ಗಂಗಾವತಿ: ತಾಲೂಕಿನ ಪ್ರಸಿದ್ಧ ಅಂಜನಾದ್ರಿ ಬೆಟ್ಟದ (Anjanadri Hill) ಆಂಜನೇಯ ಸ್ವಾಮಿ ದೇವಸ್ಥಾನದ ಹುಂಡಿ ಹಣದ ಎಣಿಕೆ ಕಾರ್ಯ ನಡೆಯಿತು. ಒಟ್ಟು 20.36 ಲಕ್ಷ ಮೊತ್ತದ ಹುಂಡಿ ಕಾಣಿಕೆ ಸಂಗ್ರಹವಾಗಿದೆ.
ದೇಗುಲದ ಆಡಳಿತಾಧಿಕಾರಿ ಹಾಗೂ ಗಂಗಾವತಿ ತಹಸೀಲ್ದಾರ್ ವಿಶ್ವನಾಥ ಮುರಡಿ ನೇತೃತ್ವದಲ್ಲಿ ನಡೆದ ಹುಂಡಿ ಹಣ ಎಣಿಕೆಯ ಸಂದರ್ಭದಲ್ಲಿ ನೇಪಾಳದ ಎರಡು ನೋಟು, ಇಂಗ್ಲೆಂಡಿನ ಯುರೋ, ನೇಪಾಳ, ಜಪಾನ್ ದೇಶದ ತಲಾ ಒಂದು ಮತ್ತು ದುಬೈನ ಒಂದು ನಾಣ್ಯ ಸೇರಿದಂತೆ ಒಟ್ಟು ವಿವಿಧ ಮುಖ ಬೆಲೆಯ ಆರು ನಾಣ್ಯಗಳು ಪತ್ತೆಯಾಗಿವೆ.
ಕಳೆದ ತಿಂಗಳು ನ.11ರಂದು ಹುಂಡಿ ಎಣಿಕೆ ಮಾಡಿದ ಸಂದರ್ಭದಲ್ಲಿ 27.16 ಲಕ್ಷ ಮೊತ್ತದ ಹಣ ಸಂಗ್ರವಾಗಿತ್ತು.
ಇದನ್ನೂ ಓದಿ: Benefits Of Amla In Winter: ಚಳಿಗಾಲದಲ್ಲಿ ನೆಲ್ಲಿಕಾಯಿ ತಿಂದರೆ ಸಿಗುವ ಪ್ರಯೋಜನಗಳು ಹಲವು
ಈ ಸಂದರ್ಭದಲ್ಲಿ ಗ್ರೇಡ್-2 ತಹಸೀಲ್ದಾರ್ ಮಹಾಂತಗೌಡ, ಶಿರಸ್ತೇದಾರಾದ ರವಿಕುಮಾರ ನಾಯಕವಾಡಿ, ಮೈಬೂಬಅಲಿ, ಕೃಷ್ಣವೇಣಿ, ಕಂದಾಯ ನಿರೀಕ್ಷಕರಾದ ಮಹೇಶ್ ದಲಾಲ, ಮಂಜುನಾಥ ಹಿರೇಮಠ್ ಹಾಲೇಶ್, ಸಿಬ್ಬಂದಿ ಶ್ರೀಕಂಠ, ಗುರುರಾಜ ,ಮಂಜುನಾಥ, ಸುಧಾ, ಶ್ರಿರಾಮ ಜೋಷಿ, ಹನುಮೇಶ ಪೂಜಾರ, ದೇಗುಲದ ವ್ಯವಸ್ಥಾಪಕ ವೆಂಕಟೇಶ ಇತರರಿದ್ದರು.