Site icon Vistara News

KUWJ Conference: 37ನೇ ರಾಜ್ಯ ಪತ್ರಕರ್ತರ ಸಮ್ಮೇಳನ; ರಾಜ್ಯಮಟ್ಟದ ಪ್ರಶಸ್ತಿ ಸ್ವೀಕರಿಸಿದ ವಿಸ್ತಾರ ನ್ಯೂಸ್‌ನ ಮಾರುತಿ ಪಾವಗಡ

KUWJ Conference

#image_title

ವಿಜಯಪುರ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ (ಕೆಯುಡಬ್ಲ್ಯುಜೆ) (KUWJ Conference) ನಗರದ ಶ್ರೀ ಕಂದಗಲ್ ಹಣಮಂತರಾಯ ರಂಗಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ 37ನೇ ರಾಜ್ಯ ಪತ್ರಕರ್ತರ ಸಮ್ಮೇಳನದಲ್ಲಿ ವಿದ್ಯುನ್ಮಾನ ವಿಭಾಗದ ವರದಿಗಾರಿಕೆಗೆ ವಿಸ್ತಾರ ನ್ಯೂಸ್ ರಾಜಕೀಯ ಬ್ಯೂರೋ ಮುಖ್ಯಸ್ಥ ಮಾರುತಿ ಪಾವಗಡ ಸೇರಿದಂತೆ ಹಲವು ಪತ್ರಕರ್ತರಿಗೆ ರಾಜ್ಯಮಟ್ಟದ ಪ್ರಶಸ್ತಿ ಪ್ರದಾನ ಮಾಡಿ ಸನ್ಮಾನಿಸಲಾಯಿತು.

ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ ಹಾಗೂ ಇನ್ನಿತರ ಗಣ್ಯರು ರಾಜ್ಯಮಟ್ಟದ ಪ್ರಶಸ್ತಿಯನ್ನು ಪ್ರತ್ರಕರ್ತರಿಗೆ ಪ್ರದಾನ ಮಾಡಿದರು. ಅತ್ಯಂತ ಕಿರಿಯ ವಯಸ್ಸಿ‌ನಲ್ಲಿ ಮಾರುತಿ ಪಾವಗಡ ಅವರು, ನಿಖರ ಹಾಗೂ ಜನಪರ ಮಾತ್ರವಲ್ಲದೆ, ನಿಷ್ಠುರ ವರದಿಗಾರಿಕೆ ಮಾಡುವ ಮುಖೇನ, ವಿಸ್ತಾರ ನ್ಯೂಸ್ ಮಾತ್ರವಲ್ಲದೇ ತಾವು ಕಾರ್ಯ ನಿರ್ವಹಿಸಿದ ನಿಕಟಪೂರ್ವ ಸಂಸ್ಥೆಗಳಲ್ಲಿ ಸಹ ಉತ್ತಮ ವರದಿಗಾರರಾಗಿ ಗಮನ ಸೆಳೆದಿದ್ದಾರೆ. ಈ ನಿಟ್ಟಿನಲ್ಲಿ ಇವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿತ್ತು.

ಮಾರುತಿ ಪಾವಗಡ

ಸಮ್ಮೇಳನದ ಮೊದಲ ದಿನ ಶನಿವಾರ, ಸಿಎಂ ಬಸವರಾಜ ಬೊಮ್ಮಾಯಿ ಅವರು ಸಮ್ಮೇಳನಕ್ಕೆ ಚಾಲನೆ ದೊರಕಿತು. ಎರಡನೇ ದಿನ ಭಾನುವಾರ ವಿವಿಧ ಗೋಷ್ಠಿಗಳು, ಪ್ರಶಸ್ತಿ ಪ್ರದಾನ ಹಾಗೂ ಸಮಾರೋಪ ಸಮಾರಂಭ ನಡೆಯಿತು. ಸಮಾರಂಭದಲ್ಲಿ ಕೆಯುಡಬ್ಲ್ಯುಜೆ ಅಧ್ಯಕ್ಷ ಶಿವಾನಂದ ತಗಡೂರು, ಶಾಸಕ ಶಿವಾನಂದ ಪಾಟೀಲ್, ಮಾಜಿ ಶಾಸಕ ವಿಠ್ಠಲ ಕಟಕದೋಂಡ, ವಿಜಯಪುರ ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ, ಕಾಂಗ್ರೆಸ್ ಮುಖಂಡರಾದ ಪ್ರಕಾಶ ರಾಠೋಡ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಹಾಸೀಂಪೀರ ವಾಲಿಕಾರ, ಮುಖಂಡರಾದ ಅಬ್ದುಲ್ ಹಮೀದ್ ಮುರ್ಷ್ರೀಫ್, ಟಪಾಲ್ ಇಂಜಿನೀಯರ್ ಇನ್ನಿತರರು ಉಪಸ್ಥಿತರಿದ್ದರು.

