ವಿಜಯನಗರ: ಇಲ್ಲಿನ ಪರಪನಹಳ್ಳಿ ತಾಲೂಕಿನ ಕೂಲಹಳ್ಳಿ ಶ್ರೀ ಗೋಣಿಬಸವೇಶ್ವರ ರಥೋತ್ಸವ (Goni Basaveshwara) ವಿಜೃಂಭಣೆಯಿಂದ, ಬಿರುದಾವಳಿ ಮೂಲಕ ಜರುಗಿತು. ಈ ಅದ್ಧೂರಿ-ಸಂಭ್ರಮದ ರಥೋತ್ಸವದ ದೃಶ್ಯ ಡ್ರೋನ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಮನಮೋಹಕವಾಗಿದೆ. ರಥೋತ್ಸವಕ್ಕೂ ಮುನ್ನ ಅರ್ಚಕರು ರಥ ಮಂಟಪದಲ್ಲಿ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಿ, ಮಹಾಮಂಗಳಾರತಿ ಮಾಡಿದರು. ಬಳಿಕ ಭರ್ಜರಿ ಜಯಘೋಷ ಮಾಡಿ, ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ನೆರೆದಿದ್ದ ಭಕ್ತರು ದೇವರಿಗೆ ನಮಿಸಿ, ರಥಕ್ಕೆ ಬಾಳೆಹಣ್ಣು ಎಸೆದು ಹರಕೆ ತೀರಿಸಿಕೊಂಡರು.
ಕೂಲಹಳ್ಳಿ ಶ್ರೀ ಗೋಣಿಬಸವೇಶ್ವರರು ಮನುಕುಲದ ಕಲ್ಯಾಣಕ್ಕಾಗಿ ಧರ್ಮಜಾಗೃತಿ ಮೂಡಿಸಿದರು. ಹಲವು ಪವಾಡಗಳನ್ನು ಮಾಡಿದವರು ಎಂಬ ಪ್ರತೀತಿ ಇದೆ. ಹೀಗೆ ಪವಾಡಗಳ ಮೂಲಕವೇ ಜನಮಾನಸದಲ್ಲಿ ಅಚ್ಚಾಗಿರುವ ಗೋಣಿಬಸವೇಶ್ವರರ ರಥೋತ್ಸವ ಪ್ರತಿವರ್ಷವೂ ಅದ್ಧೂರಿಯಾಗಿ ನಡೆಯುತ್ತದೆ. ಸಾವಿರಾರು ಜನರು ರಥೋತ್ಸವದಲ್ಲಿ ಪಾಲ್ಗೊಳ್ಳುತ್ತಾರೆ. ದೇವರಿಗೆ ಹರಕೆ ತೀರಿಸುವ ಮೂಲಕ ಭಕ್ತಿ ಮೆರೆಯುತ್ತಾರೆ.
ಇದನ್ನೂ ಓದಿ: Grama Deviya Jatre: ಯಲ್ಲಾಪುರ ಶ್ರೀ ಗ್ರಾಮ ದೇವಿಯರ ಜಾತ್ರೆಗೆ ಚಾಲನೆ; ಜನಸಾಗರದ ಮಧ್ಯೆ ಅಕ್ಕ ತಂಗಿಯರ ಆಗಮನ