವುದು ರೂಢಿಸಿಕೊಳ್ಳಬೇಕು. ಯೋಗದಿಂದ ಮನಸ್ಸಿಗೆ ನೆಮ್ಮದಿ, ಉತ್ತಮ ಆರೋಗ್ಯಕ್ಕೆ ಸಹಕಾರ ಎಂದು ತಿಳಿಸಿದರು.

ಯೋಗ ತರಬೇತುದಾರ ವೆಂಕಟೇಶ ಕೆಂಚನಗುಡ್ಡ ಮಾತನಾಡಿ, ಯೋಗಾಭ್ಯಾಸಕ್ಕೆ ತನ್ನದೇಯಾದ ಶಕ್ತಿ ಇದೆ, ನೆಮ್ಮದಿ ಜೀವನ ಸಾಗಿಸಲು ಯೋಗ ಅತ್ಯಾವಶ್ಯಕ. ಯೋಗ ಮಾಡುವುದರಿಂದ ಆಯಸ್ಸು ವೃದ್ಧಿಯಾಗುತ್ತದೆ ಎಂದರು.

ನಂತರ ವಿವಿಧ ಬಗೆಯ ಯೋಗಸಾನಗಳನ್ನು ತಿಳಿಸಿಕೊಡುವ ಮೂಲಕ ಪ್ರದರ್ಶಿಸಿದರು.

ಇದನ್ನೂ ಓದಿ: Humanity: ಬಾಲಕಿಯ ಚಿನ್ನದ ಸರ ಮರಳಿಸಿ ಮಾನವೀಯತೆ ಮೆರೆದ ಬಸ್ ಚಾಲಕ

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ರವಿಕುಮಾರ, ಮಂಜುನಾಥ ಕೋಟೆ, ಯಮನೂರಪ್ಪ ಕಂಬಳಿಹಾಳ, ನಾಗರಾಜ್ ನಾಗನಕಲ್, ಹೂವಪ್ಪ ಪನ್ನಾಪೂರ, ದೊಡ್ಡಪ್ಪ ಬೇವಿನಹಾಳ, ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಹಿರೇಮಠ, ಗ್ರಾಮ ಲೆಕ್ಕಾಧಿಕಾರಿ ಗಂಗಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.

Exit mobile version