Site icon Vistara News

Koppala News: ನಗರಸಭೆ ಮಾಜಿ ಅಧ್ಯಕ್ಷೆ ಪತಿಯಿಂದ ಪೌರಾಯುಕ್ತರಿಗೆ ಅಶ್ಲೀಲ ಮೆಸೇಜ್; ಪೌರ ಕಾರ್ಮಿಕರ ಪ್ರತಿಭಟನೆ

Protest by civil workers against the husband of former chairperson of Gangavati Municipal Council

ಗಂಗಾವತಿ: ಇಲ್ಲಿನ ನಗರಸಭೆಯ ಮಾಜಿ ಅಧ್ಯಕ್ಷೆಯ ಪತಿ ನಗರಸಭೆ ಪೌರಾಯುಕ್ತರಿಗೆ ಅಶ್ಲೀಲ ಸಂದೇಶ ರವಾನಿಸಿದ್ದನ್ನು ಖಂಡಿಸಿ, ಪೌರಕಾರ್ಮಿಕರು ಶುಕ್ರವಾರ ಪ್ರತಿಭಟನೆ (Koppala News) ನಡೆಸಿದರು.

ಗಂಗಾವತಿ ನಗರಸಭೆ ಮಾಜಿ ಅಧ್ಯಕ್ಷೆಯ ಪತಿ ಸಂದೀಪ.

ಗಂಗಾವತಿ ನಗರಸಭೆ ಮಾಜಿ ಅಧ್ಯಕ್ಷೆ ಮಾಲಾಶ್ರೀ ಅವರ ಪತಿ ಸಂದೀಪ ಅಶ್ಲೀಲ ಮೆಸೇಜ್‌ ಮಾಡಿದ್ದಾರೆ ಎಂದು ದೂರಲಾಗಿದೆ. ಪೌರಾಯುಕ್ತ ವಿರೂಪಾಕ್ಷಮೂರ್ತಿ ಅವರಿಗೆ ಸಂದೀಪ ಅಶ್ಲೀಲವಾಗಿ ಆಡಿಯೋ ಮೆಸೇಜ್‌ ಕಳಿಸಿದ್ದಾನೆ ಎಂದು ಆರೋಪಿಸಿ, ಪೌರಾಯುಕ್ತ ವಿರೂಪಾಕ್ಷಮೂರ್ತಿ ಅವರನ್ನು ಬೆಂಬಲಿಸಿ ಹಾಗೂ ಸಂದೀಪನ ನಡೆಯನ್ನು ಖಂಡಿಸಿ, ಪೌರಕಾರ್ಮಿಕರು ಕೆಲಸವನ್ನು ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಿದರು. ಅಲ್ಲದೆ, ಸಂದೀಪನನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಇದನ್ನೂ ಓದಿ: Gold Rate Today: ಚಿನ್ನದ ಬೆಲೆ ಮತ್ತೆ ಏರಿಕೆ; ಇಂದಿನ ದರ ಹೀಗಿದೆ ನೋಡಿ

ಪೌರಾಯುಕ್ತರನ್ನು ಬೆಂಬಲಿಸಿ ಪಕ್ಷಾತೀತವಾಗಿ ನಗರಸಭೆಗೆ ಆಗಮಿಸಿದ ನಗರಸಭೆ ಸದಸ್ಯರು ಸಹ ಸಂದೀಪನ ನಡೆಯನ್ನು ಬಲವಾಗಿ ಖಂಡಿಸಿದರು. ತಮಗೆ ಅಶ್ಲೀಲ ಮೆಸೇಜ್‌ ಕಳಿಸಿ ವಾಟ್ಸಾಪ್‌ ಗ್ರೂಪ್‌ಗೆ ಆ ಅಶ್ಲೀಲ ಆಡಿಯೋ ಮೆಸೇಜ್‌ನ್ನು ಹಾಕಿರುವ ಸಂದೀಪನ ವಿರುದ್ಧ ನಗರಸಭೆ ಪೌರಾಯುಕ್ತ ವಿರೂಪಾಕ್ಷಮೂರ್ತಿ ಪ್ರಕರಣ ದಾಖಲಿಸಿದ್ದಾರೆ.

ಇದನ್ನೂ ಓದಿ: Bengaluru News: ಭವಿಷ್ಯಕ್ಕೆ ಬೇಕಾಗಿರುವ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಗಳಿಗಾಗಿ ಎನ್‌ಎಸ್‌ಡಿಸಿ, ವಿಟಿಯು ನಡುವೆ ಸಹಭಾಗಿತ್ವ

ಪೌರಾಯಕ್ತರಿಗೆ ತೀರ ಕೆಳಮಟ್ಟದ ಭಾಷೆಯಲ್ಲಿ ಮಾತನಾಡಿರುವ ನಗರಸಭೆ ಮಾಜಿ ಅಧ್ಯಕ್ಷೆಯ ಪತಿ ಸಂದೀಪ್‌ ಆಡಿಯೋ ರೆಕಾರ್ಡ್ ಮಾಡಿ ವೈರಲ್ ಮಾಡಿದ್ದಾರೆ ಎಂದು ದೂರಲಾಗಿದೆ.

Exit mobile version