ಯಲ್ಲಾಪುರ: ಬೆಂಗಳೂರಿನ ಚನ್ನಮ್ಮನ ಕೆರೆ ಒಳಾಂಗಣ ಕ್ರಿಡಾಂಗಣದಲ್ಲಿ ನಡೆದ ಕರ್ನಾಟಕ ಪ್ರಿಮಿಯರ್ ಲೀಗ್ ಕ್ವಾಡ್ ಸ್ಕೇಟಿಂಗ್ ಹಾಕಿ (Hockey) ಪಂದ್ಯಾವಳಿಯಲ್ಲಿ ಯಲ್ಲಾಪುರ ರೋಲರ್ ಸ್ಕೇಟಿಂಗ್ ಕ್ಲಬ್‌ನ ವಿದ್ಯಾರ್ಥಿಗಳು ಗೆಲುವು ಸಾಧಿಸಿ, ಬಂಗಾರದ ಪದಕ (Gold medals) ಪಡೆದುಕೊಂಡಿದ್ದಾರೆ.
ಜುಲೈ 14ರಿಂದ ಪ್ರಾರಂಭವಾಗಿದ್ದ ಕರ್ನಾಟಕ ಪ್ರೀಮಿಯರ್ ಲೀಗ್ ಕ್ವಾಡ್ ಸ್ಕೇಟಿಂಗ್ ಹಾಕಿ ಪಂದ್ಯಾವಳಿಯಲ್ಲಿ ಬ್ಲ್ಯಾಕ್ ಪ್ಯಾಂಥರ್ಸ್ ಹಾಗು ವೆಸ್ಟರ್ನ್ ಬುಲ್ಸ್ ತಂಡದ ನಡುವೆ ನಡೆದ ಪೈನಲ್ ಪಂದ್ಯದಲ್ಲಿ 4-2 ಅಂತರದಿಂದ ಜಯ ಸಾಧಿಸಿ ವೆಸ್ಟರ್ನ್ ಬುಲ್ಸ್ ತಂಡದ ಆಟಗಾರರು ಬಂಗಾರದ ಪದಕವನ್ನು ಪಡೆದುಕೊಂಡರು.
ಇದನ್ನೂ ಓದಿ: ಕೊರೊನಾ ವೇಳೆ 19 ವರ್ಷದವನ ಹವ್ಯಾಸವು ಕೋಟ್ಯಧೀಶನನ್ನಾಗಿ ಮಾಡಿತು; ಚಾಕೊಲೇಟ್ ಬಾಯ್ ಕತೆ
ಕರ್ನಾಟಕದ ವಿವಿಧ ಊರುಗಳಿಂದ 220ಕ್ಕೂ ಹೆಚ್ಚು ಸ್ಕೇಟಿಂಗ್ ಪಟುಗಳು ಬಾಗವಹಿಸಿದ್ದ ಈ ಕರ್ನಾಟಕ ಪ್ರೀಮಿಯರ್ ಲೀಗ್ ಪಂದ್ಯಾವಳಿಯಲ್ಲಿ ಯಲ್ಲಾಪುರ ರೋಲರ್ ಸ್ಕೇಟಿಂಗ್ ಕ್ಲಬ್‌ನ ಆಟಗಾರರಾದ ವಿಶ್ವದರ್ಶನ ಪ್ರೌಢಶಾಲೆಯ ತಪನ್ ಲಕ್ಷ್ಮೀಕಾಂತ ಭಟ್ಟ, ಪುಷ್ಕರ್ ಪ್ರಕಾಶ್ ಶೇಟ್, ಕಿರಣ ಮಂಜುನಾಥ ರಾವ್, ದಿಯಾ ಸುರೇಶ ಶೇಟ್ ಹಾಗೂ ಮದರ್ ಥೆರೆಸಾ ಆಂಗ್ಲ ಮಾಧ್ಯಮ ಶಾಲೆಯ ಸೇಜಲ್ ಸತೀಶ ನಾಯ್ಕ ಪೈನಲ್ ಪಂದ್ಯದಲ್ಲಿ ಆಟವಾಡಿ ಕ್ಲಬ್‌ನ ಪ್ರತಿಷ್ಠೆಯನ್ನು ಹೆಚ್ಚಿಸಿದ್ದಾರೆ ಎಂದು ಯಲ್ಲಾಪುರ ರೋಲರ್ ಸ್ಕೇಟಿಂಗ್ ಕ್ಲಬ್‌ನ ಆಧ್ಯಕ್ಷ ಪ್ರಕಾಶ ಶೇಟ್ ತಿಳಿಸಿದ್ದಾರೆ.
ಇದನ್ನೂ ಓದಿ: Weather Report : ಮಲೆನಾಡು ಆಗಲಿದೆ ಮಳೆನಾಡು; ಕರಾವಳಿಯಲ್ಲೂ ಮಳೆಯಾಟ ಬಲು ಜೋರು
ಕರೋನಾ ಲಾಕ್‌ಡೌನ್ ಸಂದರ್ಭದಲ್ಲಿ ಕರ್ನಾಟಕ ರೋಲರ್ ಸ್ಕೇಟಿಂಗ್ ಕ್ಲಬ್ ನ ತರಬೇತುದಾರರಾದ ದಿಲೀಪ್ ಹಣಬರ್, ಅಜೇಯ ಗಾವಡಾ, ಸಚಿನ ಗಾವಡಾ ಅವರಿಂದ ತರಬೇತಿ ಪಡೆದ ಯಲ್ಲಾಪುರದ ಅನೇಕ ಮಕ್ಕಳು, ಕಳೆದ ಎರಡು ವರ್ಷಗಳಿಂದ ಚಂಡಿಗಡ್ ಹಾಗೂ ಪಂಜಾಬ್‌ನಲ್ಲಿ ನಡೆದ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು, ಈಗ ಬೆಂಗಳೂರಿನಲ್ಲಿ ನಡೆದ ಕರ್ನಾಟಕ ಪ್ರಿಮಿಯರ್ ಲೀಗ್ ಕ್ವಾಡ್ ಸ್ಕೇಟಿಂಗ್ ಹಾಕಿ ಪಂದ್ಯಾವಳಿಯಲ್ಲಿ ಬಂಗಾರದ ಪದಕ ಪಡೆದುಕೊಂಡಿದ್ದು ತಾಲೂಕಿಗೆ ಹೆಮ್ಮೆ ತಂದಿದ್ದಾರೆ.