Site icon Vistara News

Murder Case : ನಿದ್ರೆಗೆ ಜಾರಿದಾಗ ವ್ಯಕ್ತಿಯ ಕತ್ತು ಕೊಯ್ದ ಹಂತಕರು!

Murder case in kopal

ಕೊಪ್ಪಳ: ಜಗಲಿ ಕಟ್ಟೆಯಲ್ಲಿ ಮಲಗಿದ್ದಲೇ ವ್ಯಕ್ತಿಯ ಕತ್ತು ಕೊಯ್ದು ಹತ್ಯೆ (Murder Case ) ಮಾಡಿರುವ ಘಟನೆ ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕಿನ ವಟಪರ್ವಿಯಲ್ಲಿ ನಡೆದಿದೆ. ವಟಪರ್ವಿ ಗ್ರಾಮದ ಪ್ರಭುರಾಜ ಎಂಬಾತ ಹತ್ಯೆಯಾದವನು.

ಕಳೆದ ಸೋಮವಾರದಿಂದ ಪ್ರಭುರಾಜ ನಾಪತ್ತೆಯಾಗಿದ್ದರು ಎನ್ನಲಾಗಿದೆ. ಪ್ರಭುರಾಜ ತೋಟದ ಮನೆಯ ಹೊರಗಿದ್ದ ಜಗಲಿ ಕಟ್ಟೆ ಮೇಲೆ ಮಲಗಿದ್ದ ಅವರ ಮೇಲೆ ಮಾರಾಕಾಸ್ತ್ರಗಳಿಂದ ದಾಳಿ ಮಾಡಿ ಕೊಚ್ಚಿ ಕೊಲೆ ಮಾಡಲಾಗಿದೆ. ಮಂಗಳವಾರ ಸಂಜೆ ಕೊಲೆಯಾಗಿರುವ ಶಂಕೆ ಇದ್ದು, ಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.

ಸ್ಥಳಕ್ಕೆ ಬೇವೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ರವಾನಿಸದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗೆ ಪೊಲೀಸರು ಹುಡುಕಾಟ ನಡೆಸಿದ್ದಾರೆ.

6 ತಿಂಗಳ ಹಿಂದೆ ಪ್ರೀತಿಸಿ ಮದುವೆಯಾದ ಯುವತಿ ಆತ್ಮಹತ್ಯೆ

ಚಿಕ್ಕಬಳ್ಳಾಪುರ: ಪತಿ ಹಾಗೂ ಪತ್ನಿ ನಡುವೆ ವೈಮನಸ್ಸು ಬಂದ ಕಾರಣ ಮನನೊಂದ ಪತ್ನಿ ಆತ್ಮಹತ್ಯೆ (Self Harm) ಮಾಡಿಕೊಂಡ ಘಟನೆ ನಡೆದಿದೆ. ಮುಸ್ಕಾತ್ ತಾಜ್ (21) ಆತ್ಮಹತ್ಯೆ ಮಾಡಿಕೊಂಡ ಪತ್ನಿ.

ಇವರು ಚಿಕ್ಕಬಳ್ಳಾಪುರ (Chikkaballapura news) ಜಿಲ್ಲೆಯ ಚಿಂತಾಮಣಿ ನಗರದ ವೆಂಕಟಗಿರಿಕೋಟೆಯಲ್ಲಿರುವ ಪತಿಯ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆರು ತಿಂಗಳ ಹಿಂದೆ ಆಜಾಮ್‌ ಎಂಬಾತನನ್ನು ಪ್ರೀತಿಸಿದ್ದ ಈಕೆ ನಂತರ ವಿವಾಹ ಮಾಡಿಕೊಂಡಿದ್ದರು. ಪತಿ ಆಜಾಮ್ ವಿರುದ್ಧ ಪತ್ನಿಯ ಪೋಷಕರು ಕೊಲೆ ಆರೋಪ (murder complaint) ಹೊರಿಸಿದ್ದಾರೆ. ಚಿಂತಾಮಣಿ ನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಬೆಂಗಳೂರಿನಲ್ಲಿ ಆಟೋ ಚಾಲಕನ ಬರ್ಬರ ಹತ್ಯೆ

