Site icon Vistara News

Kumta News: 1.36 ಲಕ್ಷ ರೂ. ನಗದು, 30 ಗ್ರಾಂ ಚಿನ್ನಾಭರಣವಿದ್ದ ಬ್ಯಾಗ್ ಮರಳಿಸಿದ ಆಟೋ ಚಾಲಕ

Auto Driver Honesty kumta

#image_title

ಕುಮಟಾ: ಪಟ್ಟಣದ ರೈಲ್ವೆ ನಿಲ್ದಾಣದಲ್ಲಿ ಲಕ್ಷಾಂತರ ರೂ. ನಗದು ಮತ್ತು ಚಿನ್ನಾಭರಣವಿರುವ ಬ್ಯಾಗ್‌ ಅನ್ನು ಕಳೆದುಕೊಂಡ ಪ್ರಯಾಣಿಕರಿಗೆ ಆಟೋ ಚಾಲಕರೊಬ್ಬರು ಮರಳಿಸುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ.

ಬಗ್ಗೋಣದ ವಾಸುದೇವ ಜಟ್ಟಿ ನಾಯ್ಕ ಪ್ರಾಮಾಣಿಕತೆ ಮೆರೆದ ಆಟೋ ಚಾಲಕ. ಮೂಲತಃ ರಾಜಸ್ಥಾನದವರಾದ ಗಂಗಾ ಮತ್ತು ರಮೇಶ ಪುರೋಹಿತ್ ದಂಪತಿಯು ರಾಜಸ್ಥಾನದಿಂದ ಕುಮಟಾಕ್ಕೆ ರೈಲ್ಲಿನಲ್ಲಿ ಆಗಮಿಸಿದ್ದರು. ರೈಲು ಇಳಿದು ಮನೆಗೆ ತೆರಳುವಾಗ ಲಕ್ಷಾಂತರ ರೂ. ನಗದು ಮತ್ತು ಚಿನ್ನಾಭರಣವಿರುವ ಬ್ಯಾಗ್‌ ಅನ್ನು ಗಮನಿಸದೇ ನಿಲ್ದಾಣದಲ್ಲಿಯೇ ಬಿಟ್ಟು ಹೋಗಿದ್ದಾರೆ. ಇದನ್ನು ಗಮನಿಸಿದ ಆಟೋ ಚಾಲಕ ವಾಸುದೇವ ಅವರು ಆ ಬ್ಯಾಗ್‌ ಅನ್ನು ತೆಗೆದುಕೊಂಡು ಹೋಗಿ ರೈಲ್ವೆ ಪೊಲೀಸರಿಗೆ ಒಪ್ಪಿಸಿದ್ದರು. ಬ್ಯಾಗ್ ಪರಿಶೀಲಿಸಿದ ರೈಲ್ವೆ ಪೊಲೀಸರಿಗೆ ಅದರಲ್ಲಿ 1.36 ಲಕ್ಷ ರೂ. ನಗದು ಮತ್ತು 30 ಗ್ರಾಂ ಚಿನ್ನಾಭರಣ ಇರುವುದು ಕಂಡುಬಂದಿದೆ. ಆ ಬ್ಯಾಗ್‌ ಅನ್ನು ತಕ್ಷಣ ಕುಮಟಾ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ. ಪೊಲೀಸರು ಬ್ಯಾಗ್‌ ಅನ್ನು ವಾರಸುದಾರರಿಗೆ ಮರಳಿಸಿದ್ದಾರೆ.

ಇದನ್ನೂ ಓದಿ: Azan at DC office: ಜಿಲ್ಲಾಧಿಕಾರಿ ಕಚೇರಿಯಲ್ಲಿ ಆಜಾನ್‌; ಬಜರಂಗದಳ ಪ್ರತಿಭಟನೆ, ಗೋಮೂತ್ರ ಸಿಂಪಡನೆ

ಆಟೋ ಚಾಲಕನ ಪ್ರಾಮಾಣಿಕತೆ ಮೆಚ್ಚಿದ ರಾಜಸ್ಥಾನಿ ವಿಷ್ಣು ಸಮಾಜದ ಪ್ರಮುಖರು ಅವರನ್ನು ಸನ್ಮಾನಿಸಿ, ಕೃತಜ್ಞತೆ ಸಲ್ಲಿಸಿದರು. ಅಲ್ಲದೇ ಆಟೋ ಚಾಲಕನ ಈ ಪ್ರಾಮಾಣಿಕ ಕಾರ್ಯ ಸಾರ್ವಜನಿಕರ ಪ್ರಶಂಸೆಗೂ ಕಾರಣವಾಗಿದೆ. ಈ ಸಂದರ್ಭದಲ್ಲಿ ರಾಜಸ್ಥಾನಿ ವಿಷ್ಣು ಸಮಾಜದ ಕುಮಟಾ ಅಧ್ಯಕ್ಷ ವೀರಂ ರಾಮ ಪಟೇಲ್, ಪ್ರಮುಖರಾದ ಪರೇಶ ಪರಂ, ಎಸ್ ಆರ್ ಪಟೇಲ್, ವಗ್ತಾರಾಮ್ ಪಟೇಲ್, ಇತರರು ಇದ್ದರು.

Exit mobile version