Site icon Vistara News

Koppala News: ಕುಡಿಯುವ ನೀರಿಗೆ ತೊಂದರೆಯಾಗದಂತೆ ಕ್ರಮವಹಿಸಲು ಸೂಚನೆ

take action to prevent drinking water problem says ZP CEO Rahul Ratnam Pandeya

ಕನಕಗಿರಿ: ಗ್ರಾಮ ಪಂಚಾಯಿತಿ (Gram Panchayat) ವ್ಯಾಪ್ತಿಯ ಎಲ್ಲಾ ಗ್ರಾಮಗಳಲ್ಲಿ ಕುಡಿಯುವ ನೀರಿಗೆ (Drinking Water) ತೊಂದರೆಯಾಗದಂತೆ ಕ್ರಮವಹಿಸಲು ಜಿ.ಪಂ ಸಿಇಒ ರಾಹುಲ್ ರತ್ನಂ ಪಾಂಡೆಯ, ಎಇಇ ವಿಜಯಕುಮಾರ್, ಗ್ರಾ.ಪಂ ಪಿಡಿಒ ಅವರಿಗೆ ಸೂಚನೆ (Koppala News) ನೀಡಿದರು.

ತಾಲೂಕಿನ ಸುಳೇಕಲ್ ಗ್ರಾಮಕ್ಕೆ ಸೋಮವಾರ ಭೇಟಿ ನೀಡಿದ್ದ ವೇಳೆ ಕುಡಿಯುವ ನೀರು ಹಾಗೂ ಪೈಪ್‌ಲೈನ್ ಕಾಮಗಾರಿಯನ್ನು ವೀಕ್ಷಣೆ ಮಾಡಿ ಅವರು ಮಾತನಾಡಿದರು.

ಇದನ್ನೂ ಓದಿ: Karnataka Weather : ಜನತೆಯ ಬೆವರಿಳಿಸುತ್ತಿದೆ ಬಿಸಿಲು; ಬೆಂಗಳೂರಲ್ಲಿ ಬೀಸಲಿದೆ ಬಿಸಿ ಗಾಳಿ

ಗ್ರಾಮದಲ್ಲಿ ಕುಡಿಯುವ ನೀರು ಸಮಸ್ಯೆ ತಲೆದೋರಿದ ಹಿನ್ನಲೆಯಲ್ಲಿ ಕೂಡಲೇ ಓಎಚ್‌ಟಿ ಟ್ಯಾಂಕ್ ಮೂಲಕ ನೀರನ್ನು ಸರಬರಾಜು ಮಾಡಲು‌ ಕ್ರಮವಹಿಸುವಂತೆ ಎಇಇ ಅವರಿಗೆ ಸೂಚಿಸಿದರು.

ಇದೇ ವೇಳೆ ಸುಳೇಕಲ್ ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ಹೊಸ ಎಂಐ ಕೆರೆಯನ್ನು ವೀಕ್ಷಣೆ ಮಾಡಿ, ಮಾಹಿತಿಯನ್ನು ಪಡೆದುಕೊಂಡರು.

ಇದನ್ನೂ ಓದಿ: Vastu Tips: ನಕಾರಾತ್ಮಕ ಶಕ್ತಿ ಹೊಡೆದೋಡಿಸಲು ಈ ವಾಸ್ತು ಟಿಪ್ಸ್‌ ಪಾಲಿಸಿ…

ಈ ಸಂದರ್ಭದಲ್ಲಿ ತಾ.ಪಂ ಇಒ ಚಂದ್ರಶೇಖರ್ ಬಿ. ಕಂದಕೂರ್, ಜೆಇ ಕಿಶೋರ್, ಪಿಡಿಒ ಯು. ಮಲ್ಲಿಕಾರ್ಜುನ, ತಾಂತ್ರಿಕ ಸಂಯೋಜಕ ಸಯ್ಯದ್ ತನ್ವೀರ್, ಐಇಸಿ ಸಂಯೋಜಕ ಶಿವಕುಮಾರ್ ಕೆ. ಹಾಗೂ ಗ್ರಾ.ಪಂ ಸಿಬ್ಬಂದಿ, ಇತರರು ಉಪಸ್ಥಿತರಿದ್ದರು.

Exit mobile version