ಕಾರಟಗಿ: ಪಟ್ಟಣದ ಆರಾಧ್ಯ ದೈವ ಶ್ರೀ ವೀರಭದ್ರೇಶ್ವರ ಹಾಗೂ ಶ್ರೀ ಶರಣಬಸವೇಶ್ವರ ದೇವರ ಕಾರ್ತಿಕ ಸಹಸ್ರ ದೀಪೋತ್ಸವ (Karthika Sahasra Dipotsava) ಶ್ರದ್ಧಾ ಭಕ್ತಿಯಿಂದ ಜರುಗಿತು.
ಕಾರ್ತಿಕ ಸಹಸ್ರ ದೀಪೋತ್ಸವದ ಅಂಗವಾಗಿ ದೇವಸ್ಥಾನದಲ್ಲಿ ಬೆಳಗ್ಗೆ ಶ್ರೀ ವೀರಭದ್ರೇಶ್ವರ ಹಾಗೂ ಶ್ರೀ ಶರಣಬಸವೇಶ್ವರ ದೇವರಿಗೆ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ, ಮಹಾಮಂಗಳಾರತಿ ಪೂಜೆ ಕಾರ್ಯಕ್ರಮಗಳು ಜರುಗಿದವು.
ಇದನ್ನೂ ಓದಿ: Safe investment : ಹೆಚ್ಚು ಸುರಕ್ಷಿತ ಹೂಡಿಕೆಗಳು ಯಾವುವು? ರಿಸ್ಕ್ ಏಕೆ ಅಗತ್ಯ?
ನಂತರ ಸಂಜೆ ಮಹಿಳೆಯರು ಮತ್ತು ನೆರೆದಿದ್ದ ನೂರಾರು ಭಕ್ತರು ದೇವಸ್ಥಾನದ ಆವರಣದಲ್ಲಿ ಶ್ರದ್ಧಾ ಭಕ್ತಿಯಿಂದ ದೀಪ ಬೆಳಗಿಸಿದರು.
ದೀಪೋತ್ಸವ ಕಾರ್ಯಕ್ರಮದಲ್ಲಿ ಭಕ್ತಾಧಿಗಳಿಗೆ ಪ್ರಸಾದ ವ್ಯವಸ್ಥೆ ಏರ್ಪಡಿಸಲಾಗಿತ್ತು.
ಇದನ್ನೂ ಓದಿ: Kannada Serials TRP: ʻಬಿಗ್ ಬಾಸ್ʼಗೆ ಭರ್ಜರಿ ಟಿಆರ್‌ಪಿ; ರೇಸ್‌ನಲ್ಲಿ ʻಭಾಗ್ಯಲಕ್ಷ್ಮೀʼ ಮಿಂಚು!
ಈ ವೇಳೆ ದೇವಸ್ಥಾನದ ಪ್ರಧಾನ ಅರ್ಚಕ ಮುತ್ತಯ್ಯ ಸ್ವಾಮಿ ಹಿರೇಮಠ ಹಾಗೂ ಸಂತೋಷ್ ಆಚಾರಿ, ರುದ್ರಮುನಿ ಸ್ವಾಮಿ, ಶಿವಶರಣಯ್ಯಸ್ವಾಮಿ, ಶಂಕ್ರಯ್ಯ ಸ್ವಾಮಿ. ಕುಳಿಗಿ ಗುಂಡಪ್ಪ, ವಿರೇಶಯ್ಯ ಸ್ವಾಮಿ ಯರಡೋಣ, ಜಗದೀಶಪ್ಪ ಅವರಾದಿ, ಸೋಮನಾಥ ಸ್ವಾಮಿ, ಸುಂಕದ ನಾಗರಾಜ್, ಶಿವಪ್ಪ, ನರೇಶ್ ರೆಡ್ಡಿ, ವಿಶ್ವನಾಥ್, ಕೊಟ್ರಪ್ಪ ಸಜ್ಜನ್, ಪಂಪಯ್ಯ ಸ್ವಾಮಿ ಸೇರಿದಂತೆ ಇತರರು ಉಪಸ್ಥಿತರಿದ್ದರು.