ಗಂಗಾವತಿ: ತಾಲೂಕಿನ ಕೇಸರಹಟ್ಟಿ ಗ್ರಾಮದಲ್ಲಿ ಮಂಗಳವಾರ ಸಂಜೆ ಯುಗಾದಿಯ ಹೊಸ ವರ್ಷದಂದು ನಡೆಯುವ ಶ್ರೀ ತಾಯಮ್ಮ ದೇವಿ ರಥೋತ್ಸವವು ಸಡಗರ ಸಂಭ್ರಮದಿಂದ (Koppala News) ಜರುಗಿತು. ಮಹಿಳೆಯರೇ ಇಲ್ಲಿ ತೇರು ಎಳೆಯುವುದು ಇಲ್ಲಿನ ವಿಶೇಷ.
ಮಂಗಳವಾರ ಸಂಜೆ ನಡೆದ ರಥೋತ್ಸವದಲ್ಲಿ ಗ್ರಾಮದ ನೂರಾರು ಮಹಿಳೆಯರು ಶ್ರೀ ತಾಯಮ್ಮ ದೇವಸ್ಥಾನದಿಂದ ಪಾದಗಟ್ಟೆವರೆಗೆ ಮತ್ತು ಪಾದಗಟ್ಟೆಯಿಂದ ಪುನಃ ದೇಗುಲದವರೆಗೆ ಶ್ರದ್ಧಾ ಭಕ್ತಿಯಿಂದ ರಥ ಎಳೆದು ಭಕ್ತಿ ಸಮರ್ಪಿಸಿದರು.
ಇದನ್ನೂ ಓದಿ: Job Alert: ವಿವಿಧ ಇಲಾಖಾ ಪರೀಕ್ಷೆಗಳ ವೇಳಾಪಟ್ಟಿ ಪ್ರಕಟಿಸಿದ ಕರ್ನಾಟಕ ಲೋಕಸೇವಾ ಆಯೋಗ; ಟೈಮ್ ಟೇಬಲ್ ಇಲ್ಲಿ ವೀಕ್ಷಿಸಿ
ಈ ಕುರಿತು ಮಾತನಾಡಿದ ಗ್ರಾಮದ ಬಸವೇಶ್ವರ ದೇವಸ್ಥಾನ ಟ್ರಸ್ಟ್ ಸಮಿತಿ ಅಧ್ಯಕ್ಷ ಮುದೇಗೌಡ ಮಾಲಿಪಾಟೀಲ್, ಕಳೆದ ಹಲವು ವರ್ಷದಿಂದ ಯುಗಾದ ಹಬ್ಬದ ದಿನ ನಮ್ಮೂರಿನ ಮಹಿಳೆಯರೇ ರಥೋತ್ಸವ ಎಳೆಯುವ ಸಂಪ್ರದಾಯವನ್ನು ಪಾಲಿಸಿಕೊಂಡು ಬಂದಿದ್ದೇವೆ ಎಂದರು.
ಇದನ್ನೂ ಓದಿ: karnataka Weather : ಬೆಂಗಳೂರು ಸೇರಿ ಹಲವೆಡೆ ಸುಡುತ್ತಿದೆ ಉರಿ ಬಿಸಿಲು; ಮತ್ಯಾವಾಗ ಮಳೆ
ಗ್ರಾಮದಲ್ಲಿ ಮೊದಲು ತಾಯಮ್ಮ ದೇವಸ್ಥಾನವನ್ನು ಮಹಿಳೆಯರೇ ನಿರ್ಮಾಣ ಮಾಡಿ ಪೂಜೆ ಮತ್ತು ಧಾರ್ಮಿಕ ಕಾರ್ಯಕ್ರಮಗಳನ್ನು ಆಚರಿಸಿಕೊಂಡು ಬಂದಿದ್ದಾರೆ. ಕಳೆದ ಐದಾರು ವರ್ಷದಿಂದ ರಥೋತ್ಸವ ನಿರ್ಮಾಣ ಮಾಡಿದ ಬಳಿಕ ಮಹಿಳೆಯರೇ ರಥೋತ್ಸವ ಎಳೆಯುವುದು, ಸಂಪ್ರದಾಯದಂತೆ ಪಾಲಿಸಿಕೊಂಡು ಬಂದಿದ್ದೇವೆ ಎಂದು ತಿಳಿಸಿದರು.