Site icon Vistara News

Koppala News: ಅಂಜನಾದ್ರಿ ಆಂಜನೇಯ ಸ್ವಾಮಿ ದೇಗುಲದ ಹುಂಡಿ ಹಣ ಎಣಿಕೆ; 9.29 ಲಕ್ಷ ರೂ. ಸಂಗ್ರಹ

Anjanadri Anjaneya swamy temple hundi money counting

ಗಂಗಾವತಿ: ತಾಲೂಕಿನ ಪ್ರಸಿದ್ಧ ಅಂಜನಾದ್ರಿ ಬೆಟ್ಟದ (Anjanadri Hill) ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಹುಂಡಿ ಎಣಿಕೆ ಕಾರ್ಯ ಬುಧವಾರ ನಡೆದಿದ್ದು, ಒಟ್ಟು 9.29 ಲಕ್ಷ ರೂ ಹುಂಡಿ ಕಾಣಿಕೆ ಹಣ (Koppala News) ಸಂಗ್ರಹವಾಗಿದೆ. ಗಂಗಾವತಿ ಗ್ರೇಡ್-2 ತಹಸೀಲ್ದಾರ್‌ ಮಹಾಂತಗೌಡ ಅವರ ನೇತೃತ್ವದಲ್ಲಿ ಹುಂಡಿ ಎಣಿಕೆ ಕಾರ್ಯ ನಡೆಯಿತು.

ಇದನ್ನೂ ಓದಿ: Karnataka Weather : ಇನ್ನೆರಡು ದಿನ ದಕ್ಷಿಣ ಒಳನಾಡಲ್ಲಿ ಭರ್ಜರಿ ಮಳೆ; ಬೆಂಗಳೂರು ಸಖತ್‌ ಹಾಟ್!

ದೇಗುಲದ ಹುಂಡಿಯಲ್ಲಿ ವಿದೇಶಿ ನಾಣ್ಯಗಳ ಕಂಡು ಬಂದಿದ್ದು, ರಷ್ಯಾ, ಸೌದಿ ಅರೇಬಿಯಾ ಹಾಗೂ ನೇಪಾಳದ ತಲಾ ಒಂದು ನಾಣ್ಯ ಸಿಕ್ಕಿವೆ. ಹುಂಡಿಯಲ್ಲಿ ಒಟ್ಟು 9.29 ಲಕ್ಷ ರೂ ಕಾಣಿಕೆ ಹಣ ಸಂಗ್ರಹವಾಗಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.

ಇದನ್ನೂ ಓದಿ: Sadguru Jaggi Vasudev: ಆರೋಗ್ಯದಲ್ಲಿ ಚೇತರಿಕೆ; ಆಸ್ಪತ್ರೆಯಿಂದ ಸದ್ಗುರು ಜಗ್ಗಿ ವಾಸುದೇವ್‌ ಡಿಸ್‌ಚಾರ್ಜ್‌

ಈ ಸಂದರ್ಭದಲ್ಲಿ ಶಿರಸ್ತೇದಾರ್‌ ಅನಂತ್ ಜೋಷಿ, ನರ್ಮದಾ, ಕೃಷ್ಣವೇಣಿ, ಸುಹಾಸ್‌, ಕಂದಾಯ ನಿರೀಕ್ಷಕ ಮಂಜುನಾಥ ಹಿರೇಮಠ್, ಹಾಲೇಶ ಗುಂಡಿ, ತಹಸೀಲ್ದಾರ್‌ ಕಾರ್ಯಾಲಯದ ಸಿಬ್ಬಂದಿಗಳಾದ ಶ್ರೀಕಂಠ, ಗುರುರಾಜ, ಅನ್ನಪೂರ್ಣ ಸೇರಿದಂತೆ ಇತರರು ಉಪಸ್ಥಿತರಿದ್ದರು.

Exit mobile version