ಗಂಗಾವತಿ: ತಮಿಳುನಾಡಿಗೆ ಕಾವೇರಿಯ ನೀರು (Cauvery Water) ಹರಿಬಿಡುತ್ತಿರುವುದನ್ನು ಖಂಡಿಸಿ, ವಿವಿಧ ಕನ್ನಡಪರ ಸಂಘಟನೆಗಳು ಶುಕ್ರವಾರ ಕರೆ ನೀಡಿದ್ದ ಕರ್ನಾಟಕ ಬಂದ್‌ಗೆ (Karnataka Bandh) ಜಿಲ್ಲಾಕೇಂದ್ರ ಕೊಪ್ಪಳ, ಗಂಗಾವತಿ ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಸಾಂಕೇತಿಕ ಪ್ರತಿಭಟನೆ (Protest) ನಡೆದಿದ್ದು, ಬಂದ್‌ನ ಪರಿಣಾಮ ಅಷ್ಟೇನೂ ಕಂಡುಬರಲಿಲ್ಲ, ಜನ-ಜೀವನ ಎಂದಿನಂತೆ ಸಹಜವಾಗಿತ್ತು.
ಕರ್ನಾಟಕ ಬಂದ್ ಹಿನ್ನಲೆಯಲ್ಲಿ ಕೊಪ್ಪಳ ಜಿಲ್ಲಾ ಕೇಂದ್ರದಲ್ಲಿ ವಿವಿಧ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಸಾಂಕೇತಿಕ ಪ್ರತಿಭಟನೆ ನಡೆಸಿದರು. ಬಂದ್‌ನ ಬಿಸಿ ಕಂಡು ಬರಲಿಲ್ಲ. ಎಂದಿನಂತೆ ಬೆಳಗ್ಗೆ ಜನ ಜೀವನ ಆರಂಭವಾಗಿತ್ತು. ಸಾರಿಗೆ ಸಂಸ್ಥೆಯ ಬಸ್‌ಗಳು ಸೇರಿದಂತೆ ಖಾಸಗಿ ವಾಹನಗಳು ಸಹಜವಾಗಿ ಓಡಾಡಿದವು. ಇನ್ನು ಅಂಗಡಿ ಮುಂಗಟ್ಟುಗಳು, ಹೊಟೇಲ್‌ಗಳು ಯಥಾ ಪ್ರಕಾರ ಆರಂಭವಾಗಿದ್ದವು.
ಇದನ್ನೂ ಓದಿ: Bengaluru Traffic: ಟ್ರಾಫಿಕ್ ಚಕ್ರವ್ಯೂಹಕ್ಕೆ ಸಿಲುಕಿ 12 ಕಿ.ಮೀ ನಡೆದು ಮನೆ ತಲುಪಿದ ವ್ಯಕ್ತಿ!
ಹೀಗಾಗಿ ಬೆಳಿಗ್ಗೆಯಿಂದ ಕೊಪ್ಪಳದಲ್ಲಿ ಬಂದ್‌ನ ಯಾವುದೇ ಎಫೆಕ್ಟ್ ಕಂಡು ಬರಲಿಲ್ಲ. ಇನ್ನು ಬೆಳಿಗ್ಗೆ ಕೊಪ್ಪಳ ತಾಲೂಕಿನ ಹಿಟ್ನಾಳ್ ಬಳಿಯ ರಾಷ್ಟ್ರೀಯ ಹೆದ್ದಾರಿ 50 ರಲ್ಲಿನ ಟೋಲ್‌ಗೇಟ್‌ಗೆ ಮುತ್ತಿಗೆ ಹಾಕಲು ಯತ್ನಿಸಿದ ಕನ್ನಡಪರ ಸಂಘಟನೆಗಳ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ, ಬಳಿಕ ಬಿಡುಗಡೆ ಮಾಡಿದರು.
ಇದನ್ನೂ ಓದಿ: Black Hole: ಸೂರ್ಯನಕ್ಕಿಂತ 6.5 ಶತಕೋಟಿ ಪಟ್ಟು ದೊಡ್ಡ ‘ಕಪ್ಪು ಕುಳಿ’ ಗರಗರನೆ ತಿರುಗುತ್ತಿದೆ! ಹೊಸ ಆವಿಷ್ಕಾರ
ಗಂಗಾವತಿ ನಗರದ ಬಹುತೇಕ ಪ್ರದೇಶದಲ್ಲಿನ ಅಂಗಡಿ ಮುಂಗಟ್ಟುಗಳು ಎಂದಿನಂತೆ ಬೆಳಗಿನಿಂದಲೇ ಆರಂಭವಾಗಿ ವ್ಯಾಪಾರ ವಹಿವಾಟು ನಡೆದವು. ಸಾರಿಗೆ ಸಂಸ್ಥೆಯ ವಾಹನ ಸೇರಿದಂತೆ ಸಾರ್ವಜನಿಕ ವಾಹನಗಳ ಓಡಾಟ ಸಹಜವಾಗಿತ್ತು. ಜನರ ಸಂಚಾರ, ವ್ಯಾಪಾರ ಎಲ್ಲವೂ ಸುಗಮವಾಗಿದ್ದವು. ಶುಕ್ರವಾರ ಬೆಳಗ್ಗೆ ಜನರಿಗೆ ಬಂದ್ ಭೀತಿ ಎದುರಾಗಿತ್ತಾದರೂ ಸಮಯ ಕಳೆದಂತೆಲ್ಲಾ ಎಂಟು ಗಂಟೆಯ ಬಳಿಕ ಎಲ್ಲವೂ ಸಹಜವಾಗಿ ಚಟುವಟಿಕೆ ನಡೆದವು. ಶಾಲಾ-ಕಾಲೇಜು, ಸರ್ಕಾರಿ ಕಚೇರಿಗಳು ಎಂದಿನಂತೆ ಕಾರ್ಯನಿರ್ವಹಿಸಿದವು.