ಗಂಗಾವತಿ: ಬಡ ಮಕ್ಕಳು ಅದರಲ್ಲೂ ಸರ್ಕಾರಿ ಶಾಲೆಗಳಲ್ಲಿ (Government School) ಓದುತ್ತಿರುವ ಮಕ್ಕಳ ಶೈಕ್ಷಣಿಕ ಪ್ರಗತಿಗೆ ನೆರವಾಗುವ ಉದ್ದೇಶಕ್ಕೆ ಕಳೆದ ಮೂರು ವರ್ಷದಿಂದ ಗಂಗಾವತಿ (Gangavathi) ತಾಲೂಕಿನ ಶಾಲೆಗಳಿಗೆ ಒಂದೂವರೆ ಲಕ್ಷ ಪ್ರಮಾಣದ ಪುಸ್ತಕಗಳನ್ನು ನೀಡಲಾಗಿದೆ ಎಂದು ಬೆಂಗಳೂರಿನ ಉದ್ಯಮಿ, ಸಮಾಜ ಸೇವಕ ಮಹೇಂದ್ರ ಕುಮಾರ ಜೈನ್ ಮುನ್ನೋಟ್ ಹೇಳಿದರು.
ನಗರದ ನೀಲಕಂಠೇಶ್ವರ ವೃತ್ತದಲ್ಲಿರುವ ಶಾಸಕರ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬೆಂಗಳೂರಿನ ಮಾರುತಿ ಮೆಡಿಕಲ್ ಸಂಸ್ಥೆಯಿಂದ ನೀಡಲಾದ ಉಚಿತ ನೋಟ್ ಪುಸ್ತಕಗಳನ್ನು ವಿತರಿಸಿ, ಬಳಿಕ ಅವರು ಮಾತನಾಡಿದರು.
ನಾನು ಹುಟ್ಟಿದ್ದು ರಾಜಸ್ಥಾನ, ಆದರೆ ಜೀವನ ಅರಿಸಿ ಬಂದಿದ್ದು ಬೆಂಗಳೂರಿಗೆ, ಕನ್ನಡ ತಾಯಿ ಭುವನೇಶ್ವರಿ ಆಶೀರ್ವಾದದಿಂದ ಸಮಾಜ ಸೇವೆಗೆ ಪ್ರೇರಣೆ ಸಿಕ್ಕಿದ್ದು, ಕಳೆದ ಒಂದು ದಶಕಕ್ಕೂ ಹೆಚ್ಚು ಕಾಲದಿಂದ ನಾಡು ನುಡಿ ಸೇವೆಯಲ್ಲಿದ್ದೇನೆ.
ಇದನ್ನೂ ಓದಿ: VIjayanagara News: ಹೊಸಪೇಟೆಯಲ್ಲಿ ಅ.12, 13ರಂದು ಚಾರ್ಟರ್ಡ್ ಅಕೌಂಟೆಂಟ್‌ಗಳ ಸಮಾವೇಶ
ಸರ್ಕಾರಿ ಶಾಲೆಗಳು ಬಲಪಡಿಸಬೇಕೆಂಬ ಉದ್ದೇಶಕ್ಕೆ ರಾಜ್ಯದಾದ್ಯಂತ ಪ್ರತಿ ವರ್ಷ ಹತ್ತು ಲಕ್ಷಕ್ಕೂ ಹೆಚ್ಚು ನೋಟ್ ಪುಸ್ತಕಗಳನ್ನು ಮಕ್ಕಳಿಗೆ ವಿತರಿಸಲಾಗುತ್ತಿದೆ. ಕಳೆದ ಮೂರು ವರ್ಷದಿಂದ ಗಂಗಾವತಿ ತಾಲೂಕಿಗೆ ಒಂದುವರೆ ಲಕ್ಷ ನೋಟ್ ಬುಕ್ ನೀಡಲಾಗಿದೆ ಎಂದು ತಿಳಿಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಶರಣೇಗೌಡ ಪೊಲೀಸ್ ಪಾಟೀಲ್ ಮಾತನಾಡಿ, ಸಮಾಜದಲ್ಲಿ ಸಾಕಷ್ಟು ಜನರಿಗೆ ಶ್ರೀಮಂತಿಕೆ ಇರುತ್ತದೆ. ಆದರೆ ಸೇವೆ ಮಾಡುವ ದೊಡ್ಡ ಮನಸ್ಸು ವಿರಳ. ಮಹೇಂದ್ರ ಜೈನ್ ಅಂತವರು ವಿರಳ ಎಂದರು.
ಇದನ್ನೂ ಓದಿ: Badminton : ಭಾರತದ ಕ್ರೀಡಾ ಇತಿಹಾಸದಲ್ಲಿಯೇ ಅಮೋಘ ದಾಖಲೆ ಮಾಡಿದ ಸಾತ್ವಿಕ್- ಚಿರಾಗ್ ಶೆಟ್ಟಿ
ಶಾಲಾ ಮಕ್ಕಳಿಗೆ ನೋಟ್ ಬುಕ್ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಶಿಕ್ಷಣ ಇಲಾಖೆಯ ಅಧಿಕಾರಿಗಳಾದ ಮಂಜುನಾಥ ವಸ್ತ್ರದ, ಅಜ್ಜಯ್ಯ, ಶಾಲೆಯ ಮುಖ್ಯಗುರು ರಮೇಶ, ಉದ್ಯಮಿಗಳಾದ ಉಗಮರಾಜ ಬಂಬ್, ಮುತ್ತಯ್ಯ ಗಂಟಿಮಠ, ಶಿವಾಆನಂದ ತಿಮ್ಮಾಪುರ, ಸುರೇಶ ಕಲಾಪ್ರಿಯಾ ಸೇರಿದಂತೆ ಹಲವರು ಇದ್ದರು.