Site icon Vistara News

Koppala News: ವೈಕುಂಠ ಮಾದರಿ ವಿನಾಯಕ ಮೂರ್ತಿಯ ವಿಸರ್ಜನಾ ಮೆರವಣಿಗೆ: ಶಾಸಕ ಜನಾರ್ದನರೆಡ್ಡಿ ಚಾಲನೆ

Vaikuntha Model Vinayak Murthy Dissolution at gangavathi

ಗಂಗಾವತಿ: ಇಲ್ಲಿನ ಗಾಂಧಿವೃತ್ತದಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ (Kalyana Rajya Pragati Paksha) ಪ್ರಮುಖರಿಂದ ಇದೇ ಮೊದಲ ಬಾರಿಗೆ ಪ್ರತಿಷ್ಠಾಪಿಸಲಾಗಿದ್ದ ವೈಕುಂಠ ಮಾದರಿಯ ವಿನಾಯಕ ಮೂರ್ತಿಗೆ (Vinayaka Murthy) ಬುಧವಾರ ಶಾಸ್ತ್ರೋಕ್ತವಾಗಿ ಪೂಜೆ ಸಲ್ಲಿಸಿ, ವಿಸರ್ಜನಾ ಮೆರವಣಿಗೆಗೆ ಚಾಲನೆ ನೀಡಲಾಯಿತು.

ಶಾಸಕ ಜಿ. ಜನಾರ್ದನರೆಡ್ಡಿ ಗೋಧೂಳಿ ಸಮಯದಲ್ಲಿ ವಿನಾಯಕನಿಗೆ ಪೂಜೆ ಸಲ್ಲಿಸುವ ಮೂಲಕ ವಿಸರ್ಜನಾ ಮೆರವಣಿಗೆಗೆ ಚಾಲನೆ ನೀಡಿದರು. ಬಳಿಕ ಮಾತನಾಡಿ, ಹಬ್ಬ-ಹರಿ ದಿನಗಳನ್ನು ಎಲ್ಲರೂ ಸಂತಸದಿಂದ ಆಚರಿಸಬೇಕು. ಪರಸ್ಪರ ಸಮುದಾಯಗಳು ಭಾಗಿಯಾಗುವಂತೆ ಪ್ರೇರೇಪಿಸಬೇಕು. ಮುಖ್ಯವಾಗಿ ಯಾವುದೇ ಆಚರಣೆಗಳಿಂದ ಇನ್ನೊಬ್ಬರಿಗೆ ತೊಂದರೆಯಾಗದಂತೆ ನಾವು ಎಚ್ಚರಿಕೆ ವಹಿಸಬೇಕು ಎಂದು ಸಲಹೆ ನೀಡಿದರು.

ಇದೇ ಮೊದಲ ಬಾರಿಗೆ ಗಂಗಾವತಿ ನಗರದಲ್ಲಿ ನಮ್ಮ ಪಕ್ಷದ ಕಾರ್ಯಕರ್ತರು, ಮುಖಂಡರು ಸೇರಿ ವಿನಾಯಕನ ಪ್ರತಿಷ್ಠಾಪನೆ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಅರ್ಥಪೂರ್ಣ ಆಚರಣೆಗೆ ಯೋಜನೆ ರೂಪಿಸಲಾಗುವುದು ಎಂದರು.

ಇದನ್ನೂ ಓದಿ: Nobel Prize 2023: ಅಮೆರಿಕದ ಮೌಂಗಿ ಬವೆಂಡಿ, ಲೂಯಿಸ್ ಬ್ರಸ್, ಅಲೆಕ್ಸಿ ಎಕಿಮೊವ್‌ಗೆ ಕೆಮೆಸ್ಟ್ರಿ ನೊಬೆಲ್ ಪ್ರಶಸ್ತಿ

ಇದೇ ಸಂದರ್ಭದಲ್ಲಿ ಕಿಷ್ಕಿಂಧಾ ಕಲ್ಯಾಣ ಗಜಾನನ ಸಮಿತಿಯಿಂದ ಸಾರ್ವಜನಿಕರಿಗೆ ವಿತರಿಸುವ ಉದ್ದೇಶಕ್ಕೆ ತಯಾರಿಸಲಾಗಿದ್ದ ತಿರುಪತಿ ಲಾಡು ಮಾದರಿಯಲ್ಲಿ 25 ಸಾವಿರ ಲಾಡುಗಳ ವಿತರಣೆಗೆ ಶಾಸಕ ಜಿ. ಜನಾರ್ದನರೆಡ್ಡಿ, ಸಾರ್ವಜನಿಕರಿಗೆ ಹಂಚುವ ಮೂಲಕ ಚಾಲನೆ ನೀಡಿದರು.

ನಗರದ ಪ್ರಮುಖ ವೃತ್ತ, ರಸ್ತೆಗಳ ಮೂಲಕ ವಿನಾಯಕನನ್ನು ಮೆರವಣಿಗೆಯಲ್ಲಿ ಕೊಂಡೊಯ್ದು ದಾಸನಾಳದ ತುಂಗಭದ್ರಾ ಎಡದಂಡೆ ಕಾಲುವೆಯಲ್ಲಿ ವಿಸರ್ಜನೆ ಮಾಡಲಾಯಿತು.

ಇದನ್ನೂ ಓದಿ: Koppala News: ಗಂಗಾವತಿಯ ಆದಿಮಾನವರ ನೆಲೆ ಪ್ರದೇಶಕ್ಕೆ ಜಿ.ಪಂ ಸಿಇಒ ಭೇಟಿ, ಪರಿಶೀಲನೆ

ಈ ಸಂದರ್ಭದಲ್ಲಿ ಕಿಷ್ಕಿಂಧಾ ಕಲ್ಯಾಣ ಗಜಾನನ ಸಮಿತಿಯ ಸಂಚಾಲಕ ರಮೇಶ ಚೌಡ್ಕಿ, ಚಂದ್ರು ಹೀರೂರು, ನಾಗರಾಜ ಚಳಗೇರಿ, ನಾಗರಾಜ ಬರಗೂರು, ಪಂಪಣ್ಣ ನಾಯಕ್, ಸೈಯದ್ ಜಿಲಾನಿ ಪಾಷಾ ಖಾದ್ರಿ, ಯಮನೂರಪ್ಪ ಪುಂಡಗೌಡ, ವಿರೂಪಾಕ್ಷಿಗೌಡ ನಾಯಕ್, ಮನೋಹರಗೌಡ ಹೇರೂರು, ದುರುಗಪ್ಪ ದಳಪತಿ, ಸೈಯದ್ ಅಲಿ, ವೀರೇಶ ಬಲ್ಕುಂದಿ ಸೇರಿದಂತೆ ಇತರರು ಇದ್ದರು.

Exit mobile version