ಗಂಗಾವತಿ: ಅಮೇರಿಕಾದ ಟೆಕ್ಸಾಸ್‌ನಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಯುವಕನೊಬ್ಬ, ಇಲ್ಲಿನ ಸರ್ಕಾರಿ ಶಾಲೆಯೊಂದಕ್ಕೆ 1.5 ಲಕ್ಷ ರೂ ಮೌಲ್ಯದ ಪುಸ್ತಕಗಳನ್ನು (Books) ದೇಣಿಗೆಯಾಗಿ (Koppala News) ನೀಡಿದ್ದಾರೆ.
ಮೂಲತಃ ದಾವಣಗೆರೆಯ ಯುವಕ ಪ್ರತೀಕ್ ಕೆ. ಬಾದಾಮಿ ಎಂಬುವವರು ಅಮೇರಿಕಾದ ಟೆಕ್ಸಾಸ್‌ನಲ್ಲಿರುವ ಖಾಸಗಿ ಕಂಪನಿಯಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದು, ಕೊಪ್ಪಳ ಜಿಲ್ಲೆ ಕಾರಟಗಿ ತಾಲೂಕಿನ ಕುಂಟೋಜಿ ಲಕ್ಷ್ಮಿಕ್ಯಾಂಪಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಒಂದೂವರೆ ಲಕ್ಷ ರೂ ಮೌಲ್ಯದ ಪುಸ್ತಕಗಳನ್ನು ಕಳುಹಿಸಿಕೊಟ್ಟಿದ್ದಾರೆ.
ಇದನ್ನೂ ಓದಿ: Virat Kohli: ಪಂಜಾಬ್ ವಿರುದ್ಧ ಅರ್ಧಶತಕ ಬಾರಿಸಿ ಕೊಹ್ಲಿ ನಿರ್ಮಿಸಿದ ದಾಖಲೆಗಳು ಹೀಗಿವೆ!
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಯುವಕ ಪ್ರತೀಕ್, ನಾನು ದುಡಿಯುವ ಹಣದಲ್ಲಿ ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕು ಎಂಬ ಉದ್ದೇಶವಿತ್ತು. ರಾಜ್ಯದ ಸರ್ಕಾರಿ ಶಾಲೆಗಳಲ್ಲಿನ ಗ್ರಂಥಾಲಯದಲ್ಲಿ ಮಕ್ಕಳು ಓದಲು ಪುಸ್ತಕದ ಕೊರತೆ ಇರುವ ಬಗ್ಗೆ ಗಮನಕ್ಕೆ ಬಂತು. ಸ್ನೇಹಿತರ ಮೂಲಕ ಕಾರಟಗಿ ತಾಲೂಕಿನ ಸರ್ಕಾರಿ ಶಾಲೆಯೊಂದಕ್ಕೆ ಪುಸ್ತಕಗಳನ್ನು ನೀಡಿದ್ದೇನೆ ಎಂದು ತಿಳಿಸಿದ್ದಾರೆ.
ಗ್ರಂಥಾಲಯ ಉದ್ಘಾಟನೆ
ಕಾರಟಗಿ ತಾಲೂಕಿನ ಲಕ್ಷ್ಮೀಕ್ಯಾಂಪ್ ಕುಂಟೋಜಿಯ ಸ.ಕಿ.ಪ್ರಾ. ಶಾಲೆಯಲ್ಲಿ ದಾನಿಗಳು ನೀಡಿದ ಪುಸ್ತಕಗಳ ನೆರವಿನಿಂದ ಗ್ರಂಥಾಲಯವನ್ನು ಆರಂಭಿಸಲಾಯಿತು. ಹಾಸ್ಯ ಭಾಷಣಕಾರ ಗಂಗಾವತಿ ಪ್ರಾಣೇಶ್, ಗ್ರಂಥಾಲಯಕ್ಕೆ ಚಾಲನೆ ನೀಡಿ, ಬಳಿಕ ಮಾತನಾಡಿದರು.
ಶಾಲೆಯ ಮುಖ್ಯಶಿಕ್ಷಕ ಸೋಮು ಕುದರಿಹಾಳ ಮಾತನಾಡಿ, ಸ.ಕಿ.ಪ್ರಾ. ಶಾಲೆಯಲ್ಲಿ ದಾನಿಗಳು ನೀಡಿದ ಪುಸ್ತಕಗಳ ನೆರವಿನಿಂದ ಗ್ರಂಥಾಲಯವನ್ನು ಸ್ಥಾಪಿಸಲಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ: Gold Rate Today: ಇಳಿಯುತ್ತಲೇ ಇದೆ ಬಂಗಾರದ ದರ; ಕೊಳ್ಳಲು ಇದೇ ಸೂಕ್ತ ಸಮಯ!
ಈ ವೇಳೆ ಮಕ್ಕಳ ತಜ್ಞ ವೈದ್ಯ ಅಮರೇಶ ಪಾಟೀಲ್ ಹಾಗೂ ಶಾಲಾ ಸಿಬ್ಬಂದಿ, ಇತರರು ಉಪಸ್ಥಿತರಿದ್ದರು.