ಗಂಗಾವತಿ: ಕನಕಗಿರಿ (Kanakagiri) ತಾಲೂಕಿನ ಕಲಿಕೇರಿ ಗ್ರಾಮದಲ್ಲಿ ವಸ್ತು ಸಂಗ್ರಹಾಲಯ ನಿರ್ಮಾಣಕ್ಕೆಂದು ಸ್ಥಳ ಪರಿಶೀಲನೆ ಮಾಡುತ್ತಿದ್ದ ಸಂದರ್ಭದಲ್ಲಿ 11-12 ನೇ ಶತಮಾನದ ಕಲ್ಯಾಣಿ ಚಾಲುಕ್ಯರ ಕಾಲಕ್ಕೆ ಸೇರಿದ್ದು ಎನ್ನಲಾದ ಎರಡು ಶಿಲಾ ಶಾಸನಗಳು (Inscriptions) ಪತ್ತೆಯಾಗಿವೆ.
ಹಂಪೆ-ಕಮಲಾಪುರದ ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಉಪ ನಿರ್ದೇಶಕ ಡಾ. ಆರ್. ಶೇಜೇಶ್ವರ ನೇತೃತ್ವದಲ್ಲಿ ಮ್ಯೂಸಿಯಂ ನಿರ್ಮಾಣಕ್ಕೆಂದು ಕಲಿಕೇರಿ ಗ್ರಾಮದಲ್ಲಿ ಸ್ಥಳ ಪರಿಶೀಲನೆ ಮಾಡುವ ಸಂದರ್ಭದಲ್ಲಿ ಈ ಶಿಲಾಶಾಸನಗಳು ಪತ್ತೆಯಾಗಿವೆ.
ಇದನ್ನೂ ಓದಿ: Rohit Sharma : ಟೆಸ್ಟ್ ಕ್ರಿಕೆಟ್ನ ಪ್ರಾಮುಖ್ಯತೆ ಕುರಿತು ಕೊಹ್ಲಿ, ರೋಹಿತ್ ಮಾತನಾಡಿದ ವಿಡಿಯೊ ಇಲ್ಲಿದೆ
ಗ್ರಾಮದ ಜೋಷಿ ಎಂಬುವರ ಜಮೀನಿನಲ್ಲಿರುವ ದೇವಾಲಯದಲ್ಲಿ ಅಸಂರಕ್ಷಿತ ಒಂದು ಶಾಸನ ಮತ್ತು ಗ್ರಾಮದ ರೈತ ತಳವಾರ ರಾಮಣ್ಣ ಎಂಬುವವರಿಗೆ ಸೇರಿದ್ದ ಜಮೀನಿನಲ್ಲಿ ಮತ್ತೊಂದು ಶಿಲಾ ಶಾಸನ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಮಾತನಾಡಿದ ರಾಜ್ಯ ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಉಪ ನಿರ್ದೇಶಕ ಡಾ.ಆರ್. ಶೇಜೇಶ್ವರ, ಗ್ರಾಮದಲ್ಲಿ ಮ್ಯೂಸಿಯಂ ನಿರ್ಮಾಣಕ್ಕೆ ಸ್ಥಳ ಹುಡುಕುವ ಸಂದರ್ಭದಲ್ಲಿ ಈ ಎರಡು ಶಿಲಾ ಶಾಸನಗಳು ಪತ್ತೆಯಾಗಿವೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: Covid 19 Cases: ರಾಜ್ಯದಲ್ಲಿಂದು 104 ಮಂದಿಗೆ ಕೊರೊನಾ ಪಾಸಿಟಿವ್; 8 ಜನ ಡಿಸ್ಚಾರ್ಜ್
ಈ ಸಂದರ್ಭದಲ್ಲಿ ಕನಕಗಿರಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ್ ಬಿ ಕಂದಕೂರ್, ಪುರಾತತ್ವ ಸಹಾಯಕ ಡಾ.ಆರ್.ಮಂಜನಾಯ್ಕ, ಇತರರಿದ್ದರು.