ಗಂಗಾವತಿ: ಇಲಾಖೆಗೆ ಸಂಬಂಧಿಸಿದಂತೆ ಈ ಹಿಂದೆ ತಯಾರಿಸಿದ್ದ ಮಾಹಿತಿ (Information) ನೀಡಬೇಡಿ, ಯಾವ ಇಲಾಖೆಗೆ ಸಂಬಂಧಿತ ಮಾಹಿತಿ ಕೇಳಿದ್ದೇನೋ ಮುಂದಿನ ತಿಂಗಳು ನಡೆಯುವ ಸಭೆಯಲ್ಲಿ ಆಯಾ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಬೇಕು ಎಂದು ನೋಡಲ್ ಅಧಿಕಾರಿ ರಾಮಚಂದ್ರ ಗಡಾದ, ಅಧಿಕಾರಿಗಳಿಗೆ ತಾಕೀತು (Koppala News) ಮಾಡಿದರು.
ಹಿರಿಯ ಶ್ರೇಣಿಯ ಕೆಎಎಸ್ ಅಧಿಕಾರಿಗಳನ್ನು ರಾಜ್ಯ ಸರ್ಕಾರ ತಾಲೂಕಿಗೊಬ್ಬರನ್ನು ಉಸ್ತುವಾರಿ ಅಧಿಕಾರಿಗಳನ್ನಾಗಿ ನೇಮಕ ಮಾಡಿದ ಹಿನ್ನೆಲೆ ಗಂಗಾವತಿಯ ನೋಡಲ್ ಅಧಿಕಾರಿಯಾಗಿ ನೇಮಕವಾಗಿರುವ ರಾಮಚಂದ್ರ ಗಡಾದ್, ಗುರುವಾರ ಇಲ್ಲಿನ ಮಂಥನ ಸಭಾಂಗಣದಲ್ಲಿ ತಾಲೂಕು ಹಂತದ ಅನುಷ್ಠಾನ ಅಧಿಕಾರಿಗಳ ಸಭೆ ನಡೆಸಿ, ಮಾತನಾಡಿದರು.
ಮುಂಬರುವ ಬೇಸಿಗೆ ಹಿನ್ನಲೆಯಲ್ಲಿ ಜನ ಮತ್ತು ಜಾನುವಾರುಗಳಿಗೆ ಕುಡಿಯುವ ನೀರು, ಮೇವು ದಾಸ್ತಾನು ಇರುವ ಬಗ್ಗೆ ಮಾಹಿತಿ ಪಡೆದುಕೊಂಡರು. ಮೇವು ಹೊರ ಜಿಲ್ಲೆಗೆ ಹೋಗದಂತೆ ನಿಗಾ ವಹಿಸಿ ಎಂದು ಸೂಚನೆ ನೀಡಿದರು.
ಇದನ್ನೂ ಓದಿ: Ballari News: ಬಿಕಾಂ, ಬಿಬಿಎನಲ್ಲಿ 4 ರ‍್ಯಾಂಕ್ ಪಡೆದ ಬಳ್ಳಾರಿಯ ಎಸ್.ಜಿ.ಟಿ ಕಾಲೇಜಿನ ವಿದ್ಯಾರ್ಥಿಗಳು
ಈ ಸಭೆಯಲ್ಲಿ ಕೇಳಲಾಗಿರುವ ಮಾಹಿತಿ ಮತ್ತು ನೀಡಿದ ಗುರಿ-ಸಾಧನೆಯೊಂದಿಗೆ ಮುಂದಿನ ತಿಂಗಳ ಹಾಜರಾಗಬೇಕು ಎಂದು ಅವರು ಸೂಚನೆ ನೀಡಿದರು.
ಜಿಲ್ಲಾ ಪಂಚಾಯಿತಿಯ ಗ್ರಾಮೀಣ ಕುಡಿಯುವ ನೀರು ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ವಿಜಯಕುಮಾರ ಸಭೆಗೆ ಮಾಹಿತಿ ನೀಡಿ, ತಾಲೂಕಿನಲ್ಲಿ 18 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 170 ಜನವಸತಿ ಪ್ರದೇಶಗಳನ್ನು ಗುರುತಿಸಲಾಗಿದೆ. ಬೋರ್‌ವೆಲ್, ನದಿ ನೀರಿನ ಮೂಲಗಳಿಂದ ಈಗಾಗಲೆ ಜನರಿಗೆ ಕುರಿಯುವ ನೀರು ಪೂರೈಸಲಾಗುತ್ತಿದೆ. ಮುಂದಿನ ಮೂರ್ನಾಲ್ಕು ವಾರಕ್ಕೆ ಯಾವುದೇ ಸಮಸ್ಯೆ ಇಲ್ಲ. ಆದರೆ ಮುಂಬರುವ ದಿನಗಳಲ್ಲಿ ಬೇಸಿಗೆ ಹೆಚ್ಚಳವಾಗಿ ಅಂತರ್ಜಲ ಕುಸಿದರೆ ಸಮಸ್ಯೆ ಎದುರಾಗಲಿದೆ.
ಇದಕ್ಕಾಗಿ ಖಾಸಗಿ ಬೋರ್‌ವೆಲ್‌ಗಳನ್ನು ಆಶ್ರಯಿಸಿ ಹಣ ಕೊಟ್ಟು ನೀರು ಪಡೆದುಕೊಳ್ಳಲು ಯೋಜನೆ ರೂಪಿಸಲಾಗಿದೆ. ಒಂದೊಂದು ಬೋರ್‌ವೆಲ್‌ಗೆ ತಲಾ 9 ರಿಂದ 12 ಸಾವಿರ ಗರಿಷ್ಠ 15 ಸಾವಿರ ಮೊತ್ತದ ಹಣ ನೀಡಬಹುದು. ಇದಕ್ಕಾಗಿ ಪ್ರತಿ ತಾಲೂಕಿನ ತಹಸೀಲ್ದಾರ್ ಖಾತೆಗೆ ತಲಾ ಐವ್ವತ್ತು ಲಕ್ಷ, ಶಾಸಕರಿಗೆ ಪ್ರತ್ಯೇಕವಾಗಿ 25 ಲಕ್ಷ ಮೊತ್ತದ ಅನುದಾನ ಸರ್ಕಾರ ಬಿಡುಗಡೆ ಮಾಡಿದೆ. ಅಗತ್ಯ ಬಿದ್ದರೆ ಖಾಸಗಿ ಬೋರ್‌ವೆಲ್ ಹಾಕಿಸಬೇಕು ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ: Karnataka Weather : ರಾಜ್ಯದಲ್ಲಿ ನಾಳೆ ಕನಿಷ್ಠ -ಗರಿಷ್ಠ ಉಷ್ಣಾಂಶದಲ್ಲಿ ಏರಿಕೆ
ಸಭೆಯಲ್ಲಿ ಪಶುಸಂಗೋಪನೆ, ಸಾರಿಗೆ, ಆರೋಗ್ಯ, ಕೃಷಿ, ತೋಟಗಾರಿಕೆ, ಮೀನುಗಾರಿಗೆ, ಅರಣ್ಯ, ಪೊಲೀಸ್, ಕೃಷಿ ಮಾರುಕಟ್ಟೆ, ನಗರ ಯೋಜನಾ ಪ್ರಾಧಿಕಾರ ಸೇರಿದಂತೆ ನಾನಾ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದರು.
ಈ ವೇಳೆ ತಹಸೀಲ್ದಾರ್ ಯು. ನಾಗರಾಜ್ ಹಾಗೂ ಇತರರು ಪಾಲ್ಗೊಂಡಿದ್ದರು.