ಕಾರಟಗಿ: ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳ ಕಾರಟಗಿ ತಾಲೂಕು ಅಧ್ಯಕ್ಷ ದೇವಪ್ಪ ಭಾವಿಕಟ್ಟಿ ಅಧ್ಯಕ್ಷತೆಯಲ್ಲಿ ಯೋಜನೆಗಳ ಅನುಷ್ಠಾನ ಕುರಿತು ಪ್ರಗತಿ ಪರಿಶೀಲನಾ ಸಭೆ (Koppala News) ನಡೆಯಿತು.
ಸಭೆಯಲ್ಲಿ ಸಮಿತಿ ಅಧ್ಯಕ್ಷ ದೇವಪ್ಪ ಭಾವಿಕಟ್ಟಿ ಮಾತನಾಡಿ, ಸರ್ಕಾರದ ಐದು ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಜನರಿಗೆ ತಲುಪಿಸಲು ಅಧಿಕಾರಿಗಳು ಕ್ರಮ ವಹಿಸಬೇಕು. ತಾಂತ್ರಿಕ ದೋಷಗಳು ಹಾಗೂ ಯೋಜನೆಗೆ ಸಂಬಂಧಿಸಿದಂತೆ ಇನ್ನಿತರ ಸಮಸ್ಯೆಗಳು ಕುರಿತು ದೂರುಗಳನ್ನು ಸಮಿತಿ ಸರ್ವ ಸದಸ್ಯರು ಅಧಿಕಾರಗಳ ಗಮನಕ್ಕೆ ತಂದು, ಸಮಸ್ಯೆಗಳನ್ನು ತ್ವರಿತವಾಗಿ ಬಗೆಹರಿಸಿ ಕೊಡುವಲ್ಲಿ ಮುಂದಾಗಿ ಎಂದು ತಿಳಿಸಿದರು.
ಗೃಹ ಲಕ್ಷ್ಮೀ, ಗೃಹ ಜ್ಯೋತಿ, ಶಕ್ತಿ ಯೋಜನೆ, ಯುವ ನಿಧಿ, ಅನ್ನ ಭಾಗ್ಯ ಯೋಜನೆಗಳ ಕುರಿತು ತಾಲೂಕು ಮಟ್ಟದ ಅಧಿಕಾರಿಗಳು ವರದಿ ಮಂಡಿಸಿದರು.
ಇದನ್ನೂ ಓದಿ: Kalki 2898 AD 2: ಶೀಘ್ರದಲ್ಲೇ ಬರಲಿದೆ ಕಲ್ಕಿ 2898ಎಡಿ ಭಾಗ- 2!
ಈ ಸಂದರ್ಭಗಳಲ್ಲಿ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮೀದೇವಿ , ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಜಿಲ್ಲಾ ಉಪಾಧ್ಯಕ್ಷರು, ಸದಸ್ಯರು, ತಾಲೂಕು ಸಮಿತಿಯ ಸದಸ್ಯರು, ಐದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಅಧಿಕಾರಿಗಳು, ತಾ.ಪಂ ಯೋಜನಾಧಿಕಾರಿಗಳು, ಸೇರಿ ತಾ.ಪಂ ವಿವಿಧ ಯೋಜನೆಗಳ ವಿಷಯ ನಿರ್ವಾಹಕರು ಪಾಲ್ಗೊಂಡಿದ್ದರು.