Site icon Vistara News

ಗಂಗಾವತಿಯ ಅಂಜನಾದ್ರಿಯೇ ಹನುಮನ ಜನುಮಸ್ಥಳ: ವಿನಯ್ ಗೂರೂಜಿ ಭೇಟಿ

ವಿನಯ್ ಗೂರೂಜಿ

ಕೊಪ್ಪಳ: ಪೌರಾಣಿಕ ಹಾಗೂ ಐತಿಹಾಸಿಕ ಹಿನ್ನೆಲೆಯುಳ್ಳ, ಹನುಮಂತನ ಜನ್ಮಸ್ಥಳವಾದ ಗಂಗಾವತಿ ತಾಲೂಕಿನ ಅಂಜನಾದ್ರಿಗೆ ಅವಧೂತ ವಿನಯ್ ಗುರೂಜಿ ಮಂಗಳವಾರ ಭೇಟಿ ನೀಡಿ ಆಂಜನೇಯನ ದರ್ಶನ ಪಡೆದುಕೊಂಡರು.

ಖಾಸಗಿ ಕಾರ್ಯಕ್ರಮವೊಂದಕ್ಕೆ ಆಗಮಿಸಿದ್ದ ಗುರೂಜಿ ದೇವಾಲಯಕ್ಕೆ ಭೇಟಿ ನೀಡಿದರು. ಈ ವೇಳೆ ಮಾತನಾಡಿದ ವಿನಯ್ ಗೂರೂಜಿ, ಬೇರೆ ರಾಜ್ಯದಲ್ಲಿ ಅವರುಗಳ ಪ್ರವಾಸೋದ್ಯಮ ಬೆಳವಣಿಗೆ ಏನಾದರೂ ಹೇಳಿಕೊಳ್ಳುತ್ತಾರೆ. ಅದು ಅವರ ವೈಯಕ್ತಿಕ ವಿಷಯ. ಧಾರ್ಮಿಕ ಪುರಾಣ, ಧರ್ಮಗ್ರಂಥಗಳಲ್ಲಿ ಕೂಡ, ಈ ಸ್ಥಳವೇ ಹನುಮ ಜನ್ಮಭೂಮಿ ಕಿಷ್ಕಿಂಧೆ ಎಂಬ ಉಲ್ಲೇಖವಿದೆ. ಅದೆ ಸತ್ಯವಾದ ವಿಷಯ ಎಂದರು.

ಸ್ಥಳಿಯ ಶಾಸಕ ಪರಣ್ಣ ಸೇರಿ ಅನೇಕ‌ ಮುಖಂಡರು ಜತೆಗಿದ್ದರು.

ಇದನ್ನೂ ಓದಿ| ಅಂಜನಾದ್ರಿ ಬೆಟ್ಟದ ಅಭಿವೃದ್ಧಿಗೆ ಸಿಎಂ ಸಭೆ; ತ್ವರಿತ ಕ್ರಮಗಳಿಗೆ ಸೂಚನೆ

Exit mobile version