Site icon Vistara News

Koppala News: ಕಾರಟಗಿಯಲ್ಲಿ ಯುವ ಮತದಾರರ ನೋಂದಣಿ ಅಭಿಯಾನ

Youth Voter Registration Campaign in Karatagi

ಕಾರಟಗಿ: ಪಟ್ಟಣದ ಸಿ.ಎಂ.ಎನ್‌.ಸಿ ಮಲ್ಲಿಕಾರ್ಜುನ ನಾಗಪ್ಪ ಕಲಾ, ವಾಣಿಜ್ಯ ಕಾಲೇಜು ಹಾಗೂ ನಾಗನಕಲ್ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ತಾಲೂಕು ಸ್ವೀಪ್ ಸಮಿತಿ ವತಿಯಿಂದ ಯುವ ಮತದಾರರ ನೋಂದಣಿ ಅಭಿಯಾನ (Youth Voter Registration Campaign) ಕಾರ್ಯಕ್ರಮ ಜರುಗಿತು.

ಈ ವೇಳೆ ತಹಸೀಲ್ದಾರ್‌ ಕಛೇರಿಯ ಚುನಾವಣಾ ವಿಭಾಗದ ವಿಷಯ ನಿರ್ವಾಹಕ ಈಶ್ವರ ಕೆ. ಮಾತನಾಡಿ, ಯುವ ಮತದಾರರನ್ನು ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಮಾಡಿಕೊಳ್ಳುವ ಕಾರ್ಯ ಸಕ್ರೀಯವಾಗಿ ನಡೆಯುತ್ತಿದೆ. 18 ವರ್ಷ ತುಂಬಿದವರು ನಮೂನೆ-6 ರ ಅಡಿಯಲ್ಲಿ ಮತದಾರರ ಪಟ್ಟಿಯಲ್ಲಿ ನೋಂದಾಯಿಸಿಕೊಳ್ಳಬಹುದು. ಒಮ್ಮೆ ದಾಖಲಾದರೆ, ಮುಂದಿನ ವರ್ಷದ ಜನವರಿ ವೇಳೆಗೆ ಸ್ವಯಂಚಾಲಿತವಾಗಿ ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಳ್ಳುತ್ತಾರೆ ಎಂದು ತಿಳಿಸಿದರು.

ಇದನ್ನೂ ಓದಿ: Repo Rate: ರೆಪೋ ರೇಟ್‌ನಲ್ಲಿ ಬದಲಾವಣೆ ಇಲ್ಲ! ದಾಖಲೆ ಏರಿಕೆ ಕಂಡ ಷೇರುಪೇಟೆ

ಸ್ಥಳದಲ್ಲಿ (ಕಾಲೇಜು ಕೊಠಡಿಯಲ್ಲಿ) ದಾಖಲೆಗಳಿದ್ದ ವಿದ್ಯಾರ್ಥಿಗಳಿಂದ ನಮೂನೆ-6 ಭರ್ತಿ ಮಾಡಿಸಲಾಯಿತು. ನಂತರ ಅರ್ಜಿಗಳನ್ನು ವಿತರಣೆ ಮಾಡಲಾಯಿತು. ಸ್ಥಳದಲ್ಲಿ ಒಟ್ಟು 72 ಅರ್ಜಿಗಳನ್ನು ಸ್ವೀಕರಿಸಲಾಯಿತು.

ಇದನ್ನೂ ಓದಿ: Viral Video: ಎಕ್ಸ್​ಪ್ರೆಸ್​ ರೈಲಿಗಿಂತಲೂ ವೇಗವಾಗಿ ಸಾಗಿದ ಆಟೋ! ವಿಡಿಯೊ ವೈರಲ್​

ಈ ಸಂದರ್ಭದಲ್ಲಿ ತಾಲೂಕು ಐಇಸಿ ಸಂಯೋಜಕ ಸೋಮನಾಥ ನಾಯಕ, ಸಿ.ಎಂ.ಎನ್. ಕಾಲೇಜಿನ ಪ್ರಾಂಶುಪಾಲ ನಾರಾಯಣ ವೈದ್ಯ, ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ವಿಭಾಗಾಧಿಕಾರಿ ಶ್ರೀಕಾಂತ ಸೇರಿದಂತೆ ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.

Exit mobile version