ಗಂಗಾವತಿ: ನಾನಾ ಇಲಾಖೆಯ ಅಧಿಕಾರಿಗಳು ತಮ್ಮಲ್ಲಿ ಸಿಬ್ಬಂದಿ (Staff) ಕೊರತೆ, ಕಟ್ಟಡ ಸಮಸ್ಯೆ ಹಾಗೂ ಅಗತ್ಯ ಸೌಕರ್ಯಗಳ ಸಮಸ್ಯೆ ಇದೆ ಎಂದು ಹೇಳುತ್ತಿದ್ದೀರಿ, ಇದುವರೆಗೂ ಇಲಾಖಾವಾರು ಸರ್ಕಾರಕ್ಕೆ ಸಲ್ಲಿಸಿದ ಪ್ರಸ್ತಾವನೆ, ಮಾಹಿತಿಯನ್ನು (Information) ನನಗೆ ಒಂದು ಪ್ರತಿ ಕೊಡಿ ಎಂದು ಶಾಸಕ ಜಿ. ಜನಾರ್ದನರೆಡ್ಡಿ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ವಿವಿಧ ಇಲಾಖೆಗಳ ತ್ರೈಮಾಸಿಕ ಪ್ರಗತಿ ಪರಿಶೀಲನೆ (ಕೆಡಿಪಿ) ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಾಕಷ್ಟು ಇಲಾಖೆಯ ಅಧಿಕಾರಿಗಳು ತಮ್ಮಲ್ಲಿ ಸಿಬ್ಬಂದಿ ಕೊರತೆ ಇದೆ ಎಂದು ಹೇಳಿಕೊಳ್ಳುತ್ತಿದ್ದೀರಿ, ಇನ್ನು ಕೆಲವರು ಕಚೇರಿ ಹಳೇಯದಾಗಿದೆ ಎಂದು, ಸ್ವಂತ ಕಟ್ಟಡವಿಲ್ಲ ಎಂದು ಹೇಳುತ್ತಿದ್ದೀರಿ. ಈ ಸಂಬಂಧ ಇದುವರೆಗೂ ಇಲಾಖೆಯ ಮೇಲಧಿಕಾರಿಗಳೊಂದಿಗೆ ಮಾಡಿದ ಪತ್ರ ವ್ಯವಹಾರ, ಸಲ್ಲಿಸಿದ ಮನವಿಯ ಒಂದು ಪ್ರತಿಯನ್ನು ನನ್ನ ಕಚೇರಿಗೆ ತಲುಪಿಸಿ, ನಾನು ಸಂಬಂಧಪಟ್ಟ ಇಲಾಖೆಯ ಆಯುಕ್ತರು, ಸಚಿವರ ಗಮನಕ್ಕೆ ತಂದು ಸಮಸ್ಯೆ ಪರಿಹರಿಸಲು ಯತ್ನಿಸುತ್ತೇನೆ. ಯಾವ ಇಲಾಖೆಗೆ ಸ್ವಂತ ಕಟ್ಟಡಗಳಿಲ್ಲವೋ ಅವರು ಕೂಡಲೆ ಪ್ರಸ್ತಾವನೆ ತಯಾರಿಸಿ ಕೊಡಿ ಎಂದು ಶಾಸಕರು ಸೂಚನೆ ನೀಡಿದರು.
ಇದನ್ನೂ ಓದಿ: Mysore Dasara : ದಸರಾ ಹಬ್ಬಕ್ಕಾಗಿ ವಿಶೇಷ ರೈಲುಗಳ ಸಂಚಾರ
ಕೆಡಿಪಿಯಂತ ಮಹತ್ವದ ಸಭೆಯನ್ನು ಗಂಭೀರವಾಗಿ ಪರಿಗಣಿಸದೇ ಗೈರು ಹಾಜರಾಗಿರುವ ಅಧಿಕಾರಿಗಳಿಗೆ ಕಾರಣ ಕೇಳಿ ನೋಟೀಸ್ ಜಾರಿ ಮಾಡುವಂತೆ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕುಡಿಯುವ ನೀರಿನ ಯೋಜನೆ ಸಮರ್ಪಕ ಅನುಷ್ಠಾನಕ್ಕೆ ಸಂಬಂಧಿಸಿದಂತೆ ನಿಗಧಿತ ಕಾಲಾವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸದ ಗುತ್ತಿಗೆದಾರರ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ಗ್ರಾಮೀಣ ಕುಡಿಯುವ ನೀರು ವಿಭಾಗದ ಅಧಿಕಾರಿ ಸತೀಶ್‌ಗೆ ಶಾಸಕರು ಸೂಚನೆ ನೀಡಿದರು.
ನಗರದಲ್ಲಿ ಅಂಗನವಾಡಿ ಕೇಂದ್ರಗಳಿಗೆ ಕಟ್ಟಡಗಳಿಲ್ಲ ಎಂದು ಶಿಶು ಅಭಿವರದ್ಧಿ ಅಧಿಕಾರಿ ರೋಹಿಣಿ ಕೊಟಗಾರ ಮಾಹಿತಿ ನೀಡಿದರು. ಕೃಷಿ ಇಲಾಖೆಯ ಕಚೇರಿ ಹಳೇಯದಾಗಿದ್ದು,, ಅತ್ಯಂತ ಸಂಕೀರ್ಣವಾಗಿದೆ. ನೂತನ ಕಟ್ಟಡ ಮತ್ತು ವಿಶಾಲ ಜಾಗಬೇಕು ಎಂದು ಕೃಷಿ ಅಧಿಕಾರಿ ಸಂತೋಷ್ ಪಟ್ಟದಕಲ್ ಸಭೆಗೆ ಮಾಹಿತಿ ನೀಡಿದರು.
ಇದನ್ನೂ ಓದಿ: Midday Sleep: ಹಗಲಿನಲ್ಲಿ ನಿದ್ದೆ ಮಾಡಿದರೆ ಏನಾಗುತ್ತದೆ?
ತಹಸೀಲ್ದಾರ್‌ಗಳಾದ ಮಂಜುನಾಥ ಹಿರೇಮಠ ಗಂಗಾವತಿ, ವಿಠಲ್ ಚೌಗಲೆ ಕೊಪ್ಪಳ, ತಾಲೂಕು ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಲಕ್ಷ್ಮಿದೇವಿ ಗಂಗಾವತಿ, ದುಂಡಪ್ಪ ತುರಾದಿ ಕೊಪ್ಪಳ, ಪೌರಾಯುಕ್ತ ಆರ್. ವಿರೂಪಾಕ್ಷ ಮೂರ್ತಿ ಇದ್ದರು. ಗಂಗಾವತಿ, ಕನಕಗಿರಿ, ಕಾರಟಗಿ ಮತ್ತು ಕೊಪ್ಪಳದ ಅಧಿಕಾರಿಗಳು ಪಾಲ್ಗೊಂಡಿದ್ದರು.