Site icon Vistara News

Koppala News: ಮನೆ ಕಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ: 2.5 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶ

House Burglary, Two accused arrested

ಗಂಗಾವತಿ: ಮನೆಗಳನ್ನು ಗುರಿಯಾಗಿಸಿಕೊಂಡು ಯಾರೂ ಇಲ್ಲದ ಸಂದರ್ಭದಲ್ಲಿ ಕಳ್ಳತನ (Theft) ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು (Accused) ಬಂಧಿಸುವಲ್ಲಿ ಕಾರಟಗಿ (Karatagi Police Station)) ಠಾಣೆಯ ಪೊಲೀಸರು ಯಶಸ್ವಿಯಾಗಿದ್ದು, ಬಂಧಿತರಿಂದ 2.5 ಲಕ್ಷ ರೂಪಾಯಿ ಮೌಲ್ಯದ ಒಡವೆಗಳನ್ನು ವಶಪಡಿಸಿಕೊಂಡಿದ್ದಾರೆ.

ಬಂಧಿತ ಆರೋಪಿಯನ್ನು ಬೂದಗುಂಪಾ ಗ್ರಾಮದ ಯರಡೋಣಿ ರಸ್ತೆಯ ಪೀರಸಾಬ ಅಲಿಯಾಸ ತೋಡರ ಹಿರೇಮನಿ ಎಂದು ಗುರುತಿಸಲಾಗಿದೆ. ಮತ್ತೊಬ್ಬ ಆರೋಪಿಯು ಅಪ್ರಾಪ್ತ ವಯಸ್ಸಿನವನಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತರಿಂದ 2.5 ಲಕ್ಷ ಮೌಲ್ಯದ ಬಂಗಾರದ ಒಡವೆ ಹಾಗೂ ಕಳ್ಳತನಕ್ಕೆ ಬಳಸಿಕೊಳ್ಳುತ್ತಿದ್ದರು ಎನ್ನಲಾದ ಒಂದು ಇನ್ನೋವಾ ಕಾರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ: Aditya L1 Mission: ಭೂಮಿಯ ಸುತ್ತ ಎರಡನೇ ಸುತ್ತು ಮುಗಿಸಿದ ಆದಿತ್ಯ L1, ಇನ್ನೂ 3 ಸುತ್ತು ಬಾಕಿ

ಜೂಜಾಟದ ಅಡ್ಡೆ ಮೇಲೆ ದಾಳಿ

ಗಂಗಾವತಿ ನಗರದ ಪೌರಾಣಿಕ ಹಿನ್ನೆಲೆ ಹೊಂದಿರುವ ದೇವಘಾಟದ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದರ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಗ್ರಾಮೀಣ ಠಾಣೆಯ ಪೊಲೀಸರು, ಐವರನ್ನು ಬಂಧಿಸಿ, ಅವರಿಂದ 12,800 ಮೊತ್ತದ ನಗದು ವಶಪಡಿಸಿಕೊಂಡಿದ್ದಾರೆ.

ಇದನ್ನೂ ಓದಿ: SSLC PUC Exam : ಎಸ್‌ಎಸ್‌ಎಲ್‌ಸಿ-ಪಿಯುಸಿ ವಿದ್ಯಾರ್ಥಿಗಳಿಗೆ ಇನ್ನು 3 ಪರೀಕ್ಷೆ! ಗುಡ್‌ನ್ಯೂಸ್‌ ಕೊಟ್ಟ ಸರ್ಕಾರ

ಬಂಧಿತ ಆರೋಪಿಗಳನ್ನು ಇಲಾಹಿ ಕಾಲೋನಿಯ ಕೆ. ಮಹೆಬೂಬಸಾಬ ಕೊಲ್ಲಾಗ್ವಾಟಿ, ಇಸ್ಲಾಂಪುರದ ಮಹಮ್ಮದ್‌ ಗೌಸ್, ಅಜೀಜ್ ಮೇಸ್ತ್ರಿ, ಅಖ್ತರ್ ಅಹ್ಮದ್ ಮತ್ತು ಮುಜಾವರ್ ಕ್ಯಾಂಪಿನ ಖಾಸೀಂಸಾಬ ಟೈಲರ್ ಎಂದು ಗುರುತಿಸಲಾಗಿದೆ.

Exit mobile version