Site icon Vistara News

KSRTC ev power plus: ಕೆಎಸ್‌ಆರ್‌ಟಿಸಿ ಹೊಸ ಇವಿ ಪವರ್ ಪ್ಲಸ್ ಬಸ್‌ ಲೋಕಾರ್ಪಣೆ; ಏನಿದರ ವಿಶೇಷ?

Chief Minister Inaugurates KSRTC EV Power plus Electric Vehicles

Chief Minister Inaugurates KSRTC EV Power plus Electric Vehicles

ಬೆಂಗಳೂರು: ಕೆಎಸ್‌ಆರ್‌ಟಿಸಿ ನಿಗಮವು (KSRTC) ತನ್ನ ಹೊಸ ಎಲೆಕ್ಟ್ರಿಕ್‌ ಬಸ್ಸುಗಳನ್ನು (Electric Bus) ರಸ್ತೆಗಿಳಿಸಿದ್ದಾರೆ. ಇವಿ ಪವರ್ ಪ್ಲಸ್ (ksrtc ev power plus) ಎಸಿ ಬಸ್ಸುಗಳನ್ನು ಸೋಮವಾರ ವಿಧಾನಸೌಧ ಗ್ರ್ಯಾಂಡ್ ಸ್ಟೆಪ್ಸ್ ಮುಂಭಾಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Cm Basavaraj Bommai) ಲೋಕಾರ್ಪಣೆ ಮಾಡಿದರು.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಮೇಕ್ ಇನ್ ಇಂಡಿಯಾದ (Make in India) ವಿದ್ಯುತ್ ಬಸ್ ಫೇಮ್-2 ಯೋಜನೆ ಅಡಿಯಲ್ಲಿ 50 ಅಂತರ ನಗರ ಹವಾ ನಿಯಂತ್ರಿತ ವಿದ್ಯುತ್ ಚಾಲಿತ ಬಸ್ಸುಗಳನ್ನು ಕಾರ್ಯಾಚರಣೆಗೊಳಿಸಲು ಯೋಜಿಸಿದೆ. ಈ ಪೈಕಿ 25 ವಾಹನಗಳನ್ನು ಸೋಮವಾರದಿಂದ ಕಾರ್ಯಾಚರಣೆಗೊಳಿಸಲಾಗುತ್ತಿದೆ.

ಕಳೆದ ಕೆಲವು ದಿನಗಳ ಹಿಂದಷ್ಟೆ ನಿಗಮವು ಸ್ಕ್ಯಾಂಡಿನೇವಿಯನ್ ಯುರೋಪಿಯನ್ ವಿನ್ಯಾಸದ ವೋಲ್ವೋ-9600s ಅಂಬಾರಿ ಉತ್ಸವ ವಾಹನವನ್ನು ಸಾರ್ವಜನಿಕ ಬಳಕೆಗಾಗಿ ಲೋಕಾರ್ಪಣೆ ಮಾಡಿತ್ತು. ಇದೀಗ ನಿಗಮವು ತನ್ನ ಎಲೆಕ್ಟ್ರಿಕ್‌ ಬಸ್‌ಗಳಿಗೆ ಸ್ಪರ್ಧೆಯ ಮೂಲಕ ಸಾರ್ವಜನಿಕರಿಂದ ಸ್ವೀಕರಿಸಿದ ಹೆಸರುಗಳ ಮೂಲಕ ‘EV ಪವರ್ ಪ್ಲಸ್’ ಎಂದು ನಾಮಕರಣ ಮಾಡಿದ್ದು, ಇದಕ್ಕೆ ಅತ್ಯುತ್ತಮ ಅನುಭವ, ‘EV Power Plus’– e-Xperience e-levated’ ಎಂಬ ಟ್ಯಾಗ್ ಲೈನ್ ಅನ್ನು ನೀಡಿದೆ.

