Site icon Vistara News

Koppala News: ವಿದ್ಯುತ್‌ ತಂತಿಗೆ ತಗುಲಿ ಗಾಯಗೊಂಡಿದ್ದ ನವಿಲಿನ ರಕ್ಷಣೆ

Rescue the injured national bird Peacock at gangavathi

ಗಂಗಾವತಿ: ಹಾರುವ ಸಂದರ್ಭದಲ್ಲಿ ವಿದ್ಯುತ್ ತಂತಿಗೆ ತಗುಲಿ ರೆಕ್ಕೆ ಹಾಗೂ ಕಾಲಿಗೆ ಗಾಯಮಾಡಿಕೊಂಡು ಹಾರಲಾಗದ ಸ್ಥಿತಿಯಲ್ಲಿದ್ದ ನವಿಲೊಂದನ್ನು (Peacock) ಸ್ಥಳೀಯ ಜಯನಗರದ ಯುವಕರು (Koppala News) ರಕ್ಷಣೆ ಮಾಡಿ, ಮಾನವೀಯತೆ ಮೆರೆದಿದ್ದಾರೆ.

ಇಲ್ಲಿನ ಜಯನಗರದ ಮೊದಲ ಹಂತದಲ್ಲಿರುವ ಸತ್ಯನಾರಾಯಣ ಪೇಟೆ ಮೊದಲ ಹಂತದಲ್ಲಿ ಈ ಘಟನೆ ಭಾನುವಾರ ನಡೆದಿದ್ದು, ಗಾಯಗೊಂಡಿದ್ದ ನವಿಲಿನ ಮೇಲೆ ನಾಯಿಗಳು ದಾಳಿ ಮಾಡುತ್ತಿರುವುದನ್ನು ಕಂಡ ಸ್ಥಳೀಯರು ನಾಯಿಗಳನ್ನು ಓಡಿಸಿದ್ದಾರೆ. ಹಾರಾಡಲಾಗದ ಸ್ಥಿತಿಯಲ್ಲಿದ್ದ ನವಿಲನ್ನು ಸ್ಥಳೀಯ ಜಯನಗರ ವ್ಯಾಪ್ತಿಯ ವಾಲ್ಮೀಕಿ ನಗರದ ರಾಮು, ಲಕ್ಷ್ಮಣ, ಫಕೀರಪ್ಪ ಎಂಬ ಯುವಕರು ರಕ್ಷಣೆ ಮಾಡಿ, ಆರೈಕೆ ಮಾಡಿದ್ದಾರೆ.

ಇದನ್ನೂ ಓದಿ: Karnataka Weather : ಬೆಂಗಳೂರಲ್ಲಿ ಸಂಜೆಗೆ ದಿಢೀರ್‌ ಗುಡುಗು ಸಹಿತ ಮಳೆ; ನೇತ್ರಾವತಿ, ಪಲ್ಗುಣಿ ನದಿ ತೀರ ಪ್ರದೇಶದಲ್ಲಿ ನೆರೆ

ಬಳಿಕ ಅರಣ್ಯ ಇಲಾಖೆಯ ಗಂಗಾವತಿ ನಗರದ ಡಿಆರ್‌ಎಫ್‌ಒ ಶ್ರೀನಿವಾಸ ಅವರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಗಂಗಾವತಿ ನಗರ ವ್ಯಾಪ್ತಿಯ ಬೀಟ್ ಫಾರೆಸ್ಟರ್ ಶಿವಾನಂದ ಹಾಗೂ ವಾಚರ್ ಬೂದೇಶ್ವರ ಅವರಿಗೆ, ಗಾಯಗೊಂಡಿದ್ದ ನವಿಲಿಗೆ ಚಿಕಿತ್ಸೆ ಕೊಡಿಸಿ, ಸಂರಕ್ಷಣೆ ಮಾಡಿ ಎಂದು ಮನವಿ ಮಾಡಿದ ಯುವಕರು, ಹಿರಿಯ ಯಮನಪ್ಪ ನಾಯಕ್ ನೇತೃತ್ವದಲ್ಲಿ ನವಿಲನ್ನು ಹಸ್ತಾಂತರ ಮಾಡಿದರು.

Exit mobile version