Site icon Vistara News

Koppala News: ಅಂಜನಾದ್ರಿ ಬೆಟ್ಟದಲ್ಲಿ ಸ್ವಚ್ಛತಾ ಅಭಿಯಾನ

Cleanliness campaign in Anjanadri Hill

ಗಂಗಾವತಿ: ತಾಲೂಕಿನ ಪ್ರಸಿದ್ಧ ಅಂಜನಾದ್ರಿ ಬೆಟ್ಟದಲ್ಲಿ (Anjanadri Hill) ಸಮಾನ ಮನಸ್ಕ ಯುವಕರ ತಂಡದಿಂದ ಶನಿವಾರ ಸ್ವಚ್ಛತಾ ಅಭಿಯಾನ (Cleanliness campaign) ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಪ್ರಾಣಿ, ಪಕ್ಷಿ, ಪ್ರಕೃತಿ, ಪರಿಸರ ಉಳಿಸುವ ನಿಟ್ಟಿನಲ್ಲಿ ಪರಿಸರ ಕಾಪಾಡಿ ಎಂಬುವುದರ ಬಗ್ಗೆ ಜನಜಾಗೃತಿ ಮೂಡಿಸುವ ಧ್ಯೇಯದೊಂದಿಗೆ ಅಸ್ತಿತ್ವಕ್ಕೆ ಬಂದಿರುವ `ಮಾನವೀಯತೆಯೊಂದಿಗೆ ಜೀವಿಸಿ’ (ಲೈವ್ ವಿಥ್ ಹ್ಯುಮಾನಿಟಿ) ಸಂಘಟನೆಯ ನೇತೃತ್ವದಲ್ಲಿ ಸ್ವಚ್ಛತಾ ಅಭಿಯಾನ ಹಮ್ಮಿಕೊಳ್ಳಲಾಗಿತ್ತು.

ತಂಡದ ಯುವಕರು ಅಂಜನಾದ್ರಿ ಬೆಟ್ಟದ ಸುತ್ತಲೂ, ಅಲ್ಲಿನ ಕಲ್ಲಿನ ಆಸರೆ, ಪೊಟರೆ, ಕಲ್ಲಿನ ಗುಹೆಗಳ ಆಳದಲ್ಲಿ ಹತ್ತಾರು ಮೀಟರ್ ಕಂದಕದಲ್ಲಿ ಎಸೆಯಲಾಗಿದ್ದ ಜಾಗಕ್ಕೂ ಇಳಿದು ಪ್ಲಾಸ್ಟಿಕ್ ತ್ಯಾಜ್ಯವನ್ನು ಸಂಗ್ರಹಿಸಿ ಸಾಹಸ ಮೆರೆದರು.

ಇದನ್ನೂ ಓದಿ: Vistara Awards : ಬೆಸ್ಟ್‌ ಟೀಚರ್‌ ಪ್ರಶಸ್ತಿ ನೀಡಿದ ವಿಸ್ತಾರವೇ ಬೆಸ್ಟ್‌; ಮನದುಂಬಿ ಹಾರೈಸಿದ ಹೊರಟ್ಟಿ

ಲೈವ್ ವಿತ್ ಹ್ಯುಮಾನಿಟಿ ಆಯೋಜಿಸಿದ್ದ ಈ ಮೆಗಾ ಕ್ಲೀನ್ ಡ್ರೈವ್‌ಗೆ ಕಿಷ್ಕಿಂಧಾ ಯೂಥ್ ಟ್ರಕ್ಕಿಂಗ್ ಕ್ಲಬ್, ಕಿಷ್ಕಿಂಧಾ ಯುವಸೇನೆ, ಪ್ರಿಸರ್ವ್‌, ನೇಚರ್ ಮತ್ತು ನೇಚರ್ ಹೆರಿಟೇಜ್, ಗಂಗಾವತಿ ಚಾರಣ ಬಳಗ, ದಿ ಹಂಪಿ ಎಂಬ ಸಂಸ್ಥೆಗಳ ಯುವಕರು ಕೈ ಜೋಡಿಸಿದ್ದರು.

Exit mobile version