ಕೊಪ್ಪಳ: ʼಕಡ್ಡಾಯ ಮತದಾನ ನಮ್ಮ ಕರ್ತವ್ಯ ಮತ್ತು ಹಕ್ಕುʻ, ʼ ನಮ್ಮ ನಾಳೆಗಾಗಿ ನೀರು ಉಳಿಸಿ, ಮರ ಬೆಳೆಸಿ ಪರಿಸರ ರಕ್ಷಿಸಿʼ ಹೀಗೆ ಸಾಮಾಜಿಕ ಕಳಕಳಿಯ ಸಂದೇಶಗಳನ್ನು ಯುವಕನೊಬ್ಬ ತನ್ನ ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಮುದ್ರಿಸಿ, ಜಾಗೃತಿ (Awareness) ಮೂಡಿಸುವ ವಿಶೇಷ ಪ್ರಯತ್ನಕ್ಕೆ (Koppala News) ಮುಂದಾಗಿದ್ದಾನೆ.
ಹೌದು, ಕೊಪ್ಪಳ ತಾಲೂಕಿನ ಗೊಂಡಬಾಳ ಗ್ರಾಮದ ಪ್ರಭುರಾಜ ಜಹಗೀರದಾರ ಎಂಬ ಯುವಕನೇ ತನ್ನ ಮದುವೆಯ ಆಮಂತ್ರಣ ಪತ್ರಿಕೆಯಲ್ಲಿ ಈ ಸಾಮಾಜಿಕ ಕಳಕಳಿಯ ಸಂದೇಶಗಳನ್ನು ಮುದ್ರಿಸುವ ಮೂಲಕ ಗಮನ ಸೆಳೆದಿದ್ದಾನೆ.
ಇದನ್ನೂ ಓದಿ: Elon Musk: ಭಾರತದಲ್ಲಿ 2 ಲಕ್ಷ ಎಕ್ಸ್ ಖಾತೆಗಳು ಬ್ಯಾನ್
ಇದೇ ಏಪ್ರಿಲ್ 26 ರಂದು ಕೊಪ್ಪಳ ತಾಲೂಕಿನ ಹ್ಯಾಟಿ ಬಳಿ ಇರುವ ಶ್ರೀ ನಂದಿಬಂಡಿ ಬಸವೇಶ್ವರ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ಪ್ರಭುರಾಜ ಜಹಗೀರದಾರ ಅವರ ಮದುವೆ ನಡೆಯಲಿದ್ದು, ಪ್ರಸ್ತುತ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತದಾನ ಜಾಗೃತಿ ಮೂಡಿಸುವುದರ ಜತೆಗೆ ನೀರಿನ ಸಂರಕ್ಷಣೆ, ಪರಿಸರ ಸಂರಕ್ಷಣೆ ಕುರಿತು ಅರಿವು ಮೂಡಿಸಲು ಮುಂದಾಗಿರುವುದು ವಿಶೇಷವಾಗಿದೆ.
ಇದನ್ನೂ ಓದಿ: Jain Monks: ₹200 ಕೋಟಿ ಮೌಲ್ಯದ ಆಸ್ತಿ ದಾನ ಮಾಡಿ ಸನ್ಯಾಸಿಗಳಾದ ದಂಪತಿ!
ನನ್ನ ಮದುವೆಯಲ್ಲಿ ಏನಾದರೂ ಒಂದು ಸಾಮಾಜಿಕ ಸಂದೇಶವಿರಬೇಕು ಎಂದು ಮೊದಲಿನಿಂದಲೂ ನಾನು ಬಯಸುತ್ತಿದ್ದೆ. ಈಗ ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ ಮತದಾನದಿಂದ ಯಾರೂ ದೂರ ಉಳಿಯಬಾರದು. ಮತದಾನ ಅನ್ನೋದು ನಮಗೆ ಸಂವಿಧಾನ ನೀಡಿರುವ ಹಕ್ಕು. ಹೀಗಾಗಿ ಈ ಹಕ್ಕನ್ನು ಚಲಾಯಿಸಬೇಕು ಎಂಬುದನ್ನು ಅರಿವು ಮೂಡಿಸುವ ನಿಟ್ಟಿನಲ್ಲಿ ನನ್ನ ಮದುವೆ ಕಾರ್ಡ್‌ನಲ್ಲಿ ಮತದಾನದ ಜಾಗೃತಿಯ, ನೀರಿನ ಸಂರಕ್ಷಣೆ, ಪರಿಸರ ಸಂರಕ್ಷಣೆ ಕುರಿತ ಸಂದೇಶಗಳು, ಛಾಯಾಚಿತ್ರಗಳನ್ನು ಮುದ್ರಿಸಿ ಹಂಚುತ್ತಿರುವೆ ಎನ್ನುತ್ತಾರೆ ಯುವಕ ಪ್ರಭುರಾಜ ಜಹಗೀರದಾರ.