Site icon Vistara News

Koppala News: ಉಳೇನೂರು ಗ್ರಾ.ಪಂ. ಪಿಡಿಒ ನಾಗರಾಜ ಅಮಾನತು

Ulenur Gram Panchayat PDO Nagaraja suspended

ಕಾರಟಗಿ: ತಾಲೂಕಿನ ಉಳೇನೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (PDO) ನಾಗರಾಜ ಕರ್ತವ್ಯ ಲೋಪ ಎಸಗಿದ ಆರೋಪದ ಹಿನ್ನಲೆಯಲ್ಲಿ ಸೇವೆಯಿಂದ ಅಮಾನತುಗೊಂಡಿದ್ದಾರೆ. ಜಿ.ಪಂ. ಸಿಇಒ ರಾಹುಲ್‌ ರತ್ನಂ ಪಾಂಡೆಯ ಅಮಾನತು ಆದೇಶ ಹೊರಡಿಸಿದ್ದಾರೆ.

ಉಳೇನೂರು ಗ್ರಾಮ ಪಂಚಾಯಿತಿ ಪಿಡಿಒ ನಾಗರಾಜ್ ಅವರ ಮೇಲೆ ಗ್ರಾ.ಪಂ. ವ್ಯಾಪ್ತಿಯ ಹಳ್ಳಿಗಳ ಜನರು, ಪಿಡಿಒ ಅವರು ಕರ್ತವ್ಯಕ್ಕೆ ಸರಿಯಾಗಿ ಹಾಜರಾಗುವುದಿಲ್ಲ, ಹಳ್ಳಿಗಳಿಗೆ ಮೂಲ ಸೌಲಭ್ಯಗಳ ಸಮಸ್ಯೆ ಬಗೆಹರಿಸುವಲ್ಲಿ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಅನೇಕ ದೂರುಗಳನ್ನು ಕ್ಷೇತ್ರದ ಶಾಸಕ ಸಚಿವ ಶಿವರಾಜ್ ತಂಗಡಗಿ ಅವರಿಗೆ ಮನವಿ ಸಲ್ಲಿಸಿದ್ದರು.

ಇದನ್ನೂ ಓದಿ: Curd Rice Benefits: ನೀವು ಸದಾ ಸಂತೋಷವಾಗಿರಬೇಕೇ? ಹಾಗಿದ್ದರೆ ಮೊಸರನ್ನ ತಿನ್ನಿ!

ಸಚಿವರ ಪ್ರಗತಿ ಪರಿಶೀಲನೆ ಸಭೆಗೆ ಹಾಜರಾಗುವಂತೆ ತಾ.ಪಂ. ಅಧಿಕಾರಿಗಳಿಗೆ ಸೂಚನೆ ಕಳುಹಿಸಿದ್ದರು. ಆದರೆ ಅಧಿಕಾರಿಗಳ ಪೂರ್ವಾನುಮತಿ ಇಲ್ಲದೆ ಪಿಡಿಒ ಗೈರಾಗಿದ್ದರು.

ಇದನ್ನೂ ಓದಿ: ಮುಂದಿನ ವರ್ಷ ಕೇರಳದಲ್ಲಿ ನಡೆಯಲಿದೆ ಭಾರತ-ಅರ್ಜೆಂಟೀನಾ ಫುಟ್ಬಾಲ್​ ಪಂದ್ಯ

ಜತೆಗೆ ಪಂಚಾಯಿತಿ ವ್ಯಾಪ್ತಿಯ ಈಳಿಗನೂರಿನ ಹಿರಿಯ ನಾಗರಿಕರೊಬ್ಬರ ಆಸ್ತಿಗೆ ಸಂಬಂಧಿಸಿದಂತೆ ಫಾರಂ ನಂ. 9/11 ನೀಡಲು ವಿನಾಕಾರಣ ವಿಳಂಬ ಮಾಡುತ್ತಿರುವ ಆರೋಪ ಸೇರಿದಂತೆ ವಿವಿಧ ಅಭಿವೃದ್ಧಿ ವಿಷಯಗಳ ಕುರಿತು ಗ್ರಾಮಸ್ಥರು ಗ್ರಾಮದಲ್ಲಿ ನಡೆದ ‘ಅಭಯ ಹಸ್ತ’ ಗ್ರಾಮ ಸಭೆಯಲ್ಲಿ ಸಚಿವ ತಂಗಡಗಿ ಅವರ ಗಮನಕ್ಕೆ ತಂದಿದ್ದರು. ಸಚಿವರು ಜನಸಾಮಾನ್ಯರನ್ನು ಅಲೆದಾಡಿಸದೆ ಕೆಲಸ ಮಾಡಿಕೊಡುವಂತೆ ಸೂಚಿಸಿದ್ದರೂ ಪಿಡಿಒ ನಾಗರಾಜ್ ಸಂಪೂರ್ಣ ನಿರ್ಲಕ್ಷ್ಯ ಧೋರಣೆ ಅನುಸರಿಸಿದ್ದರು ಎನ್ನಲಾಗಿದೆ, ಈ ಹಿನ್ನಲೆಯಲ್ಲಿ ತಾ.ಪಂ. ಇಒ ಅವರು ಜಿಲ್ಲಾ ಪಂಚಾಯಿತಿಗೆ ಪಿಡಿಒ ನಾಗರಾಜ ವಿರುದ್ಧ ಶಿಸ್ತುಕ್ರಮಕ್ಕೆ ವರದಿ ಸಲ್ಲಿಸಿದ್ದರು. ಆ ವರದಿ ಅನುಸಾರ ಜಿ.ಪಂ. ಸಿಇಒ ರಾಹುಲ್ ರತ್ನಂ ಪಾಂಡೆಯ ಅಮಾನತು ಮಾಡಿದ್ದಾರೆ.

Exit mobile version