ಗಂಗಾವತಿ: ರೆಸಾರ್ಟ್‌ವೊಂದರಲ್ಲಿ (Resort) ಇದ್ದಕ್ಕಿದ್ದಂತೆ ಬೆಂಕಿ ಆಕಸ್ಮಿಕ (Accidental Fire) ಸಂಭವಿಸಿ ಇಡೀ ರೆಸಾರ್ಟ್‌ಗೆ ವ್ಯಾಪಿಸಿ ಹತ್ತಾರು ಕೋಣೆಗಳು (Rooms) ಸೇರಿದಂತೆ ಇಡೀ ರೆಸಾರ್ಟ್ ಹೊತ್ತಿ ಉರಿದ ಘಟನೆ ತಾಲೂಕಿನ ಹನುಮನಹಳ್ಳಿಯಲ್ಲಿ ನಡೆದಿದೆ.
ಹನುಮನಹಳ್ಳಿ ಗ್ರಾಮದ ಋಷಿಮುಖ ಪರ್ವತದ ರಸ್ತೆಯಲ್ಲಿರುವ ವಂಡರ್ಲಸ್ಟ್ ಎಂಬ ರೆಸಾರ್ಟ್‌ನಲ್ಲಿ ಅಗ್ನಿ ಆಕಸ್ಮಿಕ ಸಂಭವಿಸಿದ್ದು, ಬೆಂಕಿ ಆಕಸ್ಮಿಕಕ್ಕೆ ಖಚಿತ ಕಾರಣ ಏನೆಂದು ತಿಳಿದುಬಂದಿಲ್ಲ. ಘಟನೆಯಲ್ಲಿ ಲಕ್ಷಾಂತರ ರೂಪಾಯಿ ಮೊತ್ತದ ಹಾನಿ ಸಂಭವಿಸಿದೆ.
ಹಂಪಿ ಅಭಿವೃದ್ಧಿ ಪ್ರಾಧಿಕಾರದ ಕಟ್ಟುನಿಟ್ಟಿನ ಕ್ರಮದಿಂದಾಗಿ ಆನೆಗೊಂದಿ ಭಾಗದ ಬೆರಳೆಣಿಕೆಯಷ್ಟು ಬಿಟ್ಟರೆ ಬಹುತೇಕ ರೆಸಾರ್ಟ್‌ಗಳ ಚಟುವಟಿಕೆ ಸ್ಥಗಿತವಾಗಿದ್ದು, ಬೀಗ ಹಾಕಿ ಸೀಜ್ ಮಾಡಲಾಗಿದೆ.
ಇದನ್ನೂ ಓದಿ: Weather Report : ಉತ್ತರ ಕರ್ನಾಟಕದಲ್ಲಿ ಇನ್ನೊಂದು ವಾರ ಭರ್ಜರಿ ಮಳೆ; ಯೆಲ್ಲೋ ಅಲರ್ಟ್ ಘೋಷಣೆ
ಘಟನಾ ಸ್ಥಳಕ್ಕೆ ಅಗ್ನಿನಂದಕ ದಳದ ಸಿಬ್ಬಂದಿ ಆಗಮಿಸಿ, ಅಗ್ನಿ ನಂದಿಸಿದ್ದಾರೆ.
ಹಂಪೆ-ಆನೆಗೊಂದಿ ಪ್ರವಾಸಕ್ಕೆ ಬರುವ ವಿದೇಶಿ ಪ್ರವಾಸಿಗರನ್ನು ಸೆಳೆಯುವ ಉದ್ದೇಶಕ್ಕೆ ಸ್ಥಳೀಯ ಬಹುತೇಕ ರೆಸಾರ್ಟ್‌ಗಳನ್ನು ಬೊಂಬು, ಬಿದಿರು, ಬಲ್ಲೀಸು, ತಟ್ಟೆ ಸೇರಿದಂತೆ ನೈಸರ್ಗಿಕ ವಸ್ತುಗಳಿಂದಲೇ ವಿನ್ಯಾಸ ಮಾಡಿ ನಿರ್ಮಾಣ ಮಾಡಲಾಗುತ್ತಿದೆ. ವಂಡರ್ಲಸ್ಟ್ ರೆಸಾರ್ಟ್ ಕೂಡ ಅದೇ ಮಾದರಿಯಲ್ಲಿ ನಿರ್ಮಾಣ ಮಾಡಲಾಗಿತ್ತು.