ಯಾವ್ಯಾವ ನಗರದಲ್ಲಿ ಇವಿ ಪವರ್‌ ಪ್ಲಸ್‌ ಸಂಚಾರ

1) ಬೆಂಗಳೂರು ಟು ಮೈಸೂರು
2) ಬೆಂಗಳೂರು ಟು ಮಡಿಕೇರಿ
3) ಬೆಂಗಳೂರು ಟು ವಿರಾಜಪೇಟೆ
4) ಬೆಂಗಳೂರು ಟು ದಾವಣಗೆರೆ
5) ಬೆಂಗಳೂರು ಟು ಶಿವಮೊಗ್ಗ
6) ಬೆಂಗಳೂರು ಟು ಚಿಕ್ಕಮಗಳೂರು

ಇವಿ ಪವರ್ ಪ್ಲಸ್ ವಿಶೇಷತೆಗಳೇನು?

ಇವಿ ಪವರ್‌ ಪ್ಲಸ್‌ 12 ಮೀಟರ್ ಉದ್ದವಿದ್ದು, ಸುಮಾರು 300 ಕಿ.ಮೀ. ಸಂಚರಿಸುವ ಸಾಮರ್ಥ್ಯ ಹೊಂದಿದೆ. ಸುಧಾರಿತ Li-ion Phosphate Battery ಹೊಂದಿರುವ ಇವಿ ಪವರ್‌ ಪ್ಲಸ್‌ ಬಸ್‌ನಲ್ಲಿ 2-3 ಗಂಟೆಗಳಲ್ಲಿ ಫಾಸ್ಟ್‌ ಚಾರ್ಜಿಂಗ್‌ ವ್ಯವಸ್ಥೆ ಇದೆ. ಚಾಲಕರು, ನಿರ್ವಾಹಕರು ಸೇರಿದಂತೆ 45 ಆಸನಗಳನ್ನು ಹೊಂದಿದೆ. ಸಿಸಿ ಟಿವಿ ಕ್ಯಾಮರಾಗಳು, ಎಮರ್ಜೆನ್ಸಿ ಬಟನ್, ಅಗ್ನಿಶಾಮಕ ಸಾಧನ, ಪ್ರಥಮ ಚಿಕಿತ್ಸಾ ಕಿಟ್, ಗ್ಲಾಸ್ ಹ್ಯಾಮ್ಮರ್ ಮುಂತಾದ ಸುರಕ್ಷತಾ ವೈಶಿಷ್ಟ್ಯಗಳನ್ನು ಅಳವಡಿಸಲಾಗಿದೆ.

ಇದನ್ನೂ ಓದಿ: Kumta News: 1.36 ಲಕ್ಷ ರೂ. ನಗದು, 30 ಗ್ರಾಂ ಚಿನ್ನಾಭರಣವಿದ್ದ ಬ್ಯಾಗ್ ಮರಳಿಸಿದ ಆಟೋ ಚಾಲಕ

ರಾಜ್ಯದ ಎಲ್ಲ ನಗರಗಳ ನಡುವೆ ಸುಸಜ್ಜಿತ ಸಾರಿಗೆ ಸೌಲಭ್ಯವನ್ನು ಕಲ್ಪಿಸುವ ಉದ್ದೇಶದಿಂದ ಹಂತ–ಹಂತವಾಗಿ 350 ವಿದ್ಯುತ್ ವಾಹನಗಳನ್ನು ನಿಗಮದಿಂದ ಸೇರ್ಪಡೆಗೊಳಿಸುವ ಯೋಜನೆಯಿದೆ. ಗ್ರಾಮಾಂತರ ಪ್ರದೇಶದ ಪ್ರಯಾಣಿಕರಿಗೂ ಸುಸಜ್ಜಿತ ಸಾರಿಗೆ ಸೌಲಭ್ಯವನ್ನು ಕಲ್ಪಿಸುವ ಉದ್ದೇಶದಿಂದ 600 ಹೊಸ ಕರ್ನಾಟಕ ಸಾರಿಗೆ ಮಾದರಿಯ ವಾಹನಗಳು ಮೂರು ತಿಂಗಳ ಅವಧಿಯಲ್ಲಿ ಸೇರ್ಪಡೆಗೊಳಿಸಲಾಗುತ್ತಿದೆ.

ರಾಜ್ಯದ ಪ್ರಮುಖ ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version