Site icon Vistara News

Koppala News: ಗಂಗಾವತಿಯಲ್ಲಿ ಶಾಲಾ ಮಕ್ಕಳಿಂದ ಜಲ ಸಂರಕ್ಷಣೆ, ನಗರ ನೈರ್ಮಲ್ಯ ಜಾಗೃತಿ ಜಾಥಾ

Water conservation urban sanitation awareness jatha by school children in Gangavathi

ಗಂಗಾವತಿ: ನಗರದ ಆರೋನ್ ಮಿರಜ್‌ಕರ್‌ ಆಂಗ್ಲ ಮಾಧ್ಯಮ ಶಾಲೆ ಮತ್ತು ನಿವೇದಿತ ಆಂಗ್ಲ ಮಾಧ್ಯಮ ಶಾಲೆಗಳ ವಿದ್ಯಾರ್ಥಿಗಳಿಂದ ಬುಧವಾರ ಜಲ ಸಂರಕ್ಷಣೆ (Water Conservation) ಮತ್ತು ನಗರ ನೈರ್ಮಲ್ಯ ಜಾಗೃತಿ (Awareness) ಜಾಥಾ ನಡೆಯಿತು.

ನಗರದ ಆರೋನ್ ಮಿರಜ್‌ಕರ್‌ ಆಂಗ್ಲ ಮಾಧ್ಯಮ ಶಾಲೆ ಮತ್ತು ನಿವೇದಿತಾ ಆಂಗ್ಲ ಮಾಧ್ಯಮ ಶಾಲೆಗಳ ಒಂದರಿಂದ ಹತ್ತನೇ ತರಗತಿಯ ಸುಮಾರು ಒಂದು ಸಾವಿರ ಮಕ್ಕಳು, ನಗರದಲ್ಲಿ ಸುಮಾರು 2 ಕಿ.ಮೀ ಜಾಥಾ ನಡೆಸಿ, ಜನರಲ್ಲಿ ಜಾಗೃತಿ ಮೂಡಿಸಿದರು.

ನೀರು ಅತ್ಯಮೂಲ್ಯವಾಗಿದ್ದು ಹಿತಮಿತವಾಗಿ ಬಳಸಿ, ಪರಿಸರ ಸಂರಕ್ಷಣೆ ಎಲ್ಲರ ಜವಾಬ್ದಾರಿ, ಜಲಮೂಲವನ್ನು ಕಲುಷಿತ ಮಾಡಬೇಡಿ ಸೇರಿದಂತೆ ಇತ್ಯಾದಿ ಘೋಷಣೆಗಳನ್ನು ಕೂಗಿ, ಮಕ್ಕಳು ಜಾಥಾ ನಡೆಸಿದರು.

ಇದನ್ನೂ ಓದಿ: Republic Day : ಜ. 26ರ ಗಣರಾಜ್ಯೋತ್ಸವಕ್ಕೆ ಬಿಗಿ ಭದ್ರತೆ; ಹೋಟೆಲ್‌, ಲಾಡ್ಜ್‌ಗಳ ಮೇಲೂ ನಿಗಾ

ನಗರದ ಎಪಿಎಂಸಿಯಲ್ಲಿರುವ ಚನ್ನಬಸವ ತಾತನ ದೇಗುಲದಿಂದ ಆರಂಭವಾದ ಮಕ್ಕಳ ಜಾಗೃತಿ ಜಾಥಾವು, ಸಿಬಿಎಸ್ ವೃತ್ತ, ಮಹಾವೀರ ವೃತ್ತ, ಮಾಹಾತ್ಮ ಗಾಂಧಿ ಸರ್ಕಲ್, ಬಸವಣ್ಣ, ವಾಸವಿ, ಅಂಬೇಡ್ಕರ್ ವೃತ್ತದ ಮೂಲಕ ಕೇಂದ್ರ ಬಸ್ ನಿಲ್ದಾಣದ ಮುಂದಿರುವ ಶ್ರೀ ಕೃಷ್ಣದೇವರಾಯ ವೃತ್ತಕ್ಕೆ ಆಗಮಿಸಿತು.

ಸ್ವಚ್ಛ ಭಾರತ, ಹಸಿರು ಭಾರತ, ಕ್ಲೀನ್ ಸಿಟಿ, ಗ್ರೀನ್ ಸಿಟಿ ಮೈ ಡ್ರೀಮ್, ವಾಸಿಸಲು ಇರುವುದೊಂದೇ ಭೂಮಿ, ಮುಂದಿನ ಜನಾಂಗಕ್ಕೆ ನೀರು ಉಳಿಸೋಣ, ಪ್ರಕೃತಿ ಸಂರಕ್ಷಿಸೋಣ ಎಂಬ ಫಲಕಗಳು ಮಕ್ಕಳ ಕೈಯಲ್ಲಿ ರಾರಾಜಿಸಿದವು.

ಇದನ್ನೂ ಓದಿ: Karnataka Weather: ಮಲೆನಾಡಿನ ಈ ಜಿಲ್ಲೆಗಳಲ್ಲಿ ಭಾರಿ ಚಳಿ; ಟ್ರಿಪ್‌ಗೆ ಹೋಗೋದಿದ್ದರೆ ನೋಡಿಕೊಳ್ಳಿ!

ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಶಾಲಾ ಆಡಳಿತ ಮಂಡಳಿ ಕಾರ್ಯದರ್ಶಿ ರುಬೀನ್ ಮಿರಜ್‌ಕರ್ ಮಾತನಾಡಿ, ಪ್ರಕೃತಿ ಮತ್ತು ನೀರು ಇತ್ತೀಚಿನ ದಿನಗಳಲ್ಲಿ ಹೆಚ್ಚು ಕಲುಷಿತವಾಗುತ್ತಿದ್ದು, ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶಕ್ಕೆ ಮಕ್ಕಳಿಂದ ಜಾಗೃತಿ ಜಾಥಾ ನಡೆಸಲಾಗಿದೆ ಎಂದು ತಿಳಿಸಿದರು.

Exit mobile version