Site icon Vistara News

Koppala News: ಯಲಬುರ್ಗಾದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ

Kannada Rajyotsava celebration in Yalaburga

ಯಲಬುರ್ಗಾ: ತಾಲೂಕಿನ ಮಂಡಲಮರಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕರವೇ ಸ್ವಾಭಿಮಾನಿ ಸೇನೆ ವತಿಯಿಂದ ಕನ್ನಡ ರಾಜ್ಯೋತ್ಸವವನ್ನು (Kannada Rajyotsava) ಸಂಭ್ರಮದಿಂದ ಆಚರಿಸಲಾಯಿತು.

ಕಾರ್ಯಕ್ರಮಕ್ಕೂ ಮುನ್ನ ಕನ್ನಡ ತಾಯಿ ಶ್ರೀ ಭುವನೇಶ್ವರಿ ದೇವಿಯ ಭಾವಚಿತ್ರದೊಂದಿಗೆ ಇಲ್ಲಿನ ಮಂಡಲಮರಿ ಕ್ರಾಸ್‌ನಿಂದ ಅದ್ದೂರಿಯಾಗಿ ಮೆರವಣಿಗೆ ಮಾಡಲಾಯಿತು‌ ಮೆರವಣಿಗೆಯಲ್ಲಿ ಗ್ರಾಮದ ಯುವಕರು, ಗ್ರಾಮಸ್ಥರು ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ಬಳಿಕ ನಡೆದ ವೇದಿಕೆ ಕಾರ್ಯಕ್ರಮವನ್ನು ಮಕ್ಕಳ್ಳಿ ಮಠದ ಶಿವಾನಂದ ಸ್ವಾಮೀಜಿ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು.

ಇದನ್ನೂ ಓದಿ: Karnataka Weather: ಮುಂದಿನ 48 ಗಂಟೆಯಲ್ಲಿ ಇಲ್ಲೆಲ್ಲ ಜೋರು ಮಳೆ! ಗುಡುಗು, ಮಿಂಚು ಸಾಥ್‌

ಶ್ರೀಧರಮುರಡಿ ಮಠದ ಬಸವಲಿಂಗ ಸ್ವಾಮೀಜಿ ಕಾರ್ಯಕ್ರಮದಲ್ಲಿ ಸಾನಿಧ್ಯತೆ ವಹಿಸಿ ಮಾತನಾಡಿ, ಯುವಕರು ದುಶ್ಚಟಗಳಿಂದ ಮುಕ್ತಿ ಹೊಂದಬೇಕು. ಯುವಕರು ಯಾವುದೇ ದುಶ್ಚಟಗಳಿಗೆ ಬಲಿಯಾಗಬಾರದು ಎಂದು ಹೇಳಿದರು.

ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಕನ್ನಡ ಭಾಷೆಯನ್ನು ಉಳಿಸುವ ಕಾರ್ಯ ಆಗಬೇಕಿದೆ ಎಂದು ತಿಳಿಸಿದರು.

ಕರವೇ ಸ್ವಾಭಿಮಾನಿ ಸೇನೆ ಸಂಘಟನೆಯ ರಾಜ್ಯಾಧ್ಯಕ್ಷ ನಿಂಗರಾಜ ಗೌಡ್ರು ಮಾತನಾಡಿದರು.

ಬಳಿಕ ಕರವೇ ಸ್ವಾಭಿಮಾನಿ ಸೇನೆ ಸಂಘಟನೆಯ ಜಿಲ್ಲಾಧ್ಯಕ್ಷ ಸಂತೋಷ್‌ ತೋಟದ, ವಕೀಲ ಭರಮಗೌಡ ಪಾಟೀಲ್ ಮಾತನಾಡಿದರು.

ಇದೇ ವೇಳೆ ಸಂಘಟನೆಯ ವತಿಯಿಂದ ಅಂಗನವಾಡಿಯ ಮಕ್ಕಳಿಗೆ ಸಮವಸ್ತ್ರ ವಿತರಿಸಲಾಯಿತು.

ಇದನ್ನೂ ಓದಿ: Self Harming: ಒಂದೇ ಕುಟುಂಬದ ಐವರ ಆತ್ಮಹತ್ಯೆ; ಪಕ್ಕದ್ಮನೆ ಗಂಡ-ಹೆಂಡ್ತಿ ಅರೆಸ್ಟ್

ಈ ಸಂದರ್ಭದಲ್ಲಿ ಸಂಘಟನೆಯ ಮುಖಂಡರಾದ ಸುರೇಶಗೌಡ, ಮಹೇಶಗೌಡ, ಸುಜ್ಞಾನ ಮೂರ್ತಿ, ಶ್ರೀಧರ ನಾಯ್ಕ, ಶ್ರೀನಿವಾಸ, ರಾಮಣ್ಣ ದಿವಾಣದ, ಪರಶುರಾಮ ಗದ್ದಿ ಹಾಗೂ ನಾರಾಯಣ ದೇಸಾಯಿ, ಅರ್ಜುನ್‌ ಇಟಗಿ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

Exit mobile version