ಬೆಂಗಳೂರು: ರಾಜಧಾನಿಯಲ್ಲಿ ಯುವಕನೊಬ್ಬನನ್ನು ಹತ್ತಕ್ಕೂ ಅಧಿಕ ದುಷ್ಕರ್ಮಿಗಳು ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿದ್ದಾರೆ. ಅರುಣ್ (24) ಕೊಲೆಯಾದ ಆಟೋ ಚಾಲಕ. ರಾತ್ರಿ 9.30ರ ಸುಮಾರಿಗೆ ಈ ಘಟನೆ ನಡೆದಿದೆ. ಬ್ಯಾಟರಾಯನಪುರ ಪೊಲೀಸ್ ಠಾಣೆ ವ್ಯಾಪ್ತಿಯ ಟಿಂಬರ್ ಲೇಔಟ್‌ನಲ್ಲಿ ಘಟನೆ ನಡೆದಿದೆ.

ಅರುಣ್‌ ಆಟೋ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ ಅರುಣ್‌ನ ಮದುವೆ ಸಹ ಮುಂದಿನ ತಿಂಗಳು ಫಿಕ್ಸ್ ಆಗಿತ್ತು. 10ಕ್ಕೂ ಅಧಿಕ ಮಂದಿ ದುಷ್ಕರ್ಮಿಗಳಿಂದ ಕೃತ್ಯ ನಡೆದಿರುವ ಶಂಕೆ ವ್ಯಕ್ತವಾಗಿದೆ. ಮಾರಕಾಸ್ತ್ರಗಳಿಂದ ಕೊಚ್ಚಿರುವ ರೀತಿ ನೋಡಿದರೆ ಹಳೆಯ ದ್ವೇಷ ತೀರಿಸಿಕೊಳ್ಳಲು ನಡೆದ ಕೃತ್ಯದಂತೆ ಕಾಣಿಸುತ್ತಿದೆ. ಘಟನಾ ಸ್ಥಳಕ್ಕೆ ಬ್ಯಾಟರಾಯನಪುರ ಪೊಲೀಸರು ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.

ಹೆಜ್ಜೇನು ದಾಳಿಯಿಂದ ಕಾರ್ಮಿಕ ಸಾವು

ರಾಮನಗರ: ಟಿಂಬರ್ ಕೆಲಸ ಮಾಡುತ್ತಿದ್ದಾಗ ಹೆಜ್ಜೇನು ದಾಳಿ ನಡೆಸಿದ ಪರಿಣಾಮ ಕಾರ್ಮಿಕರೊಬ್ಬರು ಸಾವಿಗೀಡಾಗಿದ್ದಾರೆ. ರಾಮನಗರದ (ramanagara news) ಮಾಗಡಿ ತಾಲೂಕಿನ ಬೆಳಗವಾಡಿ ಗ್ರಾಮದಲ್ಲಿ ಘಟನೆ ನಡೆದಿದೆ.

ಬಜ್ಜಯ್ಯ (53) ಸ್ಥಳದಲ್ಲೇ ಸಾವಿಗೀಡಾದ ವ್ಯಕ್ತಿ. ಮರ ಕಡಿಯುವಾಗ ಹೆಜ್ಜೇನು ಗೂಡು ಬಜ್ಜಯ್ಯ ಮೇಲೆ ಬಿದ್ದಿದೆ. ಹೆಜ್ಜೇನು ಹುಳುಗಳು ಗುಂಪಾಗಿ ದಾಳಿ ನಡೆಸಿವೆ. ಹೆಜ್ಜೇನು ದಾಳಿಯಿಂದ ಇನ್ನಿತರ ಕೆಲವು ಕಾರ್ಮಿಕರಿಗೂ ಗಾಯಗಳಾಗಿದ್ದು, ಸ್ಥಳದಿಂದ ಓಡಿಹೋಗಿದ್ದಾರೆ. ಬಜ್ಜಯ್ಯನವರಿಗೆ ನೂರಾರು ಹುಳಗಳು ಕಡಿದ ಪರಿಣಾಮ ಚಿಕಿತ್ಸೆಗೆ ಸ್ಪಂದಿಸದೆ ಸಾವಿಗೀಡಾಗಿದ್ದಾರೆ. ಮಾಗಡಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಘಟನೆ ನಡೆದಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ.

Exit mobile version