ಕನಕಗಿರಿ: ಪಟ್ಟಣ ಸೇರಿದಂತೆ ತಾಲೂಕಿನ ಗ್ರಾಮೀಣ ಭಾಗದಲ್ಲಿರುವ ಎಲ್ಲಾ ಮತಗಟ್ಟೆಗಳಲ್ಲಿ ಮೂಲಸೌಕರ್ಯ (Infrastructure) ಕಲ್ಪಿಸಲು ಅಧಿಕಾರಿಗಳಿಗೆ ಜಿ.ಪಂ ಉಪಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ (Koppala News) ಸೂಚಿಸಿದರು.
ಇದನ್ನೂ ಓದಿ: Utthana Essay Competition 2023: ಉತ್ಥಾನ ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಬೆಂಗಳೂರಿನ ಕಾವ್ಯಜೋಗಿ ಪ್ರಥಮ
ತಾಲೂಕಿನ ಹಿರೇಖೇಡಾ ಗ್ರಾ.ಪಂ ವ್ಯಾಪ್ತಿಯ ಮತಗಟ್ಟೆಗಳನ್ನು ಗುರುವಾರ ಪರಿಶೀಲನೆ ನಡೆಸಿ ಮಾತನಾಡಿದ ಅವರು, ಮತಗಟ್ಟೆಗಳಲ್ಲಿ ಮೂಲಸೌಕರ್ಯಗಳಾದ ಕುಡಿಯುವ ನೀರು, ಶೌಚಾಲಯ, ವಿದ್ಯುತ್ ವ್ಯವಸ್ಥೆ ಕಲ್ಪಿಸಲು ತಿಳಿಸಿದರು. ಜತೆಗೆ ಎಲ್ಲಾ ಮತಗಟ್ಟೆಗಳಿಗೆ ನಂಬರ್ ಹಾಗೂ ಸಹಾಯವಾಣಿ ಸಂಖ್ಯೆಯನ್ನು ಬರೆಸಲು ಅಧಿಕಾರಿಗಳಿಗೆ ಸೂಚಿಸಿದರು.
ನಂತರ ಗ್ರಾ.ಪಂ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಡಿ ಅನುಷ್ಠಾನಗೊಂಡ ಕಾಮಗಾರಿಗಳಾದ ದನದ ಶೆಡ್, ಸಿಸಿ ರಸ್ತೆ, ಚರಂಡಿ ಕಾಮಗಾರಿಗಳನ್ನು ಈ ವೇಳೆ ವೀಕ್ಷಿಸಿದರು.
ಇದನ್ನೂ ಓದಿ: Income Tax : ತೆರಿಗೆ ಉಳಿತಾಯ ಮಾಡಲು ಇನ್ನೆರಡೇ ದಿನ ಅವಕಾಶ, ಏನೇನು ಮಾಡಬಹುದು ಇನ್ನು?
ಈ ಸಂದರ್ಭದಲ್ಲಿ ತಹಸೀಲ್ದಾರ್ ವಿಶ್ವನಾಥ ಮುರುಡಿ, ತಾ.ಪಂ ಇಒ ಎಲ್.ವಿರೇಂದ್ರಕುಮಾರ್, ಸಹಾಯಕ ನಿರ್ದೇಶಕ (ಗ್ರಾ.ಉ) ಚಂದ್ರಶೇಖರ್ ಕಂದಕೂರ್, ಗ್ರಾ.ಪಂ ಪಿಡಿಒ ಯು.ಮಲ್ಲಿಕಾರ್ಜುನ ಸೇರಿದಂತೆ ಸಿಬ್ಬಂದಿ ಹಾಜರಿದ್ದರು.