Site icon Vistara News

Koppala News: ಕಾರಟಗಿಯಲ್ಲಿ ಮತದಾನ ಜಾಗೃತಿ ಕಾರ್ಯಕ್ರಮ

Voting awareness program in Karatagi

ಕಾರಟಗಿ: ತಾಲೂಕಿನ ಬೇವಿನಹಾಳ ಗ್ರಾ.ಪಂ ವ್ಯಾಪ್ತಿಯ ನಾಗನಕಲ್ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ತಾ.ಪಂ, ತಾಲೂಕು ಸ್ವೀಪ್ ಸಮಿತಿಯಿಂದ ಮತದಾನ ಜಾಗೃತಿ (Voting Awareness) ಹಾಗೂ ಇವಿಎಂ, ವಿವಿ ಪ್ಯಾಟ್ ಅಣಕು ಮತದಾನ ಪ್ರಾತ್ಯಕ್ಷಿಕೆ ಕಾರ್ಯಕ್ರಮವನ್ನು (Koppala News) ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದಲ್ಲಿ ಚುನಾವಣಾ ಸೆಕ್ಟರ್ ಅಧಿಕಾರಿ ಶ್ರೀಕಾಂತ್ ಟಿ‌. ಮಾತನಾಡಿ, ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನ ಪ್ರತಿನಿಧಿಗಳನ್ನು ಪ್ರಜೆಗಳು ಆಯ್ಕೆ ಮಾಡುವ ಅವಕಾಶ ಇರುವುದರಿಂದ ಯುವ ಮತದಾರರು ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಿ ಎಂದು ಹೇಳಿದರು.‌

ಇದನ್ನೂ ಓದಿ: Maldives Tourism: ಮಾಲ್ಡೀವ್ಸ್‌ಗೆ ತೆರಳುವ ಭಾರತೀಯರ ಸಂಖ್ಯೆ ಕುಸಿತ; ಬಾಯ್ಕಾಟ್‌ ಪೆಟ್ಟು

ಸಂವಿಧಾನ ಪ್ರಜೆಗಳಿಗೆ ಮತದಾನ ಹಕ್ಕನ್ನು ನೀಡಿದೆ. ಯುವ ಸಮೂಹ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸುವ ಮೂಲಕ ಸುಭದ್ರ ಹಾಗೂ ಸದೃಢ ರಾಷ್ಟ್ರ ನಿರ್ಮಾಣಕ್ಕೆ ಮುಂದಾಗಬೇಕು ಎಂದು ತಿಳಿಸಿದರು.

ನಂತರ ವಿದ್ಯಾರ್ಥಿಗಳಿಗೆ ಇವಿಎಂ, ವಿವಿ ಪ್ಯಾಟ್ಗಳ ಕುರಿತು ಪ್ರಾತ್ಯಕ್ಷಿಕೆ ಮಾಹಿತಿ ನೀಡಿ ವಿದ್ಯಾರ್ಥಿಗಳಿಂದ ಅಣಕು ಮತದಾನ ಮಾಡಿಸಲಾಯಿತು.

ಇದನ್ನೂ ಓದಿ: Juni Movie: ʼಜೂನಿʼ ಚಿತ್ರದ ಟ್ರೈಲರ್‌ ಔಟ್‌; ಶೆಫ್‌ ಪಾತ್ರದಲ್ಲಿ ಪೃಥ್ವಿ ಅಂಬಾರ್

ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಸ್ವೀಪ್ ಸಮಿತಿಯ ಅಜೀಜ್, ಸಂದೀಪ್, ಸೋಮನಾಥ ‌ನಾಯಕ, ಉಪನ್ಯಾಸಕರಾದ ಶೃತಿ, ಶಂಕರಪ್ಪ ಸೇರಿದಂತೆ ತಾ.ಪಂ ಸಿಬ್ಬಂದಿಗಳು ಹಾಗೂ ಇತರರು ಉಪಸ್ಥಿತರಿದ್ದರು.

Exit mobile version