ಕನಕಗಿರಿ: ತಾಲೂಕಿನ ಹುಲಿಹೈದರ್ ಗ್ರಾ.ಪಂ. ವ್ಯಾಪ್ತಿಯ ಕನಕಾಪುರ ಗ್ರಾಮದಲ್ಲಿ ತಾಲೂಕು ಸ್ವೀಪ್ ಸಮಿತಿ ವತಿಯಿಂದ ನೂತನ ವಧು-ವರರಿಗೆ ಮತದಾನ ಕುರಿತು ಮಂಗಳವಾರ ಜಾಗೃತಿಯನ್ನು (Koppala News) ಮೂಡಿಸಲಾಯಿತು.
ಗ್ರಾಮದ ಬೀರಲಿಂಗೇಶ್ವರ ದೇವರ 17ನೇ ವರ್ಷದ ಜಾತ್ರಾ ಮಹೋತ್ಸವದ ಪ್ರಯುಕ್ತ ನಡೆದ ಸಾಮೂಹಿಕ ವಿವಾಹದಲ್ಲಿ 10 ನವ ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಈ ವೇಳೆ ತಾಲೂಕು ಸ್ವೀಪ್ ಸಮಿತಿಯ ಸದಸ್ಯ ಶಿವರಾಜ್ ಪಾಟೀಲ್, ನೂತನ ವಧು-ವರರಿಗೆ ಮತದಾನ ಕುರಿತು ಮಾಹಿತಿಯನ್ನು ನೀಡಿದರು. ಬಳಿಕ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.
ಇದನ್ನೂ ಓದಿ: Akshay Kumar: ಅಕ್ಷಯ್ ಕುಮಾರ್ ಪಡೆದ ಮೊದಲ ಸಂಭಾವನೆ ಎಷ್ಟು ಗೊತ್ತೇ?
ನಂತರ ಶಿರವಾರ ಗ್ರಾಮದ ಗವಿಸ್ವಾಮಿ ಗ್ಯಾನಪ್ಪಯ್ಯ ತಾತನವರು ಮಾತನಾಡಿ, ಮತದಾನ ಶ್ರೇಷ್ಠವಾದದ್ದು, ಪ್ರತಿಯೊಬ್ಬರೂ ಮತದಾನದಿಂದ ವಂಚಿತರಾಗದೇ ಕಡ್ಡಾಯವಾಗಿ ಮತದಾನ ಮಾಡಲು ತಿಳಿಸಿದರು. ಅಲ್ಲದೇ ಸಾಮೂಹಿಕ ವಿವಾಹದಿಂದ ಕುಟುಂಬದ ಆರ್ಥಿಕ ಹೊರೆಯನ್ನು ತಗ್ಗಿಸಬಹುದು ಎಂದು ತಿಳಿಸಿದರು.
ಇದನ್ನೂ ಓದಿ: Karnataka Weather: ಚಿಕ್ಕಮಗಳೂರಲ್ಲಿ ವರುಣನ ಅಬ್ಬರ; ರಾಜ್ಯದಲ್ಲಿ ನಾಳೆ ಗುಡುಗು, ಸಿಡಿಲು ಸಹಿತ ಮಳೆ
ಈ ಸಂದರ್ಭದಲ್ಲಿ ಅರಳಹಳ್ಳಿಯ ಗವಿಸಿದ್ದೇಶ್ವರಯ್ಯ ತಾತಾ, ಶರಣಯ್ಯಸ್ವಾಮಿ ಗುಂಟಮಡವು, ಬಸಾಪಟ್ಟಣದ ಸಿದ್ದಯ್ಯ ಗುರುವಿನ, ಮರಿಯಪ್ಪ ತಾತಾನವರು ಸೇರಿದಂತೆ ಗ್ರಾಮದ ಪ್ರಮುಖರಾದ ಬೀರಪ್ಪ ಜಾಲಿಹಾಳ, ಲಕ್ಮಪ್ಪ ಪೊಲೀಸ್ ಪಾಟೀಲ್, ಶಂಕರಗೌಡ ದಳಪತಿ ಮತ್ತು ಗ್ರಾಮದ ಹಿರಿಯರು ಹಾಗೂ ಇತರರು ಉಪಸ್ಥಿತರಿದ್ದರು.