ಗಂಗಾವತಿ: ನಗರದಲ್ಲಿ ಮಂಗಳವಾರ ಯುಗಾದಿ (Ugadi) ಹಬ್ಬದ ಅಂಗವಾಗಿ ಬಿಜೆಪಿ ಮಹಿಳಾ ಮೋರ್ಚಾದ ಪ್ರಮುಖರ ಮನೆಗಳ ಮುಂದೆ ʼಮತ್ತೊಮ್ಮೆ ಮೋದಿʼ ಎಂಬ ರಂಗೋಲಿ ಅಭಿಯಾನ (Koppala News) ಹಮ್ಮಿಕೊಳ್ಳಲಾಯಿತು.
ಬಿಜೆಪಿ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಭಾರತಿ ಶೆಟ್ಟಿ ಅವರ ಸೂಚನೆ ಮರೆಗೆ ಮಹಿಳಾ ಸದಸ್ಯರ ಮನೆಗಳ ಮುಂದೆ ಯುಗಾದಿ ಹಬ್ಬದ ಅಂಗವಾಗಿ ರಂಗೋಲಿಯಲ್ಲಿ ಕಮಲದ ಚಿಹ್ನೆ ಬಿಡಿಸಿ, ಅದಕ್ಕೆ ಬಣ್ಣ ತುಂಬುವ ಮೂಲಕ ಅಭಿಯಾನ ನಡೆಸಲಾಯಿತು.
ಇದನ್ನೂ ಓದಿ: Blood Pressure: ಈ 10 ಸೂತ್ರ ಪಾಲಿಸಿ; ಬಿಪಿ ನಿಮ್ಮ ಹತ್ತಿರವೂ ಸುಳಿಯದು!
ಗಂಗಾವತಿ ಬಿಜೆಪಿಯ ಮಹಿಳಾ ಘಟಕದ ಪ್ರಭಾರಿ ಶೋಭಾ ರಾಯ್ಕರ್ ಮಾತನಾಡಿ, ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಬೇಕು ಎಂಬ ಪಕ್ಷದ ಇಂಗಿತದ ಮೇರೆಗೆ ರಂಗೋಲಿ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.
ಇದನ್ನೂ ಓದಿ: Ola Cabs : ಜಾಗತಿಕ ಮಟ್ಟದಲ್ಲಿ ಒಲಾ ಕ್ಯಾಬ್ ಸೇವೆ ಬಂದ್; ಯಾಕೆ ಈ ನಿರ್ಧಾರ ?
ಈ ಸಂದರ್ಭದಲ್ಲಿ ಬಿಜೆಪಿ ಪಕ್ಷದ ಮಹಿಳಾ ಪ್ರಮುಖರಾದ ರೇಖಾ ರಾಯಭಾಗಿ, ರಾಜೇಶ್ವರಿ, ಸರಸ್ವತಿ ರಾಯಭಾಗಿ, ಶೈಲಜಾ ಸೇರಿದಂತೆ ಇತರೆ ಮಹಿಳಾ ಸದಸ್ಯರ ಮನೆಯ ಅಂಗಳದಲ್ಲಿ ಮತ್ತೊಮ್ಮೆ ಮೋದಿ ಎಂಬ ಚಿತ್ತಾಕರ್ಷಕ ರಂಗೋಲಿಗಳು ಗಮನ ಸೆಳೆದವು.