ಇದನ್ನೂ ಓದಿ | ರಾಜ ಮಾರ್ಗ ಅಂಕಣ : ವಾಣಿ ಜಯರಾಂ ಇನಿದನಿಯ ಮಹಾನ್‌ ಗಾಯಕಿ ಅಷ್ಟೇ ಅಲ್ಲ; ಕವಯಿತ್ರಿ, ಸಂಗೀತ ಚಿಕಿತ್ಸಕಿ ಕೂಡಾ ಆಗಿದ್ದರು!

ಮಾಜಿ‌ ಸಚಿವ,‌ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್ ಮಾತನಾಡಿ, ವಿಜಯಪುರ ಬಸವಣ್ಣನವರಿಗೆ ಜನ್ಮ ನೀಡಿದ ಭೂಮಿ. ಕಾಯಕ ಮತ್ತು ದಾಸೋಹದ ತತ್ವಗಳನ್ನು ನಮ್ಮ ಜಿಲ್ಲೆ ಹೊಂದಿದೆ. ಜಿಲ್ಲೆಗೆ ತನ್ನದೇ ಆದ ಇತಿಹಾಸ ಇದೆ. ಡಾ. ಫ.ಗು. ಹಳಕಟ್ಟಿ ಅವರ ಬಗ್ಗೆ ಜಾಸ್ತಿ ಗೊತ್ತಿರಲಿಲ್ಲ. 1924ರ ವೇಳೆಯಲ್ಲಿ 35ವರ್ಷ ನವ ಕರ್ನಾಟಕ, ಹಾಗೂ 24 ವರ್ಷ ಶಿವಾನುಭವ ಮಾಸ ಪತ್ರಿಕೆ ನಡೆಸಿದ್ದಾರೆ. ಇದಕ್ಕಾಗಿ ಅವರು ತಮ್ಮ ಮನೆಯನ್ನು ಮಾರಾಟ ಮಾಡಿದ್ದರು. ಬಸವ ತತ್ವಗಳು, ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆ ನೀಡಿದ್ದಾರೆ. ಫ.ಗು. ಹಳಕಟ್ಟಿ ಅವರು ಇರದಿದ್ದರೆ ಬಸವಾದಿ ಶರಣರ ಬಗ್ಗೆ ಗೊತ್ತಾಗುತ್ತಿರಲಿಲ್ಲ ಎಂದು ಹೇಳಿದರು.

