ಗಂಗಾವತಿ: ನಗರ ಸೇರಿದಂತೆ ಗಂಗಾವತಿ ವಿಧಾನಸಭಾ ಕ್ಷೇತ್ರವನ್ನು (Gangavathi Assembly Constituency) ಸಂಪೂರ್ಣ ಅಭಿವೃದ್ಧಿ ಪಡಿಸುವ ಯೋಜನೆ ರೂಪಿಸಲಾಗಿದ್ದು, ಇದರ ಮೊದಲ ಭಾಗವಾಗಿ ಗಂಗಾವತಿ ನಗರದ ರಸ್ತೆಗಳನ್ನು ಸಿಂಗಾಪುರ ಮಾದರಿಯಲ್ಲಿ ಅಭಿವೃದ್ಧಿ ಪಡಿಸಲಾಗುವುದು ಎಂದು ಶಾಸಕ ಜಿ. ಜನಾರ್ದನ ರೆಡ್ಡಿ ಹೇಳಿದರು.
ನಗರದ ಇಂದಿರಾ ವೃತ್ತದಲ್ಲಿರುವ ರಿಲಯನ್ಸ್ ಪೆಟ್ರೋಲ್ ಬಂಕ್ ಮುಂದೆ ಕಲ್ಯಾಣ ಕರ್ನಾಟಕ ಪ್ರದೇಶದ ಅಭಿವೃದ್ಧಿ ನಿಗಮದಿಂದ ಮಂಜೂರಾದ 20 ಕೋಟಿ ಮೊತ್ತದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ, ಬಳಿಕ ಅವರು ಮಾತನಾಡಿದರು.
ಇದನ್ನೂ ಓದಿ: Retail Inflation: 4 ತಿಂಗಳ ಗರಿಷ್ಠ ಮಟ್ಟಕ್ಕೆ ಚಿಲ್ಲರೆ ಹಣದುಬ್ಬರ! ಡಿಸೆಂಬರ್ ತಿಂಗಳಲ್ಲಿ ಶೇ.5.9ಕ್ಕೆ ಏರಿಕೆ
ನಗರದಲ್ಲಿ ಪ್ರಮುಖ 18 ಪ್ರಮುಖ ರಸ್ತೆಗಳನ್ನು ಗುರುತಿಸಲಾಗಿದೆ. ಇವುಗಳ ಅಭಿವೃದ್ಧಿಗಾಗಿ ಈಗಾಗಲೆ ನಗರಸಭೆಯಿಂದ ಐನ್ನೂರು ಕೋಟಿ ರೂಪಾಯಿ ಮೊತ್ತದ ಪ್ರಸ್ತಾವನೆ ಜಿಲ್ಲಾಧಿಕಾರಿಗೆ ಸಲ್ಲಿಸಲಾಗಿದೆ. ಅಲ್ಲಿಂದ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗುತ್ತದೆ.
ಅನುದಾನ ಮಂಜೂರಾದ ಕೂಡಲೆ ಕಾಮಗಾರಿ ಹಂತಹಂತವಾಗಿ ಕೈಗೊಳ್ಳಲಾಗುವುದು. ಸದ್ಯಕ್ಕೆ 20 ಕೋಟಿ ರೂಪಾಯಿ ಮೊತ್ತದಲ್ಲಿ ನಗರದ ರಾಣಾ ಪ್ರತಾಪ್‌ಸಿಂಗ್ ವೃತ್ತದಿಂದ ಜುಲಾಯಿನಗರ, ಬೈಪಾಸ್, ಕನಕದಾಸ ವೃತ್ತದ ಮೂಲಕ ನೀಲಕಂಠೇಶ್ವರ ವೃತ್ತದವರೆಗೆ ರಸ್ತೆ ಅಭಿವೃದ್ಧಿ ಮಾಡಲಾಗುವುದು.
ಇದನ್ನೂ ಓದಿ: Communication Skill : ಬಿಸಿನೆಸ್ ಜಗತ್ತಿನಲ್ಲಿ ನೀವು ಎಂದಿಗೂ ಕೋಪಗೊಳ್ಳದಿರಿ
ನಗರದ ಪ್ರಮುಖ ರಸ್ತೆಗಳ ಅಭಿವೃದ್ಧಿ ಬಳಿಕ, ಓಣಿ, ಒಳ ರಸ್ತೆಗಳ ಅಭಿವೃದ್ಧಿ ಮಾಡಲಾಗುವುದು. ವಾಹನಗಳ ದಟ್ಟಣೆ ತಪ್ಪಿಸುವ ಉದ್ದೇಶಕ್ಕೆ ನಗರಕ್ಕೆ ಬೈಪಾಸ್ ಮತ್ತು ರಿಂಗ್ ರೋಡ್ ನಿರ್ಮಾಣ ಮಾಡುವ ಯೋಜನೆಯಿದೆ ಎಂದು ತಿಳಿಸಿದರು.