ಕೊಪ್ಪಳ: ಜಿಲ್ಲೆಯ ಕುಷ್ಟಗಿ ತಾಲೂಕಿನ ಮಾವಿನ ಇಟಗಿ ಗ್ರಾಮದಲ್ಲಿ ಕಳೆದ ಮೇ 6ರಂದು ನಡೆದ ಅಪಘಾತದಲ್ಲಿ ಒಬ್ಬ ಯುವಕ ಮೃತಪಟ್ಟಿದ್ದ. ಈ ಸಾವು ಅಪಘಾತದಿಂದ ಸಂಭವಿಸಿದ್ದಲ್ಲ. ಇದೊಂದು ಕೊಲೆ ಎಂದು ಮನೆ ಮಂದಿ ಕೊಪ್ಪಳ ಎಸ್ಪಿಗೆ ದೂರು ನೀಡಿದ್ದು ತನಿಖೆಗೆ ಆಗ್ರಹಿಸಿದ್ದಾರೆ.
ಆವತ್ತು ಆಗಿದ್ದೇನು?
ಮಸ್ಕಿ ತಾಲೂಕಿನ ತಿಮ್ಮಾಪುರ ಗ್ರಾಮದ ರಾಘವೇಂದ್ರ ಮತ್ತು ಗೆಳೆಯ ಯಮನೂರಪ್ಪ ಮೇ 6ರಂದು ಮಾವಿನ ಇಟಗಿಗೆ ಬೈಕ್ ನಲ್ಲಿ ತೆರಳಿದ್ದರು. ಅಲ್ಲಿ ದೇವರ ಕಾರ್ಯವಿದೆ ಎಂದು ಹೇಳಿ ಯಮನೂರಪ್ಪ ರಾಘವೇಂದ್ರನನ್ನು ಕರೆದುಕೊಂಡು ಹೋಗಿದ್ದ.
ಈ ನಡುವೆ ಬೈಕ್ ಸ್ಕಿಡ್ ಆಗಿ ರಾಘವೇಂದ್ರ ಮೃತಪಟ್ಟಿದ್ದಾನೆ ಎಂದು ಹೇಳಲಾಗಿದೆ. ಅಪಘಾತದಲ್ಲಿ ಯಮನೂರಪ್ಪ ಅವರಿಗೆ ಏನೂ ಗಾಯಗಳೇ ಆಗಿಲ್ಲ. ಹಾಗಿರುವಾಗ ರಾಘವೇಂದ್ರ ಸಾವನ್ನಪ್ಪಿದ್ದು ಹೇಗೆ ಎಂದು ಕುಟುಂಬಿಕರು ಸಂಶಯಿಸಿದ್ದಾರೆ. ರಾಘವೇಂದ್ರನಿಗೆ ಬೈಕ್ ಬಿಡುವುದಕ್ಕೇ ಗೊತ್ತಿಲ್ಲ. ಆದರೆ ಅವನೇ ಬೈಕ್ ಚಲಾಯಿಸುತ್ತಿದ್ದ ಎಂದು ಹೇಳಲಾಗಿದೆ. ಇದು ಹೇಗೆ ಸಾಧ್ಯ ಎಂದು ಅವರು ಪ್ರಶ್ನಿಸಿದ್ದಾರೆ. ಇದೊಂದು ಕೊಲೆಯಾಗಿರಬಹುದು ಎನ್ನುವುದು ಅವರ ಸಂಶಯ.
ಹೀಗಾಗಿ, ಘಟನೆಯ ಬಗ್ಗೆ ಸಮಗ್ರ ತನಿಖೆ ನಡೆಸಿ ನ್ಯಾಯ ಒದಗಿಸಬೇಕು ಎಂದು ಮೃತ ರಾಘವೇಂದ್ರ ಅವರ ಕುಟುಂಬದವರು ಕೊಪ್ಪಳ ಜಿಲ್ಲಾ ವರಿಷ್ಠಾಧಿಕಾರಿಗಳಿಗೆ ಸಲ್ಲಿಸಿದ ಮನವಿಯಲ್ಲಿ ಕೋರಿದ್ದಾರೆ. ಹೀಘಾಗಿ ಹನುಮಸಾಗರ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿ ಹೊಸ ತನಿಖೆ ನಡೆಯುವ ಸಾಧ್ಯತೆಯೂ ಇದೆ.
ಇದ್ದನು ಓದಿ | ಕೆಂಗೇರಿ ಬಳಿ ಮೆಟ್ರೊ ಪಿಲ್ಲರ್‌ಗೆ ಡಿಕ್ಕಿ ಹೊಡೆದ ಸರಕಾರಿ ಬಸ್, ನಾಲ್ಕು ಮಂದಿಗೆ ಗಾಯ