ಗಂಗಾವತಿ: ಗಂಗಾವತಿ ನಗರದ ಹತ್ತಕ್ಕೂ ಹೆಚ್ಚು ಅಯ್ಯಪ್ಪ ಸ್ವಾಮಿಯ (Ayyappa Swamy) ಮಾಲಾಧಾರಿಗಳು, ಕಾಲ್ನಡಿಗೆಯ ಮೂಲಕವೇ 1050 ಕಿ.ಮೀ. ದೂರದ ಕೇರಳ ರಾಜ್ಯದ ಶಬರಿಮಲೆ (Shabarimala) ಯಾತ್ರೆ ಕೈಗೊಂಡಿದ್ದಾರೆ.
ನಗರದ ವಾಲ್ಮೀಕಿ ವೃತ್ತದಿಂದ ಬುಧವಾರ ಕಿರಣ್ ಕುಮಾರ್ ಈಡಿಗ ಎಂಬ ಗುರುಸ್ವಾಮಿ ಅವರ ನೇತೃತ್ವದಲ್ಲಿ ನಗರದ ಹನುಮೇಶ ತೆಗ್ಗಿನಮನಿ, ರಾಜಾಸಿಂಗ್, ಮೋಹನ್ ನಾಯಕ್, ಚೇತನ ಕುಮಾರ್, ಚಿಕ್ಕಮಾದಿನಾಳ ಶೇಖರಗೌಡ, ಸಂಗಾಪುರ ವೀರಣ್ಣ, ಭೀಮೇಶ, ಹೇಮಂತ ಹಗರಿಬೊಮ್ಮನಹಳ್ಳಿ, ಗುರು, ಮಾಲಾಧಾರಿಗಳು ಪಾದಯಾತ್ರೆ ಆರಂಭಿಸಿದರು.
ಇದನ್ನೂ ಓದಿ: Karnataka Weather : ನಾಳೆ ಮಳೆ ಮಾಯ; ನಾಡಿದ್ದು ಪೂರ್ತಿ ಮಳೆಮಯ!
ಕಿರಣ್ ಕುಮಾರ ಈಡಿಗ ಎಂಬ ಗುರುಸ್ವಾಮಿಗೆ ಇದು ಆರನೇ ವರ್ಷದ ಕಾಲ್ನಡಿಗೆ ಪಾದಯಾತ್ರೆಯಾಗಿದ್ದು, ಹನುಮೇಶ ತೆಗ್ಗಿನಮನಿ ಅವರಿಗೆ ಎರಡನೇ ವರ್ಷದ ಪಾದಯಾತ್ರೆಯಾಗಿದೆ. ಯಾತ್ರಾರ್ಥಿಗಳು ನಿತ್ಯ 35 ರಿಂದ 40 ಕಿ.,ಮೀ ಪಾದಯಾತ್ರೆ ಮಾಡುತ್ತಿದ್ದಾರೆ.
ತಲೆ ಮೇಲೆ ಇರುಮುಡಿಯನ್ನು ಹೊತ್ತು ಕಾಲ್ನಿಡಿಗೆ ಮೂಲಕ ಸಾಗುವ ಯಾತ್ರಾರ್ಥಿಗಳಿಗೆ, ದಾರಿಯುದ್ದಕ್ಕೂ ಅಲ್ಲಲ್ಲಿ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳು ಪೀಠದಲ್ಲಿ, ಭಕ್ತರು ತಮ್ಮ ಮನೆಯಲ್ಲಿ ಪ್ರಸಾದ ವ್ಯವಸ್ಥೆ ಮತ್ತು ರಾತ್ರಿ ತಂಗುವ ವ್ಯವಸ್ಥೆ ಮಾಡುತ್ತಿದ್ದಾರೆ.
ಇದನ್ನೂ ಓದಿ: Viral Video: ಪೆಟ್ರೋಲ್ ದರದ ಚಿಂತೆ ಬಿಟ್ಹಾಕಿ; ಈ ಯುವಕನ ಐಡಿಯಾ ಫಾಲೋ ಮಾಡಿ!
1050 ಕಿ.ಮೀ. ಅಂತರದ ಯಾತ್ರೆಯನ್ನು 28 ದಿನದಲ್ಲಿ ಮುಗಿಸುವ ಸಂಕಲ್ಪದೊಂದಿಗೆ ಅಯ್ಯಪ್ಪ ಸ್ವಾಮಿಯ ಭಕ್ತರು ತೆರಳಿದ್ದು, ಜ.15ರಂದು ಶಬರಿಮಲೆ ಬೆಟ್ಟದಲ್ಲಿ ಕಾಣಿಸಿಕೊಳ್ಳಲಿರುವ ಜ್ಯೋತಿಯ ದರ್ಶನ ಮಾಡಿಕೊಂಡು ಯಾತ್ರಾರ್ಥಿಗಳು ಮರಳಲಿದ್ದಾರೆ.