ಪ್ರಜಾಪ್ರಭುತ್ವಕ್ಕೆ ಶಾಸಕಾಂಗ, ನ್ಯಾಯಾಂಗ, ಕಾರ್ಯಾಂಗ, ಪತ್ರಿಕಾರಂಗ ನಾಲ್ಕು ಆಧಾರ ಸ್ಥಂಭಗಳಾಗಿವೆ. ಇಂದು ಈ ಅಂಗಗಳು ಸರಿಯಾಗಿ ಉಳಿದಿಲ್ಲ ಎಂದು ಸರಳವಾಗಿ ಮಾತನಾಡಬಹುದು. ಬದ್ಧತೆಯನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯಬೇಕು. ರಾಜಕೀಯ, ಅಧಿಕಾರಿ ವರ್ಗ, ಪತ್ರಿಕೆಗಳಲ್ಲೂ ಒಳ್ಳೆಯವರು ಕೆಟ್ಟವರು ಇಬ್ಬರೂ ಇದ್ದೇ ಇರುತ್ತಾರೆ. ಅದರಂತೆ ಪತ್ರಿಕಾ ರಂಗದಲ್ಲಿ ಬಹಳಷ್ಟು ಒಳ್ಳೆಯವರಿದ್ದಾರೆ. ಒಬ್ಬ ಸಚಿವರು ಶನಿವಾರ ಇಲ್ಲಿ ಬಂದು ಬೇರೆ ವಿಚಾರ ಮಾತನಾಡಿದ್ದಾರೆ. ಅವರಿಗೆ ಮಾತನಾಡುವ ಚಪಲ‌ ಇದೆ, ನಾನು ಅವರ ಹೆಸರು ಹೇಳುವುದಿಲ್ಲ. ಇಲ್ಲಿ ಬಂದು ಸಮಸ್ಯೆಗಳ ಬಗ್ಗೆ ಮಾತಾಡಬೇಕಿತ್ತು, ರಾಜಕೀಯ ಮಾತನಾಡಬಾರದು ಎಂದರು.

ಮಾಜಿ ಸಚಿವ, ಶಾಸಕ ಶಿವಾನಂದ ಪಾಟೀಲ್ ಮಾತನಾಡಿ, ವಿಜಯಪುರದಲ್ಲಿ ಸಮ್ಮೇಳನ ಆಯೋಜಿಸಿರುವುದು ಬಹಳ ಸಂತೋಷ. ಇಲ್ಲಿ ಕಾರ್ಯಕ್ರಮ ಮಾಡುವುದು ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಅವರ ತಂಡಕ್ಕೆ ಸವಾಲಾಗಿತ್ತು. ಅದನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ, ಅವರಿಗೆ ಅಭಿನಂದನೆಗಳು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಇದನ್ನೂ ಓದಿ | India Post GDS Recruitment 2023 : ಅಂಚೆ ಇಲಾಖೆಯಲ್ಲಿ 40,889 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ, ವಿದ್ಯಾರ್ಹತೆ ಎಸ್ಸೆಸ್ಸೆಲ್ಸಿ

ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ನೀವು ನಾಲ್ಕನೇ ಅಂಗವಾಗಿ ಕೆಲಸ ಮಾಡುತ್ತಿದ್ದೀರಿ. ಸರ್ಕಾರ ಸಂದಿಗ್ಧ ಸ್ಥಿತಿ ತಂದರೂ ಎದೆಗಾರಿಕೆಯಿಂದ ವರದಿ ಮಾಡುವ ಪತ್ರಕರ್ತರು ಇದ್ದಾರೆ. ಸಮಾಜದ, ಪ್ರಜಾಪ್ರಭುತ್ವದ ವ್ಯವಸ್ಥೆಗೆ ಮಾರಕ ಆಗದಂತೆ ಸಮಯೋಚಿತ ನಿರ್ಧಾರ ತೆಗೆದುಕೊಳ್ಳುತ್ತೀರಿ ಎಂಬ ಭರವಸೆ ಇದೆ. ನಾವೆಲ್ಲ ರಾಜಕೀಯ ಪಕ್ಷದವರು ಒಂದೆಡೆ ಬರಬೇಕಾದರೆ ಪತ್ರಕರ್ತರು ಕಾರಣ. ಶನಿವಾರ ಬಿಜೆಪಿ, ಭಾನುವಾರ ಕಾಂಗ್ರೆಸ್‌ನವರನ್ನು ತಂದಿರಿ. ಹಾಗೆ ಮಾಡಬೇಡಿ, ಸಾಧ್ಯವಾದರೆ ಎಲ್ಲ ಪಕ್ಷದ ರಾಜಕಾರಣಿಗಳನ್ನು ಕೂಡಿಸಿ ಎಂದು ನಗೆ ಚಟಾಕಿ ಹಾರಿಸಿದರು.

Exit mobile version