Site icon Vistara News

Kuvempu Birthday : ಡಿ.29ರಂದು ಕುವೆಂಪು ಜನ್ಮದಿನ; ಕಸಾಪದಲ್ಲಿ ನವೀಕೃತ ಕುವೆಂಪು ಸಭಾಂಗಣ ಉದ್ಘಾಟನೆ

Renovated Kuvempu Hall Inaugurated At Kannada Sahitya Parishat

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ (kannada sahitya parishat) ಬಹು ವರ್ಷಗಳ ಕಾಲ ಶಿಥಿಲಗೊಂಡಿದ್ದ ಕುವೆಂಪು ಸಭಾಂಗಣವನ್ನು ನವೀಕೃತ (Kuvempu Hall) ಮಾಡಲಾಗಿದೆ. ಕನ್ನಡ ನಾಡಿಗೆ ಮೊದಲ ಜ್ಞಾನಪೀಠ ಪುರಸ್ಕಾರವನ್ನು ತಂದುಕೊಟ್ಟ ಕುವೆಂಪು ಅವರ (Kuvempu birthday) ಜನ್ಮದಿನದ ಅಂಗವಾಗಿ ನವೀಕೃತ ಕುವೆಂಪು ಸಭಾಂಗಣವನ್ನು ಲೋಕಾರ್ಪಣೆ ಗೊಳಿಸಲಾಗುತ್ತಿದೆ.

ರಾಮಾಯಣ ದರ್ಶನಂ ಮಹಾಕಾವ್ಯವನ್ನು ಕನ್ನಡ ನಾಡಿಗೆ ನೀಡಿ, ಯುಗದ ಕವಿ ಜಗದಕವಿ ರಸಋಷಿ ವಿಶ್ವಮಾನವ ಸಂದೇಶವನ್ನು ಸಾರಿದ ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪರವರ ಜನ್ಮದಿನದ ಅಂಗವಾಗಿ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಕಾರ್ಯಕ್ರಮ ನಡೆಯಲಿದೆ. ಬಹು ವರ್ಷಗಳ ಕಾಲ ಕುವೆಂಪು ಸಭಾಂಗಣವು ಶಿಥಿಲವಾಗಿತ್ತು, ಹೊಸ ಕನಸುಗಳೊಂದಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ ಮಹೇಶ್ ಜೋಶಿಯವರ ಹೊಸ ಪರಿಕಲ್ಪನೆಯೊಂದಿಗೆ ಕುವೆಂಪು ಸಭಾಂಗಣವು ನವೀಕೃತಗೊಂಡಿದೆ.

ನಾಳೆ ಶುಕ್ರವಾರ ಡಿ.29ರಂದು ಬೆಳಗ್ಗೆ 10ಗಂಟೆಗೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ ನಾರಾಯಣಗೌಡ ಆಗಮಿಸಲಿದ್ದಾರೆ. ಎಲ್ಲಾ ಕಾರ್ಯಕ್ರಮಗಳ ಅಧ್ಯಕ್ಷತೆಯನ್ನು ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ. ಮಹೇಶ್ ಜೋಶಿ ಅವರು ವಹಿಸಲಿದ್ದಾರೆ.

ಕುವೆಂಪು ಅವರ ಚಿಂತನೆಗಳನ್ನು ದಿನವಿಡಿ ವಿವಿಧ ಕಾರ್ಯಕ್ರಮಗಳ ಮೂಲಕ ಕುವೆಂಪು ಅವರ ಜನ್ಮ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಖ್ಯಾತ ಗಮಕಿಗಳಾದ ಎಂ ಆರ್‌ ಸತ್ಯನಾರಾಯಣರಿಂದ ಶ್ರೀ ರಾಮಾಯಣ ದರ್ಶನಂ ಮಹಾಕಾವ್ಯದಿಂದ ಗಮಕ ಇರಲಿದೆ. ಕುವೆಂಪು ಸಭಾಂಗಣ ಉದ್ಘಾಟನೆ ಕಾರ್ಯಕ್ರಮದ ನಂತರ, ಕುವೆಂಪು ಕುರಿತು ವಿಶೇಷ ಉಪನ್ಯಾಸ ಇರಲಿದೆ. ಕುವೆಂಪು ಕವಿತಾ ವಾಚನ, ಕುವೆಂಪು ಗೀತ ಗಾಯನ ಇರಲಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version