ಗಂಗಾವತಿ: ಪ್ಲಾಸ್ಟಿಕ್ (Plastic) ಬಳಕೆಯಿಂದ ಆಗುತ್ತಿರುವ ದುಷ್ಪರಿಣಾಮಗಳ ಕುರಿತು ಜಾಗೃತಿ (Awareness) ಮೂಡಿಸಲು ಪ್ಲಾಸ್ಟಿಕ್‌ಗೆ ಪರ್ಯಾಯವಾಗಿ ಸ್ಟೀಲ್, ಹಿತ್ತಾಳೆ, ರಾಗಿಯಂತ ಲೋಹದ ಪಾತ್ರೆಗಳನ್ನು ಬಳಸುವಂತೆ ಪ್ರೇರೇಪಿಸುವ ಬಗ್ಗೆ ವಿನೂತನ ಅಭಿಯಾನವನ್ನು (Campaign) ಗಂಗಾವತಿಯ ಚನ್ನಬಸವ (ಸಿಬಿಎಸ್) ಕಾಲೋನಿಯ ಕೆಲ ಮಹಿಳೆಯರು ಆರಂಭಿಸುತ್ತಿದ್ದಾರೆ.
ಗಂಗಾವತಿ ನಗರದ ಚನ್ನಬಸವ (ಸಿಬಿಎಸ್) ಕಾಲೋನಿಯ ಕೆಲ ಮಹಿಳೆಯರು 2024ರಲ್ಲಿ ಇಡೀ ವರ್ಷ ಪೂರ್ಣ ಪ್ರಮಾಣದಲ್ಲಿ ಪ್ಲಾಸ್ಟಿಕ್ ಬಳಸದಿರಲು ಶಪಥ ಕೈಗೊಂಡಿದ್ದು, ಈ ವಿನೂತನ ಅಭಿಯಾನ ಆರಂಭಿಸಲು ತೀರ್ಮಾನಿಸಿದ್ದಾರೆ.
ಇದನ್ನೂ ಓದಿ: National youth Day : ನಾಳೆ ಪಾವಗಡದಲ್ಲಿ ರಾಷ್ಟ್ರೀಯ ಯುವ ದಿನಾಚರಣೆ; ವಿಸ್ತಾರ ನ್ಯೂಸ್ ವಿಶೇಷ ಕಾರ್ಯಕ್ರಮ
ಸಿಬಿಎಸ್ ಕಾಲೋನಿಯಲ್ಲಿ ಈ ಬಗ್ಗೆ ಮೊದಲ ಹಂತದ ಸಭೆ ನಡೆಸಿದ ಮಹಿಳೆಯರು, ಜನರಲ್ಲಿ ಪ್ಲಾಸ್ಟಿಕ್ ಬಳಕೆ ಗಣನೀಯವಾಗಿ ತಗ್ಗಿಸುವ ನಿಟ್ಟಿನಲ್ಲಿ ಜಾಗೃತಿ ಮೂಡಿಸುವುದು, ಅದಕ್ಕೆ ಅಭಿಯಾನದ ಸ್ವರೂಪ ನೀಡುವ ಬಗ್ಗೆ ಚರ್ಚಿಸಿದರು.
ಪ್ಲಾಸ್ಟಿಕ್ ಗ್ಲಾಸ್, ಪ್ಲೇಟ್, ಸ್ಪೂನ್, ಕಪ್ ಸೇರಿದಂತೆ ಒಮ್ಮೆ ಮಾತ್ರ ಬಳಸಿ ಬಿಸಾಡುವ ವಸ್ತುಗಳ ಬದಲಿಗೆ ತೊಳೆದು ಮರು ಬಳಕೆ ಮಾಡಬಹುದಾದ ಲೋಹದ ಪಾತ್ರೆಗಳನ್ನು ಬಳಸುವಂತೆ ಜನರಲ್ಲಿ ಜಾಗೃತಿ ಮೂಡಿಸುವ ಮತ್ತು ಹೊಸ ವರ್ಷದಲ್ಲಿ ಹೊಸ ಸಂಕಲ್ಪ ಮಾಡುವಂತೆ ಅಭಿಯಾನ ಆರಂಭಿಸುವ ಬಗ್ಗೆ ಮಹಿಳೆಯರು ನಿರ್ಣಯ ಕೈಗೊಂಡರು.
ಇದನ್ನೂ ಓದಿ: Hosanagara News: ಪತಿಯ ಸಾವಿನ ವಿಷಯ ತಿಳಿದು ಪತ್ನಿಗೆ ಹೃದಯಾಘಾತ; ಸಾವಿನಲ್ಲೂ ಒಂದಾದ ವೃದ್ಧ ದಂಪತಿ
ಆರಂಭದಲ್ಲಿ 2024ರಲ್ಲಿ ಇಡೀ ವರ್ಷ ಪ್ಲಾಸ್ಟಿಕ್ ಬಳಕೆ ತಗ್ಗಿಸುವಂತೆ ಜನರನ್ನು ಪ್ರೇರೇಪಿಸಿದರೆ ಅದು ನಿಧಾನವಾಗಿ ಅಭ್ಯಾಸವಾಗಿ ಪ್ಲಾಸ್ಟಿಕ್ ಮೇಲಿನ ಅವಲಂಬನೆ ಕಡಿಮೆಯಾಗುತ್ತದೆ. ಹೀಗಾಗಿ ಜಾಗೃತಿ ಮೂಡಿಸುವ ಕಾರ್ಯ ಹಮ್ಮಿಕೊಳ್ಳಲಾಗುತ್ತಿದೆ ಎಂದು ತಂಡದ ಅವನಿ ಮೂತಾ ತಿಳಿಸಿದ್ದಾರೆ.