ಗಂಗಾವತಿ: ತಾಲೂಕಿನ ಪ್ರಮುಖ ಧಾರ್ಮಿಕ ತಾಣವಾಗಿರುವ ಚಿಕ್ಕರಾಂಪೂರದ ಅಂಜನಾದ್ರಿ (Anjanadri) ಬೆಟ್ಟದ ಆಂಜನೇಯನ ದೇವಸ್ಥಾನದಲ್ಲಿನ (Anjaneya Temple) ಕಾಣಿಕೆ ಹುಂಡಿಯಲ್ಲಿ (Hundi) ಸಂಗ್ರಹವಾಗಿರುವ ಹಣ ಎಣಿಕೆ ಮಾಡಿದಾಗ ಐದು ದೇಶಗಳ ಎರಡು ನೋಟು ಮತ್ತು ಮೂರು ನಾಣ್ಯಗಳು ಪತ್ತೆಯಾಗಿವೆ.
ಯುನೈಟೆಡ್ ಸ್ಟೇಟ್ ಆಫ್ ಅಮೇರಿಕಾದ 20 ಡಾಲರ್, ಸೌದಿ ಅರೇಬಿಯಾದ ಐದು ರಿಯಲ್ಸ್, ಇಂಗ್ಲೆಂಡ್, ಓಮನ್ ಮತ್ತು ಯುನೈಟೆಡ್ ಸ್ಟೇಟ್ ಆಫ್ ಅಮೇರಿಕಾದ ಬಹುಮುಖ ಬೆಲೆಯ ನಾಣ್ಯಗಳು ಹನುಮಪ್ಪನ ಹುಂಡಿಯಲ್ಲಿ ಪತ್ತೆಯಾಗಿವೆ.
ಹುಂಡಿಯಲ್ಲಿನ ಹಣ ಎಣಿಕೆ ಮಾಡಲಾಗಿದ್ದು, ಒಟ್ಟು 43 ದಿನಕ್ಕೆ 31,77 ಲಕ್ಷ ಮೊತ್ತದ ನಗದು ಹಣ ಪತ್ತೆಯಾಗಿದೆ. ಕಳೆದ ತಿಂಗಳು ಅಂದರೆ ಆಗಸ್ಟ್ 8 ರಂದು ಎಣಿಕೆ ಮಾಡಿದ್ದಾಗ ಹುಂಡಿಯಲ್ಲಿ 25,27 ಲಕ್ಷ ಮೊತ್ತದ ನಗದು ಹಣ ಸಂಗ್ರಹವಾಗಿತ್ತು.
ಇದನ್ನೂ ಓದಿ: Weather Report : 20 ಜಿಲ್ಲೆಗಳಲ್ಲಿ ಮಳೆರಾಯನಿಗೆ ಬಿಡುವೇ ಇಲ್ಲ!
ದೇಗುಲದ ಸಿಸಿ ಕ್ಯಾಮರಾಗಳ ಕಣ್ಗಾವಲಿನಲ್ಲಿ ಹಾಗೂ ಪೊಲೀಸ್ ಬಂದೋಬಸ್ತ್‌ನಲ್ಲಿ ಕಂದಾಯ ಇಲಾಖೆಯ ಗ್ರೇಡ್-2 ತಹಸೀಲ್ದಾರ್ ರವಿನಾಯಕವಾಡಿ ನೇತೃತ್ವದಲ್ಲಿ ಹುಂಡಿ ಹಣದ ಎಣಿಕೆ ಕಾರ್ಯ ನಡೆಯಿತು. ಕಂದಾಯ ಮತ್ತು ದೇಗುಲದ 20ಕ್ಕೂ ಹೆಚ್ಚು ಸಿಬ್ಬಂದಿ ಭಾಗಿಯಾಗಿದ್ದರು.