ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಶ್ರೀಕುಕ್ಕೆ ಸುಬ್ರಹ್ಮಣ್ಯ (Kukke Subramanya) ದೇವಸ್ಥಾನದ ಆನೆಯೊಂದರ (Elephant) ಕಾಲು ಮ್ಯಾನ್‌ಹೋಲ್‌ಗೆ (manhole) ಸಿಲುಕಿ ಒದ್ದಾಟ ನಡೆಸಿದ ಪ್ರಸಂಗ ನಡೆದಿದೆ. ದೇವಸ್ಥಾನದ ಆನೆ ಯಶಸ್ವಿನಿ ಕಾಲಿಗೆ ಗಂಭೀರ ಗಾಯಗಳಾಗಿವೆ.
ಆದಿ ಸುಬ್ರಹ್ಮಣ್ಯ ಭಾಗದಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಈ ಘಟನೆ ಸಂಭವಿಸಿದೆ. ದಾರಿ ಮಧ್ಯೆ ಇದ್ದ ಮ್ಯಾನ್‌ಹೋಲ್ ಯಶಸ್ವಿನಿಗೆ ಕಾಣಿಸಲಿಲ್ಲ. ಹೀಗಾಗಿ ಮ್ಯಾನ್‌ಹೋಲ್ ಒಳಗೆ ಆನೆಯ ಕಾಲು ಸಿಲಿಕಿದೆ. ಇದರಿಂದ ಯಶಸ್ವಿನಿ ಎಡಗಾಲಿಗೆ ಗಾಯಗಳಾಗಿವೆ.
ಭಾರಿ ನೋವಿನಿಂದ ಆನೆಯು ಗೀಳಿಟ್ಟಿದ್ದು, ನರಳಾಡಿದೆ. ಹೀಗಾಗಿ ಮೈಸೂರಿನಿಂದ ಪಶು ವೈದ್ಯರನ್ನು ಕರೆಸಿ ಆನೆಗೆ ಚಿಕಿತ್ಸೆ ನೀಡಲಾಗಿದೆ. ಸದ್ಯ ಅಲ್ಪ ಚೇತರಿಸಿಕೊಂಡರೂ ಯಶಸ್ವಿನಿ ನಡೆಯಲಾಗದ ಸ್ಥಿತಿಯಲ್ಲಿದೆ. ಅದೀಗ ಕುಂಟುತ್ತಾ, ಕುಂಟುತ್ತಾ ಸಾಗುತ್ತಿದ್ದು, ಭಾರಿ ಕಷ್ಟಪಡುತ್ತಿದೆ.
ಕುಕ್ಕೆ ಸುಬ್ರಹ್ಮಣ್ಯ ಇತಿಹಾಸದಲ್ಲೆ ದಾಖಲೆ ಆದಾಯ; 123 ಕೋಟಿ ರೂ. ಸಂಗ್ರಹ
ಮುಜರಾಯಿ ಇಲಾಖೆ ಅಡಿ ಬರುವ ಶ್ರೀಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನವು (Kukke Subramanya Temple) ವಾರ್ಷಿಕ ಆದಾಯ ರೂಪದಲ್ಲಿ 123 ಕೋಟಿ ರೂಪಾಯಿಯನ್ನು ಗಳಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನಲ್ಲಿರುವ ಶ್ರೀಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಆರ್ಥಿಕ ವರ್ಷ ಮುಗಿದಿತ್ತು. ಕಳೆದ ತಿಂಗಳು ಲೆಕ್ಕಾಚಾರ ಹಾಕಿದ್ದಾಗ ಈ ವಿಷಯ ತಿಳಿದುಬಂದಿತ್ತು.
2022ರ ಏಪ್ರಿಲ್‌ನಿಂದ 2023 ಮಾರ್ಚ್ 31ರ ತನಕ ಆರ್ಥಿಕ ವರ್ಷವೆಂದು ಪರಿಗಣಿಸಿದ್ದು, 123,64,49,480,47 ರೂ. ಆದಾಯ ಗಳಿಸಿದೆ. ಈ ಮೂಲಕ ಈ ಬಾರಿಯೂ ರಾಜ್ಯದಲ್ಲಿ ಮೊದಲ ಸ್ಥಾನಿಯಾಗುವ ನಿರೀಕ್ಷೆಯನ್ನು ಆಡಳಿತ ಮಂಡಳಿ ಹೊಂದಿದೆ. ಹರಕೆ ಸೇವೆ, ಕಾಣಿಕೆ ಡಬ್ಬಿ, ಬಡ್ಡಿ, ಛತ್ರಗಳ ಬಾಡಿಗೆ, ಕಟ್ಟಡಗಳ ಬಾಡಿಗೆ ಮತ್ತು ಕೃಷಿ ತೋಟದಿಂದ ಬಂದಿರುವ ಆದಾಯ ಇದಾಗಿದೆ. ಸತತ ರಾಜ್ಯದ ನಂಬರ್ ಒನ್ ಆದಾಯ ಗಳಿಕೆಯ ದೇವಸ್ಥಾನವಾಗಿ ಕುಕ್ಕೆ ಸುಬ್ರಮಣ್ಯ ಗುರುತಿಸಿಕೊಂಡಿದೆ.
ಇದನ್ನೂ ಓದಿ: KSRTC Bus Pass: ಶಾಲಾ ಮಕ್ಕಳಿಗೆ ಬಸ್ ಪಾಸ್ ಅವಧಿ ವಿಸ್ತರಣೆ; ಎಷ್ಟು ದಿನಕ್ಕೆ ಅವಕಾಶ, ಏನಿದೆ ಕಂಡೀಷನ್?
ಯಾವ್ಯಾವ ವರ್ಷದಲ್ಲಿ ಎಷ್ಟೆಷ್ಟು ಆದಾಯ ಗಳಿಕೆ?
2006-2007ರಲ್ಲಿ ದೇವಸ್ಥಾನದ ಆದಾಯ 19.76 ಕೋಟಿ ರೂ. ಆಗಿತ್ತು
2007- 2008ರಲ್ಲಿ 24.44 ಕೋಟಿ ರೂ
2008-2009ರಲ್ಲಿ 31 ಕೋಟಿ ರೂ.
2009-2010ರಲ್ಲಿ 38.51 ಕೋಟಿ ರೂ.
2011-2012ರಲ್ಲಿ 56.24 ಕೋಟಿ ರೂ.
2012-2013ರಲ್ಲಿ 66.76 ಕೋಟಿ ರೂ.
2013-2014ರಲ್ಲಿ 68 ಕೋಟಿ ರೂ.
2014-2015ರಲ್ಲಿ 77 ಕೋಟಿ ರೂ.
2015-2016ರಲ್ಲಿ 88 ಕೋಟಿ ರೂ.
2016-2017ರಲ್ಲಿ 91.69 ಕೋಟಿ ರೂ.
2017-2018ರಲ್ಲಿ 95.92 ಕೋಟಿ ರೂ.
2018-2019ರಲ್ಲಿ 92.09 ಕೋಟಿ ರೂ.
2019-2020ರಲ್ಲಿ 98.92 ಕೋಟಿ ರೂ.
2020-2021ರಲ್ಲಿ 68.94 ಕೋಟಿ ರೂ.
2021-2022ರಲ್ಲಿ 12.73 ಕೋಟಿ ರೂ.