Site icon Vistara News

KSRTC Bumper Gift | ಸಾರ್ವತ್ರಿಕ, ಹಬ್ಬದ ರಜೆಗಳಂದು ಕೆಲಸ ಮಾಡುವ ಸಿಬ್ಬಂದಿಗೆ ಹೆಚ್ಚುವರಿ ವೇತನ‌

ksrtc employees strike suspended workers to be reinstated

ಬೆಂಗಳೂರು: ಸಾರ್ವತ್ರಿಕ, ಹಬ್ಬದ ರಜೆಗಳಂದು ಹೆಚ್ಚುವರಿ ಕೆಲಸ ಮಾಡುವ ಸಿಬ್ಬಂದಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ಬಂಪರ್ ಗಿಫ್ಟ್ (KSRTC Bumper Gift) ನೀಡಿದೆ. ಈ ದಿನಗಳಂದು ಸಿಬ್ಬಂದಿ ಕೆಲಸ ನಿರ್ವಹಿಸಿದರೆ ಹೆಚ್ಚುವರಿ ವೇತನ (Double Wage) ಸಿಗಲಿದೆ ಎಂಬ ಸಿಹಿ ಸುದ್ದಿ ನೀಡಿದೆ.

ಮುಂಬರುವ ದಿನಗಳಲ್ಲಿ ಜನದಟ್ಟಣೆ ಹೆಚ್ಚಿದ್ದು, ಪೀಕ್‌ ಸೀಸನ್‌ ಆಗಿರುವುದರಿಂದ ವಾಹನಗಳ ಕಾರ್ಯಾಚರಣೆಗೆ ಸಿಬ್ಬಂದಿ ಲಭ್ಯತೆಗಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಜನವರಿ 23ರಿಂದ ಜೂನ್ 23ರವರೆಗೆ ನೌಕರರು ಆಯ್ಕೆ ಮಾಡಿಕೊಂಡಿರುವ ಸಾರ್ವತ್ರಿಕ, ಹಬ್ಬದ ರಜಾ ದಿನಗಳಂದು ಕೆಲಸ ಮಾಡಿದರೆ ಹೆಚ್ಚುವರಿ ಸಂಬಳ ನೀಡಲು ಅಧಿಕಾರಿಗಳಿಗೆ ಸಾರಿಗೆ ನಿಗಮ ಸೂಚಿಸಿದೆ.

ಇದನ್ನೂ ಓದಿ | Moral education : ಮುಂದಿನ ವರ್ಷದಿಂದಲೇ ಮೌಲ್ಯ ಶಿಕ್ಷಣ ಜಾರಿ; ಅಧ್ಯಯನಕ್ಕೆ ಉನ್ನತ ಸಮಿತಿ ರಚನೆ

Exit mobile version