Site icon Vistara News

Rain News | ಕೊಪ್ಪಳ, ಯಾದಗಿರಿಯಲ್ಲಿ 15 ದಿನದ ಬಳಿಕ ಮತ್ತೆ ವರುಣಾರ್ಭಟ: ಹೊಲಗಳಲ್ಲಿ ನೀರು, ಸಂಪರ್ಕ ಕಡಿತ

Rain News

ಕೊಪ್ಪಳ/ ಯಾದಗಿರಿ : ಜಿಲ್ಲೆಯಲ್ಲಿ ಬೆಳಗ್ಗೆಯಿಂದ (ಭಾನುವಾರ ಆ.28) ವರುಣನ ಆರ್ಭಟ (Rain News) ಹೆಚ್ಚಾಗಿದ್ದು ಮಳೆಯಿಂದಾಗಿ ಜ‌ನಜೀವನ ಅಸ್ತವ್ಯಸ್ತಗೊಂಡಿದೆ. ಕಳೆದ ಹದಿನೈದು‌ ದಿನಗಳಿಂದ ಬಿಡುವು ನೀಡಿದ್ದ ಮಳೆ ಮತ್ತೆ ಕಳೆದ ಎರಡು ದಿನಗಳಿಂದ ಆರಂಭಗೊಂಡಿದೆ.

ಕೊಪ್ಪಳ ತಾಲೂಕಿನ ಹಿರೇಸಿಂದೋಗಿ ಬಳಿಯ ಚನ್ನಳ್ಳದಲ್ಲಿ ಪ್ರವಾಹವಾಗಿದೆ. ಹಣವಾಳ ಬಳಿಯಲ್ಲಿ ಹಳ್ಳಗಳು ತುಂಬಿ ಹರಿಯುತ್ತಿವೆ. ಮಳೆಯಿಂದ ಹೊಲಗಳಲ್ಲಿ ನೀರು ನಿಂತಿದ್ದು ಬೆಳೆಗಳು ನಾಶಗೊಂಡಿವೆ.

ಇದನ್ನೂ ಓದಿ | Rain news | ಮುಂದುವರಿದ ಮಳೆ, ರಾಮನಗರದಲ್ಲಿ ಕೆರೆ ಒಡೆದು ಮನೆಗಳಿಗೆ ನುಗ್ಗಿದ ನೀರು

ಯಾದಗಿರಿಯಲ್ಲಿಯೂ ವರುಣನ ಅಬ್ಬರ ಮುಂದುವರಿದಿದ್ದು, ನಾಯ್ಕಲ್ ಗ್ರಾಮದ ಹೊರಭಾಗದ ಸೇತುವೆ ಜಲಾವೃತಗೊಂಡಿವೆ. ಜಿಲ್ಲೆಯ ವಡಗೇರಾ ತಾಲೂಕಿನ ನಾಯ್ಕಲ್ ಗ್ರಾಮದಲ್ಲಿ ಸೇತುವೆ ಜಲಾವೃತ ಗೊಂಡಿದ್ದು ಚಟ್ನಳ್ಳಿ- ಯಾದಗಿರಿಗೆ ಸಂಪರ್ಕ ಕಲ್ಪಿಸುವ ಸೇತುವೆ ಕಡಿತಗೊಂಡಿದೆ. ರಾತ್ರಿಯಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಬೆಳೆಗಳು ನೀರು ಪಾಲಾಗಿವೆ.

ಇದನ್ನೂ ಓದಿ | Bangalore rain news | ಶುಕ್ರವಾರ ಮಳೆಯಿಂದಲೇ ಆರಂಭ, ಹಲವೆಡೆ ಯೆಲ್ಲೋ ಅಲರ್ಟ್‌

Exit mobile version