Site icon Vistara News

Koppala News: ಗಂಗಾವತಿಯಲ್ಲಿ ಡಿ.17ರಂದು ಸತ್ಯಂ ಸಿನಿಮಾದ ಧ್ವನಿ ಸುರುಳಿ ಬಿಡುಗಡೆ

Satyam movie producer Mahanthesha VK pressmeet in Gangavathi

ಗಂಗಾವತಿ: ಶ್ರೀಮಾತಾ ಕ್ರಿಯೇಷನ್ ಬ್ಯಾನರ್ ಅಡಿಯಲ್ಲಿ ನಿರ್ಮಾಣಗೊಂಡಿರುವ `ಸತ್ಯಂ’ ಎಂಬ ಕನ್ನಡ ಸಿನಿಮಾದ (Satyam Kannada Movie) ಧ್ವನಿ ಸುರುಳಿ ಬಿಡುಗಡೆ ಕಾರ್ಯಕ್ರಮವು ಡಿ.17 ರಂದು ನಗರದಲ್ಲಿ ನಡೆಯಲಿದೆ ಎಂದು ಚಿತ್ರದ ನಿರ್ಮಾಪಕ ಮಹಾಂತೇಶ್‌ ವಿ.ಕೆ. ತಿಳಿಸಿದರು.

ನಗರದ ಖಾಸಗಿ ಹೊಟೇಲ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿತ್ರ ನಿರ್ಮಾಣಕ್ಕೆ ಒಟ್ಟು ಐದು ಕೋಟಿ ಮೊತ್ತದ ಬಜೆಟ್ ವೆಚ್ಚ ಮಾಡಲಾಗಿದೆ. ಕರ್ನಾಟಕದ ಮಲೆನಾಡು, ಬೆಂಗಳೂರು ಹಾಗೂ ಹೈದರಾಬಾದ್ ಸೇರಿದಂತೆ ನಾನಾ ಭಾಗದಲ್ಲಿ ಚಿತ್ರೀಕರಣ ಮಾಡಲಾಗಿದೆ. ಜನವರಿ ತಿಂಗಳಲ್ಲಿ ಚಲನಚಿತ್ರ ಬಿಡುಗಡೆಯ ಯೋಜನೆ ರೂಪಿಸಲಾಗುತ್ತಿದೆ ಎಂದು ತಿಳಿಸಿದರು.

ಚಿತ್ರದ ನಾಯಕ ನಟ ಸಂತೋಷ್ ಬಾಲರಾಜ್‌, ಚಿತ್ರದ ನಾಯಕಿ ರಂಜನಿ ರಾಘವನ್ ಮತ್ತು ಹೆಸರಾಂತ ನಟರಾದ ಅವಿನಾಶ್, ಪವಿತ್ರಾ ಲೋಕೋಶ್, ವಿನಯಾ ಪ್ರಸಾದ್, ನಟರಾಜ, ಮುಖ್ಯಮಂತ್ರಿ ಚಂದ್ರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ: Scholarship for Students: ಈ ಯೋಜನೆಯಡಿ ಸಿಗಲಿದೆ ವಿದ್ಯಾರ್ಥಿ ವೇತನ; ಇಂದೇ ಅರ್ಜಿ ಸಲ್ಲಿಸಿ

ಸತ್ಯಂ ಚಿತ್ರಕ್ಕೆ ರವಿ ಬಸರೂರು ಸಂಗೀತ ನೀಡಿದ್ದಾರೆ ಎಂದ ಅವರು, ಕಾರ್ಯಕ್ರಮದಲ್ಲಿ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ, ಸ್ಥಳೀಯ ಚುನಾಯಿತ ಜನಪ್ರತಿನಿಧಿಗಳು, ಪ್ರಮುಖರು ಪಾಲ್ಗೊಳ್ಳಲಿದ್ದಾರೆ. ಧ್ವನಿ ಸುರುಳಿ ಬಿಡುಗಡೆ ಬಳಿಕ ಸಂಗೀತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ: Money Guide: ಮನೆಯಲ್ಲಿ ಎಷ್ಟು ಕ್ಯಾಶ್​ ಇಟ್ಟುಕೊಳ್ಳಬಹುದು? ನಿಯಮ ಮೀರಿದರೆ ದಂಡ ಖಚಿತ

ಈ ಸಂದರ್ಭದಲ್ಲಿ ಪ್ರಮುಖರಾದ ತಿಪ್ಪೇರುದ್ರಸ್ವಾಮಿ, ಅಶೋಕಸ್ವಾಮಿ ಹೇರೂರು, ಮನೋಹರಸ್ವಾಮಿ, ರಾಘವೇಂದ್ರ ಶೆಟ್ಟಿ ಉಪಸ್ಥಿತರಿದ್ದರು.

Exit mobile version